ದೇಶದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ಕರ್ನಾಟಕ ಸರ್ಕಾರಿ ನೌಕರರಿಗೆ ದೊರೆಯುತ್ತಿರುವ ಸೌಲಭ್ಯ ಕಡಿಮೆಯಿದ್ದರೂ ಜನ ಸೇವೆ ಬಗ್ಗೆ ಸರ್ಕಾರಿ ನೌಕರರ ಬದ್ಧತೆ ಪ್ರಶ್ನಾತೀತ. ಅಷ್ಟೆ ಅಲ್ಲ, ನಾಡಿನ ಜನ ಜೀವನ ಪ್ರಾಕೃತಿಕ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ತಮ್ಮ ವೇತನದಿಂದಲೇ ಕೋಟ್ಯಂತರ ರು. ದೇಣಿಗೆ ನೀಡುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ಕರ್ನಾಟಕ ಸರ್ಕಾರಿ ನೌಕರರಿಗೆ ದೊರೆಯುತ್ತಿರುವ ಸೌಲಭ್ಯ ಕಡಿಮೆಯಿದ್ದರೂ ಜನ ಸೇವೆ ಬಗ್ಗೆ ಸರ್ಕಾರಿ ನೌಕರರ ಬದ್ಧತೆ ಪ್ರಶ್ನಾತೀತ. ಅಷ್ಟೆ ಅಲ್ಲ, ನಾಡಿನ ಜನ ಜೀವನ ಪ್ರಾಕೃತಿಕ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ತಮ್ಮ ವೇತನದಿಂದಲೇ ಕೋಟ್ಯಂತರ ರು. ದೇಣಿಗೆ ನೀಡುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.ಮಂಗಳವಾರ ಬೆಂಗಳೂರು ನಗರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು-2025-26 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ 8 ರಾಜ್ಯಗಳಲ್ಲಿ ಒಪಿಎಸ್ (ಹಳೆ ಪಿಂಚಣಿ ವ್ಯವಸ್ಥೆ) ಜಾರಿಯಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಇನ್ನೂ ಜಾರಿಯಾಗಿಲ್ಲ. 8ನೇ ವೇತನ ಆಯೋಗ ಜಾರಿ, ಕೇಂದ್ರ ಸರ್ಕಾರದ ಮಾದರಿ ವೇತನ ನಮಗೆ ಇಲ್ಲ. ಇಷ್ಟಾದರೂ ಸರ್ಕಾರಿ ನೌಕರರ ಬದ್ಧತೆಗೆ ಕೊರತೆಯಿಲ್ಲ.ಕೋವಿಡ್ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯವರ ಒಂದೇ ಕರೆಗೆ ತಕ್ಷಣ ಸ್ಪಂದಿಸಿ 200 ಕೋಟಿ ರು. ದೇಣಿಗೆ ನೀಡಲು ಸಂಘದಿಂದ ನಿರ್ಧರಿಸಲಾಯಿತು. ಅದೇ ರೀತಿ ಉತ್ತರ ಕರ್ನಾಟಕ ಪ್ರವಾಹ, 2019ರಲ್ಲಿ ಮಡಿಕೇರಿ ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಲು 150 ಕೋಟಿ ರು. ದೇಣಿಗೆ ನೀಡಿರುವುದು ಸೇರಿದಂತೆ ಸಂಕಷ್ಟದ ಸಂದರ್ಭದಲ್ಲಿ ವೇತನ ಕಡಿತಗೊಳಿಸುವ ಮೂಲಕ ಕೋಟ್ಯಂತರ ರು. ಹಣವನ್ನು ಸರ್ಕಾರಕ್ಕೆ ನೀಡಲಾಗುತ್ತಿದೆ. ಪ್ರತಿ ವರ್ಷ ಸಾಹಿತ್ಯ ಸಮ್ಮೇಳನದಂತಹ ಕನ್ನಡದ ಶುಭ ಕಾರ್ಯಗಳಿಗೆ 4-5 ಕೋಟಿ ರು. ದೇಣಿಗೆ ನೀಡುವ ಮೂಲಕ ಸರ್ಕಾರಿ ನೌಕರರು 850 ಕೋಟಿ ರು. ದೇಣಿಗೆ ನೀಡಿದ್ದಾರೆ ಎಂದು ಷಡಕ್ಷರಿ ಸ್ಮರಿಸಿದರು.
7 ಕೋಟಿ ಜನರಿಗೆ 5 ಲಕ್ಷ ನೌಕರರ ಸೇವೆರಾಜ್ಯದ 7 ಕೋಟಿ ಜನರಿಗೆ 5 ಲಕ್ಷ ನೌಕರರು ಸೇವೆ ನೀಡುತ್ತಿದ್ದಾರೆ. 2.73 ಲಕ್ಷ ಹುದ್ದೆಗಳು ಖಾಲಿ ಇವೆ. ಇಂತಹ ಕೊರತೆಗಳ ನಡುವೆಯು ಇಡೀ ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯ ಕರ್ನಾಟಕವಾಗಿದೆ. ಅದಕ್ಕೆ ಕಾರಣ ಸರ್ಕಾರಿ ನೌಕರರ ಶ್ರಮ ಎಂದರು.
8 ರಾಜ್ಯಗಳಲ್ಲಿ ಒಪಿಎಸ್ ಜಾರಿಯಾಗಿದ್ದರೂ, ನಮ್ಮಲ್ಲಿ ಇನ್ನೂ ಜಾರಿಯಾಗಿಲ್ಲ. ಕೇಂದ್ರ ಸರ್ಕಾರದ ಮಾದರಿ ವೇತನ ಇಲ್ಲ. ಆದರೂ, ಸರ್ಕಾರಿ ನೌಕರರು ಬದ್ಧತೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಕೋವಿಡ್, ಪ್ರವಾಹ, ಭೂಕುಸಿತದಂತಹ ಸಂಕಷ್ಟಗಳು, ಸಾಹಿತ್ಯ ಸಮ್ಮೇಳನದಂತಹ ಶುಭ ಕಾರ್ಯಗಳಿಗೆ ನೌಕರರು 850 ಕೋಟಿ ರು. ದೇಣಿಗೆ ನೀಡಿದ್ದಾರೆ. ನೌಕರಿಯ ಹೊರತಾಗಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಷಡಾಕ್ಷರಿ ಹೇಳಿದರು.ಒತ್ತಡದ ನಡುವೆ ಕೆಲಸ ಮಾಡುವ ನೌಕರರು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರೆ ಮನಸ್ಸು ಹಗುರಾಗುತ್ತದೆ. ಆರೋಗ್ಯ ಉತ್ತಮಗೊಳ್ಳುವ ಜೊತೆಗೆ ಕೆಲಸದ ಮೇಲೆ ಏಕಾಗ್ರತೆ ಹೆಚ್ಚುತ್ತದೆ. ಎಲ್ಲರೂ ಒಂದೇ ಎನ್ನುವ ಮನೋಭಾವ ಬರುತ್ತದೆ. ವಿಜೇತ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ಮತ್ತಷ್ಟು ಪ್ರಶಸ್ತಿಗಳನ್ನು ಗೆಲ್ಲಬೇಕು ಎಂದು ಅವರು ಕರೆ ನೀಡಿದರು.
ನೌಕರರಿಗೆ ಮಾನವೀಯ ಗುಣ ಬೇಕು:ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನನ್ನು ಮಾನವೀಯಗೊಳಿಸುತ್ತವೆ. ಸರ್ಕಾರಿ ನೌಕರರಿಗೆ ಮಾನವೀಯ ಗುಣಗಳು ಬೇಕು. ಬಡವರು, ಕಷ್ಟದಲ್ಲಿ ಇರುವವರು ತಮ್ಮ ಕೆಲಸ ಮಾಡಿಸಿಕೊಳ್ಳಲು ಕಚೇರಿಗೆ ಬರುತ್ತಾರೆ. ಅವರಿಗೆ ನ್ಯಾಯಬದ್ಧ ಸೇವೆ ನೀಡಬೇಕು. ಸರ್ಕಾರಿ ಕಚೇರಿಯಲ್ಲಿನ ಒಂದು ಕೆಲಸದಿಂದ ಜೀವನ ರೂಪುಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ಸರ್ಕಾರಿ ಕಚೇರಿಗೆ ಬರುವ ಜನರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ? ಸೇವೆಯನ್ನು ಹೇಗೆ ನೀಡಲಾಗುತ್ತಿದೆ? ಎಂಬುದನ್ನು ಆಧರಿಸಿ ಸರ್ಕಾರದ ಬಗ್ಗೆ ಅಭಿಪ್ರಾಯ ರೂಪುಗೊಳ್ಳುತ್ತದೆ. ನೌಕರರು ದೈನಂದಿನ ಸೇವೆಯ ಜೊತೆಗೆ ನೈಸರ್ಗಿಕ ವಿಕೋಪದಂತಹ ಸಂಕಷ್ಟದ ಸಂದರ್ಭದಲ್ಲಿ ದೇಣಿಗೆ ನೀಡುವ ಮೂಲಕ ಸರ್ಕಾರದ ಕೈ ಬಲಪಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ನೌಕರರ ಸಂಘದ ವಿವಿಧ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘದಿಂದ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ನೌಕರರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ, ಆರೋಗ್ಯಕರ ಜೀವನಶೈಲಿಗೆ ಉತ್ತೇಜಿಸುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಗಿರಿಗೌಡ, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಕೆ. ಶಶಿಕಲಾ, ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.7 ಕೋಟಿ ಜನರಿಗೆ 5 ಲಕ್ಷ ನೌಕರರ ಸೇವೆರಾಜ್ಯದ 7 ಕೋಟಿ ಜನರಿಗೆ 5 ಲಕ್ಷ ಸರ್ಕಾರಿ ನೌಕರರು ಸೇವೆ ನೀಡುತ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿ 2.73 ಲಕ್ಷ ಹುದ್ದೆಗಳು ಖಾಲಿ ಇವೆ. ಇಂತಹ ಕೊರತೆಗಳು, ಒತ್ತಡದ ನಡುವೆಯು ಇಡೀ ದೇಶದಲ್ಲೇ ಎರಡನೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯ ಕರ್ನಾಟಕವಾಗಿದೆ. ಅದಕ್ಕೆ ಕಾರಣ ಸರ್ಕಾರಿ ನೌಕರರ ಶ್ರಮ ಎಂದು ಷಡಕ್ಷರಿ ಹೇಳಿದ್ದಾರೆ.
