ಮುಡಾ ಹಗರಣ- ಲೋಕಾ ವಿಚಾರಣೆ ಎದುರಿಸಿದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ

| Published : Jan 03 2025, 12:31 AM IST

ಮುಡಾ ಹಗರಣ- ಲೋಕಾ ವಿಚಾರಣೆ ಎದುರಿಸಿದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ವಿಚಾರಣೆ ಬಳಿಕ ಹೊರ ಬಂದ ಇಬ್ಬರು ಮಾಜಿ ಶಾಸಕರು, ವಿಚಾರಣೆ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 50:50 ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಗುರುವಾರ ಬಿಜೆಪಿಯ ಮಾಜಿ ಸಚಿವ ಎಸ್.ಎ. ರಾಮದಾಸ್, ಮಾಜಿ ಶಾಸಕ ಹಾಗೂ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಅವರನ್ನು ವಿಚಾರಣೆ ನಡೆಸಿದರು.ಮುಡಾ ಹಗರಣ ಸಂಬಂಧ ಲೋಕಾಯುಕ್ತ ಪೊಲೀಸರು ನೀಡಿದ ನೋಟಿಸ್ ಹಿನ್ನೆಲೆಯಲ್ಲಿ ಗುರುವಾರ ಎಸ್.ಎ. ರಾಮದಾಸ್ ಮತ್ತು ಎಲ್. ನಾಗೇಂದ್ರ ಅವರು ವಿಚಾರಣೆಗೆ ಹಾಜರಾಗಿದ್ದರು. ಲೋಕಾಯುಕ್ತ ಮೈಸೂರು ಎಸ್ಪಿ ಟಿ.ಜೆ. ಉದೇಶ ನೇತೃತ್ವದಲ್ಲಿ ಅಧಿಕಾರಿಗಳ ತಂಡವು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆ ಸಂಬಂಧ ಇಬ್ಬರು ಮಾಜಿ ಶಾಸಕರಿಂದ ಅಗತ್ಯ ಮಾಹಿತಿ ಸಂಗ್ರಹಿಸಿದರು.ಎಸ್.ಎ. ರಾಮದಾಸ್ ಅವರು ಗುರುವಾರ ಮಧ್ಯಾಹ್ನ 3ಕ್ಕೆ ವಿಚಾರಣೆಗೆ ಹಾಜರಾಗಿ, ಸಂಜೆ 5 ಗಂಟೆಗೆ ಹಿಂದಿರುಗಿದರು. ಅದೇ ರೀತಿ ಮಾಜಿ ಶಾಸಕ ಎಲ್. ನಾಗೇಂದ್ರ ಅವರು ಸಂಜೆ 5ಕ್ಕೆ ವಿಚಾರಣೆ ಹಾಜರಾಗಿ 7 ಗಂಟೆಯ ಹೊತ್ತಿಗೆ ಹಿಂದಿರುಗಿದರು. ವಿಚಾರಣೆ ಬಳಿಕ ಹೊರ ಬಂದ ಇಬ್ಬರು ಮಾಜಿ ಶಾಸಕರು, ವಿಚಾರಣೆ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.ಸಿಎಂ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ನೀಡುವ ಸಂಬಂಧ ಮುಡಾ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯ ಸಂದರ್ಭದಲ್ಲಿ ಎಸ್.ಎ. ರಾಮದಾಸ್ ಮತ್ತು ಎಲ್. ನಾಗೇಂದ್ರ ಅವರು ಮುಡಾ ಸದಸ್ಯರಾಗಿದ್ದರು. ಹೀಗಾಗಿ, ಇಬ್ಬರನ್ನು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದರು. ನೋಟಿಸ್ ಹಿನ್ನಲೆಯಲ್ಲಿ ಇಬ್ಬರೂ ವಿಚಾರಣೆ ಎದರಿಸಿದರು.ಎಲ್. ನಾಗೇಂದ್ರ ಲೋಕಾಯುಕ್ತ ಕಚೇರಿ ಪ್ರವೇಶಿಸುತ್ತಿದ್ದಂತೆ, ವಿಚಾರಣೆ ಮುಗಿಸಿಕೊಂಡು ಹೊರ ಬಂದ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರು ಮುಖಾಮುಖಿಯಾದರು. ಈ ವೇಳೆ ಇಬ್ಬರು ಕೆಲಕಾಲ ಪರಸ್ಪರ ಮಾತುಕತೆ ನಡೆಸಿದರು.-ನಾನು ಮುಡಾ ವಿಚಾರವಾಗಿ ಹಿಂದೆಯೂ ಕಾಮೆಂಟ್ ಮಾಡಿಲ್ಲ. ಈಗಲೂ ಕಾಮೆಂಟ್ ಮಾಡುವುದಿಲ್ಲ. ನೋ ರಿಯಾಕ್ಷನ್.- ಎಸ್.ಎ. ರಾಮದಾಸ್, ಮಾಜಿ ಸಚಿವರು