ಹಣ ಕೇಳಿದ್ದಕ್ಕೆ ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ

| Published : Jul 31 2024, 01:03 AM IST

ಸಾರಾಂಶ

ಘಟನಾಸ್ಥಳಕ್ಕೆ ನಂದಗುಡಿ ಪೊಲೀಸರ ತಂಡ ಧಾವಿಸಿ ಬಂದು ಪರಿಶೀಲಿಸಿ, ದೂರು ದಾಖಲಿಸಿಕೊಂಡು ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಹೊಸಕೋಟೆ: ಬೇಕರಿಯಲ್ಲಿ ಖರೀದಿಸಿದ ತಿಂಡಿ, ತಿನಿಸಿಗೆ ಹಣ ಕೇಳಿದ್ದಕ್ಕೆ ಬೇಕರಿ ಸಿಬ್ಬಂದಿಯನ್ನು ಥಳಿಸಿ, ಅಲ್ಲಿನ ಗಾಜಿನ ಶೋಕೇಸ್ ಅನ್ನು ಕಬ್ಬಿಣದ ರಾಡಿನಿಂದ ಪುಡಿ ಮಾಡಿರುವ ಘಟನೆ ತಾಲೂಕಿನ ನಂದಗುಡಿಯಲ್ಲಿ ನಡೆದಿದೆ. ಕೇರಳ ಮೂಲದ ಬೇಕರಿಯಲ್ಲಿ ಕ್ರೀಮ್ ಬನ್ ತೆಗೆದುಕೊಳ್ಳಲು ಬಂದು ರೋಹನ್ (26), ಭರತ್ (22), ರಾಕೇಶ್ (20) ಹಾಗೂ ಗೌತಮ್ (19) ಕ್ರೀಮ್ ಬನ್ನಿನ ಹಣ ನೀಡುವಂತೆ ಕೇಳಿದಾಗ ಸಿಬ್ಬಂದಿಯನ್ನು ಥಳಿಸಿ, ಕಬ್ಬಿಣದ ಪೈಪ್‌ನಿಂದ ಶೋಕೇಸ್‌ನ ಗಾಜುಗಳನ್ನು ಒಡೆದು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾಸ್ಥಳಕ್ಕೆ ನಂದಗುಡಿ ಪೊಲೀಸರ ತಂಡ ಧಾವಿಸಿ ಬಂದು ಪರಿಶೀಲಿಸಿ, ದೂರು ದಾಖಲಿಸಿಕೊಂಡು ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

.