ಸಿಬ್ಬಂದಿ ಸರಿಯಾಗಿ ಚುಚ್ಚುಮದ್ದು ನೀಡದ ಕಾಣ ಲಕ್ಷ್ಮಿ ಅವರಿಗೆ ಚುಚ್ಚುಮದ್ದು ನೀಡಿದ್ದ ಜಾಗದಲ್ಲಿ ಕೆಟ್ಟ ನೀರು ಹರಿದಾಡುತ್ತಿದೆ. ಈ ವಿಷಯವನ್ನು ವೈದ್ಯರಿಗೆ ತಿಳಿಸಿದ್ದರೂ ಸರಿಯಾಗಿ ಚಿಕಿತ್ಸೆ ನೀಡದೆ ವಿಳಂಬ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಡೆಂಘೀ ಜ್ವರದಿಂದ ಬಳಲುತ್ತಿದ್ದ ಮಹಿಳೆಗೆ ಚುಚ್ಚು ಮದ್ದು ನೀಡಿದ್ದ ಜಾಗದಲ್ಲಿ ಕೆಟ್ಟ ನೀರು ಹರಿದಾಡುತ್ತಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವಿರುದ್ಧ ವಿವಿಧ ಸಂಘಟನೆ ಪದಾಧಿಕಾರಿಗಳು ಆರೋಪಿಸಿದರು. ತಾಲೂಕಿನ ಮಲ್ಲೇಗೌಡನಕೊಪ್ಪಲು ಗ್ರಾಮದ ಲಕ್ಷ್ಮಿ ಗಣೇಶ್ ಅವರು ಕಳೆದ ನ.5ರಂದು ಡೆಂಘೀ ಜ್ವರಕ್ಕಾಗಿ ಚಿಕಿತ್ಸೆಗೆ ಆಗಮಿಸಿದ್ದಾರೆ. ಈ ವೇಳೆ ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿ ಚುಚ್ಚುಮದ್ದು ನೀಡಿದ್ದಾರೆ ಎಂದರು.

ಸಿಬ್ಬಂದಿ ಸರಿಯಾಗಿ ಚುಚ್ಚುಮದ್ದು ನೀಡದ ಕಾಣ ಲಕ್ಷ್ಮಿ ಅವರಿಗೆ ಚುಚ್ಚುಮದ್ದು ನೀಡಿದ್ದ ಜಾಗದಲ್ಲಿ ಕೆಟ್ಟ ನೀರು ಹರಿದಾಡುತ್ತಿದೆ. ಈ ವಿಷಯವನ್ನು ವೈದ್ಯರಿಗೆ ತಿಳಿಸಿದ್ದರೂ ಸರಿಯಾಗಿ ಚಿಕಿತ್ಸೆ ನೀಡದೆ ವಿಳಂಬ ಮಾಡಿದ್ದಾರೆ ಎಂದು ದೂರಿದರು.

ಲಕ್ಷ್ಮಿ ಅವರಿಗೆ ಚಿಕ್ಕವಯಸ್ಸಿನ ಎರಡು ಮಕ್ಕಳಿದ್ದು, ಇದೀಗ ಅವರ ಕುಟುಂಬ ಬೀದಿ ಪಾಲಾಗಿದೆ. ಮಲ್ಲೇಗೌಡನ ಕೊಪ್ಪಲು ಗ್ರಾಮಸ್ಥರು ಮತ್ತು ಸಂಘಟನೆ ಪದಾಧಿಕಾರಿಗಳ ಜೊತೆಗೂಡಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಶ್ರೀಧರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದರು.

ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಮತ್ತು ವಿಳಂಬ ವಹಿಸಿದ್ದ ವೈದ್ಯರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರು.

ಈ ವೇಳೆ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಬಿ.ಶಂಕರ್ ಬಾಬು, ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷೆ ಪ್ರಿಯಾ ರಮೇಶ್, ಚಿದಂಬರ, ಶ್ರೀಕಂಠ ಮಾಯಪ್ಪ ಸೇರಿದಂತೆ ಇತರರು ಲಕ್ಷ್ಮಿ ಅವರಿಗೆ ಆತ್ಮಸ್ಥೈರ್ಯ ತುಂಬಿ ಆರ್ಥಿಕ ಸಹಾಯ ಹಸ್ತ ಚಾಚಿದರು.

ಶ್ರೀಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ

ಮಂಡ್ಯ: ನಗರದ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಕನ್ನಿ ಪೂಜೆ, ಪಡಿ ಪೂಜೆ ನಡೆಯಿತು. ಈ ವೇಳೆ 18 ಬಗೆಯ ಆಹಾರ ಪದಾರ್ಥಗಳನ್ನು ಒಳಗೊಂಡ ವಿಶೇಷ ‘ಅನ್ನಸಂತರ್ಪಣಾ’ ಕಾರ್ಯಕ್ರಮ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಅಯ್ಯಪ್ಪಸ್ವಾಮಿ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಈ ಕಾರ್ಯಕ್ರಮವನ್ನು ರಾಜು ಸ್ವಾಮಿ, ಹೊಸಹಳ್ಳಿ ಮತ್ತು ಅವರ ತಂಡ ಹಾಗೂ ಮಂಡ್ಯ ಶ್ರೀಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಆಯೋಜಿಸಲಾಗಿತ್ತು. ಇದೇ ವೇಳೆ ದೇವಸ್ಥಾನದ ಅರ್ಚಕರಾದ ಗೋಪಿನಾಥ್‌ ಎನ್‌. ಇತರರು ಇದ್ದರು.