ಸಾರಾಂಶ
ಶೋಷಿತ ವರ್ಗಗಳ ಧ್ವನಿಯಾಗಿದ್ದ ಬಾಬು ಜಗಜೀವನ್ ರಾಮ್ ಕೇಂದ್ರ ಸರ್ಕಾರದಲ್ಲಿ ಉಪ ಪ್ರಧಾನಮಂತ್ರಿಯಾಗಿ ಹಸಿರು ಕ್ರಾಂತಿಯ ಹರಿಕಾರರಾಗಿದ್ದರು. ಇವರ ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಇಂತಹ ಮಹಾನ್ ನಾಯಕರ ಜಯಂತಿಗೆ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಲ್ಲ.
ಕನ್ನಡಪ್ರಭ ವಾರ್ತೆ ಮುಳಬಾಗಿಲುಮಾಜಿ ಪ್ರಧಾನ ಮಂತ್ರಿ ಬಾಬು ಜಗಜೀವನ್ ರಾಮ್ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ದಲಿತ ಸಮುದಾಯಕ್ಕೆ ಎರಡು ಕಣ್ಣುಗಳಿದ್ದಂತೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಅಭಿಪ್ರಾಯಪಟ್ಟರು.ನಗರದ ತಾಪಂ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬಾಬು ಜಗಜೀವನ್ ರಾಮ್ ಹಸಿರು ಕ್ರಾಂತಿಯ ಹರಿಕಾರರಾದರೆ, ಅಂಬೇಡ್ಕರ್ ಸಂವಿಧಾನ ಶಿಲ್ಪಿ ಹಾಗೂ ಹೋರಾಟ ನಮ್ಮ ಹಕ್ಕೆಂದು ಹೇಳಿ ಕೊಟ್ಟವರು ಎಂದರು.
ಅಸ್ಪೃಶ್ಯತೆ ನಿರ್ಮೂಲನೆಗೆ ಹೋರಾಟಅಸ್ಪೃಶ್ಯತೆ ನಿರ್ಮೂಲನೆಗೆ ಈ ಇಬ್ಬರು ಮಹಾ ನಾಯಕರು ಹೋರಾಟದ ಮೂಲಕ ದಲಿತ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆಂದು ಸ್ಮರಿಸಿದ ಅವರು, ಇಂತಹ ಮಹಾನ್ ನಾಯಕರ ಜಯಂತಿ ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಲ್ಲ ಬೆರಳೆಣಿಕೆ ಎಷ್ಟು ಮಾತ್ರ ಬಂದಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.ತಹಸೀಲ್ದಾರ್ ವಿ.ಗೀತಾ ಮಾತನಾಡಿ, ಶೋಷಿತ ವರ್ಗಗಳ ಧ್ವನಿಯಾಗಿದ್ದ ಬಾಬು ಜಗಜೀವನ್ ರಾಮ್ ಕೇಂದ್ರ ಸರ್ಕಾರದಲ್ಲಿ ಉಪ ಪ್ರಧಾನಮಂತ್ರಿಯಾಗಿ ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆಂದು ಕೊಂಡಾಡಿದರಲ್ಲದೆ ಇವರ ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.ತಾಪಂ ಇಓ ಡಾ.ಕೆ.ಸರ್ವೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭುವಿನ್, ತಾಪಂ ಮಾಜಿ ಅಧ್ಯಕ್ಷ ಕಸುವು ಎಂ.ವೆಂಕಟರಮಣ, ಗೊಡಗು ನಾರಾಯಣಪ್ಪ, ಮಾದಿಗ ದಂಡೋರ ತಾಲೂಕ ಅಧ್ಯಕ್ಷ ಮೋತಕಪಲ್ಲಿ ಸತೀಶ್, ವಕೀಲ ಎಂ.ಎಸ್.ಕೃಷ್ಣಮೂರ್ತಿ, ಸಂಗಸಂದ್ರ ವಿಜಯ್ ಕುಮಾರ್, ಮೆಕ್ಯಾನಿಕ್ ಶ್ರೀನಿವಾಸ್, ಕೀಲುಹೊಳಲಿ ಸತೀಶ್, ಗೊಲ್ಲಹಳ್ಳಿ ವೆಂಕಟೇಶ್, ಮಲ್ಲೆಕೊಪ್ಪ, ಅಂಬರೀಶ್, ಗುಜ್ಜ ಮಾರಂಡಹಳ್ಳಿ ಜಗದೀಶ್ ಮತ್ತಿತರರು ಇದ್ದರು.