2.30 ಕೋಟಿ ರು. ವೆಚ್ಚದಲ್ಲಿ ಅಬಿವೃದ್ಧಿಗೊಂಡ ಬೈಲೂರು ಮುಖ್ಯರಸ್ತೆ ಉದ್ಘಾಟನೆ

| Published : Aug 09 2025, 12:04 AM IST

ಸಾರಾಂಶ

ಉಡುಪಿ ನಗರದ ಚಂದು ಮೈದಾನ ಜಂಕ್ಷನ್ ನಿಂದ ಬೈಲೂರು ಮಹಿಷಮರ್ದಿನಿ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆಯ ಉದ್ಘಾಟನೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೆರವೇರಿಸಿದರು.

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಚಂದು ಮೈದಾನ ಜಂಕ್ಷನ್ ನಿಂದ ಬೈಲೂರು ಮಹಿಷಮರ್ದಿನಿ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆಯ ಉದ್ಘಾಟನೆಯನ್ನು ಉಡುಪಿ ಶಾಸಕರಾದ ಯಶ್‌ಪಾಲ್ ಸುವರ್ಣ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ಶಾಸಕರು ಈ ಭಾಗದ ಜನತೆಯ ಹಲವು ವರ್ಷಗಳ ಬೇಡಿಕೆಯಾಗಿದ್ದ ಚರಂಡಿ ಸಹಿತ ಕಾಂಕ್ರೀಟ್ ರಸ್ತೆಯ ಮನವಿಗೆ ಸ್ಪಂದಿಸಿ ಲೋಕೋಪಯೋಗಿ ಇಲಾಖೆಯ ಮೂಲಕ 1.50 ಕೋಟಿ ರು. ಅನುದಾನ ಹಾಗೂ ಉಡುಪಿ ನಗರಸಭೆಯಿಂದ 80 ಲಕ್ಷ ಅನುದಾನ ಒದಗಿಸಿ ಒಟ್ಟು 2.30 ಕೋಟಿ ರು. ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದ್ದು, ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಸ್ಥಳೀಯ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಮುಖಂಡರಾದ ಮಟ್ಟಾರ್ ರತ್ನಾಕರ ಹೆಗ್ಡೆ, ನವೀನ್ ಭಂಡಾರಿ, ಕಿರಣ್ ಕುಮಾರ್ ಬೈಲೂರು, ದುರ್ಗಾಪ್ರಸಾದ್, ನಾರಾಯಣದಾಸ್, ಮೋಹನ್ ಶೆಟ್ಟಿ, ಸುರೇಶ್ ಶೆಟ್ಟಿ, ರಂಜಿತ್ ದೇವಾಡಿಗ, ಸುನೀಲ್ ರಾಜ್, ಪ್ರಸಾದ್ ಪೂಜಾರಿ, ಅರುಣ್ ಶೆಟ್ಟಿಗಾರ್, ಶ್ರೀಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.