ಸಿದ್ಧೇಶ್ವರ ಸಂಸ್ಥೆಯ ಸಂಕ್ರಮಣದ ಮಹೋತ್ಸವ ಅಂಗವಾಗಿ ನಗರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಭಾರ ಎತ್ತುವ ಸ್ಫರ್ಧೆ ಪ್ರಾರಂಭವಾಗಿ ಸುಮಾರು 90 ಜನ ಭಾರ ಎತ್ತುವ ಪಟುಗಳು ಭಾಗವಹಿಸಿದ ವಿಜೇತರಿಗೆ ಜಾತ್ರಾ ಸಮಿತಿಯ ವತಿಯಿಂದ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿದ್ಧೇಶ್ವರ ಸಂಸ್ಥೆಯ ಸಂಕ್ರಮಣದ ಮಹೋತ್ಸವ ಅಂಗವಾಗಿ ನಗರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಭಾರ ಎತ್ತುವ ಸ್ಫರ್ಧೆ ಪ್ರಾರಂಭವಾಗಿ ಸುಮಾರು 90 ಜನ ಭಾರ ಎತ್ತುವ ಪಟುಗಳು ಭಾಗವಹಿಸಿದ ವಿಜೇತರಿಗೆ ಜಾತ್ರಾ ಸಮಿತಿಯ ವತಿಯಿಂದ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಸನ್ಮಾನಿಸಲಾಯಿತು. ಸಂಗ್ರಾಣಿ ಕಲ್ಲು ಎತ್ತುವುದು, ಭಾರ ಎತ್ತುವುದು,‌ ಒತ್ತಕಲ್ಲ ಎತ್ತುವ ಸ್ಫರ್ಧೆ, ಮಿಸೆಗೆ ಹಗ್ಗ ಕಟ್ಟಿಕೊಂಡು ಕಲ್ಲು ಎತ್ತುವುದು, ಉಸುಕಿನ ಚೀಲದ ಭಾರ ಎತ್ತುವುದು, ತೇಕ್ಕಿ ಬಡಿದು ಚೀಲ ಭಾರ ಎತ್ತುವ ಸ್ಫರ್ಧೆ, ಹಲ್ಲಿನಿಂದ ಹಾರಿ ಎತ್ತುವುದು, ಸಂಗ್ರಾಣಿ ಕಲ್ಲ ಎತ್ತುವುದು, ಹಲ್ಲಿನಿಂದ 50ಕೆಜಿ ಎತ್ತುವುದು, ಸಂಗ್ರಾಣಿ ಕಲ್ಲು ಎತ್ತುವುದು ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಚೇರಮನ್‌ ಬಸಯ್ಯ ಹಿರೇಮಠ, ಕಾರ್ಯದರ್ಶಿ ಸದಾನಂದ ದೇಸಾಯಿ, ಬಿ.ಎಸ್.ಸುಗೂರ ಕೋಶಾಧ್ಯಕ್ಷ ಶಿವಾನಂದ ನೀಲಾ, ಜಾತ್ರಾ ಸಮಿತಿಯ ಅಧ್ಯಕ್ಷ ಗುರು ಗಚ್ಚಿನಮಠ, ಸಂಸ್ಥೆಯ ನಿರ್ದೇಶಕರಾದ ಎನ್.ಎಮ್.ಗೋಲಾಯಿ, ನಾಗಪ್ಪ ಗುಗ್ಗರಿ, ಎಸ್.ಎಸ್.ಗುಡ್ಡೋಡಗಿ, ಸುಧೀರ ಚಿಂಚಲಿ, ಭಾರ ಎತ್ತುವ ಜಾತ್ರಾ ಸಮಿತಿಯ ಗೌರವಾಧ್ಯಕ್ಷ ಮಹಾದೇವ ಜಂಗಮಶೆಟ್ಟಿ,‌ ಮುತ್ತಪ್ಪ ಹಳ್ಳಿ, ನಿಂಗಯ್ಯ ಮಠ, ರಾಜು ಕೊಪ್ಪದ, ಚನ್ನಪ್ಪ ಈರ್ಪಾನಗೊಳ ಬಬಲೇಶ್ವರ, ರಾಜು ಕೊಪ್ಪದ, ಎಸ್.ಎಂ.ಪಾಟೀಲ ಬಬಲಾದಿ, ಶ್ರೀಮಂತ ಜಂಬಗಿ, ಈರಣ್ಣ ಪಾಟೀ, ಬಾಗಪ್ಪ ಕನ್ನೋಳ್ಳಿ, ಬಸವರಾಜ ಬೆಲ್ಲದ, ಶ್ರೀಶೈಲ ಗಡಗಿ, ಮುಂತಾದ ಪ್ರಮುಖರು ಹಾಗೂ ಭಕ್ತಾದಿಗಳು ಹಾಜರಿದ್ಸರು. ಸುಭಾಸ ಮರನೂರ ನಿರೂಪಿಸಿದರು.