ಮಾತೃ ಮಡಿಲಿನ ವಾತಾವರಣ ಸೃಷ್ಟಿಸಿದ ಸಿದ್ಧಗಂಗಾ ಶ್ರೀ

| Published : Apr 06 2024, 12:46 AM IST

ಮಾತೃ ಮಡಿಲಿನ ವಾತಾವರಣ ಸೃಷ್ಟಿಸಿದ ಸಿದ್ಧಗಂಗಾ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಶಿವಕುಮಾರ ಸ್ವಾಮೀಜಿ ವ್ಯಕ್ತಿತ್ವವನ್ನು ಪರಿಚಯಿಸುವುದು ಸೂರ್ಯನನ್ನು ಲೋಕಕ್ಕೆ ಪರಿಚಯಿಸಿದ ಹಾಗೆ. ಇವರದು ಜಗಜ್ಯೋತಿ ಬಸವೇಶ್ವರರ ವ್ಯಕ್ತಿತ್ವಕ್ಕೆ ಸಮಾನ ಎಂದು ಬಸವಕಲ್ಯಾಣ ಮಠದ ಸದಾಶಿವ ಸ್ವಾಮೀಜಿ ತಿಳಿಸಿದರು.

ದೊಡ್ಡಬಳ್ಳಾಪುರ: ಶಿವಕುಮಾರ ಸ್ವಾಮೀಜಿ ವ್ಯಕ್ತಿತ್ವವನ್ನು ಪರಿಚಯಿಸುವುದು ಸೂರ್ಯನನ್ನು ಲೋಕಕ್ಕೆ ಪರಿಚಯಿಸಿದ ಹಾಗೆ. ಇವರದು ಜಗಜ್ಯೋತಿ ಬಸವೇಶ್ವರರ ವ್ಯಕ್ತಿತ್ವಕ್ಕೆ ಸಮಾನ ಎಂದು ಬಸವಕಲ್ಯಾಣ ಮಠದ ಸದಾಶಿವ ಸ್ವಾಮೀಜಿ ತಿಳಿಸಿದರು.ಇಲ್ಲಿನ ಶ್ರೀ ಮದ್ ದಾಸೋಹ ಸಂಸ್ಥಾನ ಜಗದ್ಗುರು ಬಸವೇಶ್ವರ ಮಹಾಮಠ, ಶ್ರೀ ಕ್ಷೇತ್ರ ಬಿಲ್ವವನದಲ್ಲಿ ಡಾ.ಶಿವಕುಮಾರ ಮಹಾಸ್ವಾಮೀಜಿಯವರ 117 ವರ್ಷದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಗಳು ಗುರು ಪರಂಪರೆಯ ಅನ್ನದಾಸೋಹ ಮತ್ತು ವಿದ್ಯಾ ದಾಸೋಹಕ್ಕೆ ಕ್ರಿಯಾತ್ಮಕವಾದ ಹೊಸ ಭಾಷ್ಯ ಬರೆದು ತನು ಮನ ಧನ ದಾಸೋಹಕ್ಕೆ ಸವೆದು ಶರಣರ ದಾಸೋಹದಲ್ಲಿ ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ, ಸುಖಿಸಿ ಪರಿಣಮಿಸುವಂತೆ ಮಾಡಿದ ಕೀರ್ತಿ ಡಾ. ಶಿವಕುಮಾರ ಸ್ವಾಮಿಗಳಿಗೆ ಸೇರುತ್ತದೆ ಎಂದು ಬಣ್ಣಿಸಿದರು.

ಶಿವಕುಮಾರ ಸ್ವಾಮಿಗಳು ಸಮಸ್ತ ಜನತೆಯಲ್ಲಿ ಶರಣ ಭಾವ ಮೂಡಿಸಿ ನಿತ್ಯ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ, ಯಾತ್ರಾರ್ಥಿಗಳಿಗೆ ಮಹಾ ದಾಸೋಹ ಸೇವೆಯನ್ನು ನೀಡಿ ಅನವರತ ಮುಂದುವರಿಯುವಂತೆ ಹರಸಿದ್ದಾರೆ. ನಂಬಿ ಬಂದ ಭಕ್ತರಿಗೆ, ವಿದ್ಯಾರ್ಥಿಗಳಿಗೆ ಮಾತೃ ಮಡಿಲಿನ ವಾತಾವರಣ ಸೃಷ್ಟಿಸಿ ಬಡತನ, ಅನಕ್ಷರತೆಯನ್ನು ಹೋಗಲಾಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಶಿವಗಂಗಾ ಕ್ಷೇತ್ರದ ಹೊನ್ನಮ್ಮ ಗವಿಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಪಾದಪೂಜೆ ನಡೆಯಿತು. ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜಯ್ಯ, ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ವಿಭಾಗದ ಜಿಲ್ಲಾ ಘಟಕದ ಲತಾ ಆರಾಧ್ಯ, ರೇಣುಕಾ ಬಸವರಾಜು, ಕಲಾವಿದರ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಹಾಲಿಂಗಯ್ಯ, ಯುವ ಘಟಕದ ನಾಗಸಂದ್ರ ಲೋಕೇಶ್, ಮಲ್ಲಾತಹಳ್ಳಿ ರಮೇಶ್, ವೀರಶೈವ ಲಿಂಗಾಯತ ಮುಖಂಡರಾದ ಮೃತ್ಯುಂಜಯ, ಭವ್ಯ ಆನಂದ್, ರುದ್ರೇಶ್, ಮಹದೇವಪ್ಪ ಉಪಸ್ಥಿತರಿದ್ದರು. 5ಕೆಡಿಬಿಪಿ3-

ದೊಡ್ಡಬಳ್ಳಾಪುರದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳ 117ನೇ ಜಯಂತ್ಯುತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.