ಬಲಿಜ ಸಮುದಾಯ ಪ್ರವರ್ಗ 3ಎ ಗೆ ಸೇರಿಸಲು ಒತ್ತಾಯ

| Published : Dec 13 2023, 01:00 AM IST

ಸಾರಾಂಶ

ಬಲಿಜ ಸಮುದಾಯ ಪ್ರವರ್ಗ 3ಎ ಗೆ ಸೇರಿಸಲು ಒತ್ತಾಯ

ಬಲಿಜ ಸಂಘ, ಯೋಗಿ ನಾರೇಯಣ ಬಲಿಜ ನೌಕರರ ಸೇವಾ ಟ್ರಸ್ಟ್ ಹಾಗೂ ಚಾರಿಟಬಲ್ ಟ್ರಸ್ಟ್‌ನಿಂದ ಪ್ರತಿಭಟನೆಕನ್ನಡಪ್ರಭ ವಾರ್ತೆ ಕೋಲಾರ

ಕಾಂತರಾಜು ಜಾತಿ ಜನಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕದ ಬಲಿಜ ಸಂಘದ ಜಿಲ್ಲಾ ಶಾಖೆ, ಜಿಲ್ಲಾ ಯೋಗಿ ನಾರೇಯಣ ಬಲಿಜ ನೌಕರರ ಸೇವಾ ಟ್ರಸ್ಟ್ ಹಾಗೂ ಚಾರಿಟಬಲ್ ಟ್ರಸ್ಟ್ ಮಂಗಳವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.

ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಕೆ.ಎನ್.ರವೀಂದ್ರ ಕುಮಾರ್ ಮಾತನಾಡಿ, ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅವಕೃಪೆಗೆ ಒಳಗಾಗಿ ಕಳೆದ ೧೯೯೪ ರಿಂದ ೨೦೧೧ ರವರೆಗೆ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ೩ ಎ ವರ್ಗದಲ್ಲಿದ್ದ ಬಲಿಜ ಜನಾಂಗವನ್ನು ನಿರಂತರ ಹೋರಾಟದ ಫಲವಾಗಿ ಶಿಕ್ಷಣಕ್ಕೆ ೨ಎ ಮೀಸಲಾತಿ ಮತ್ತು ಉದ್ಯೋಗಕ್ಕೆ ೩ಎ ಮೀಸಲಾತಿ ನೀಡಿತ್ತು. ರಾಜ್ಯದಲ್ಲಿ ಯಾವೂದಾದರೂ ಹಿಂದುಳಿದ ವರ್ಗದ ಜಾರಿ ಎರಡು ಪ್ರವರ್ಗಗಳಲ್ಲಿ ಇದೆಯೇ ಎಂದು ಪ್ರಶ್ನಿಸಿದರು.

ಬಲಿಜರ 2 ಪ್ರವರ್ಗಕ್ಕೆ ಮೀಸಲು

ಆದರೆ ಬಲಿಜ ಜನಾಂಗ ಮೀಸಲಾತಿ ಎರಡು ಪ್ರವರ್ಗಗಳಿಗೆ ಹಂಚಿಕೆ ಮಾಡಿರುವುದು ಇತಿಹಾಸದಲ್ಲಿಯೇ ಪ್ರಪ್ರಥಮವಾಗಿದೆ. ಸರ್ವರಿಗೂ ಸಮಪಾಲು-ಸರ್ವರಿಗೂ ಸಮ ಬಾಳು ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳ ಕಾರ್ಯ ವೈಖರಿಗಳ ಅವೈಜ್ಞಾನಿಕತೆಯ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಲಿಜ ಸಮುದಾಯದ ರಾಜ್ಯ ಮುಖಂಡ ಕೆ.ವಿ.ಸುರೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಮುಖ್ಯ ಮಂತ್ರಿ ದೇವರಾಜ್ ಅರಸ್ ಆಡಳಿತದಲ್ಲಿ ೧೯೮೪ರಲ್ಲಿ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಎಲ್.ಜಿ.ಹಾವನೂರ್ ಬಲಿಜ ಸಮುದಾಯವನ್ನು ಪ್ರವರ್ಗ ೨ಎ ಮೀಸಲಾತಿಗೆ ಸೇರ್ಪಡೆ ಮಾಡಿದ್ದರು. ನಂತರದಲ್ಲಿ ಮುಖ್ಯ ಮಂತ್ರಿಯಾಗಿದ್ದ ವೀರಪ್ಪಮೊಯ್ಲಿ ಬಲಿಜ ಸಮುದಾಯವನ್ನು ಪ್ರವರ್ಗ ೨ಎ ಯಿಂದ ೩ಎಗೆ ಬದಲಾವಣೆ ಮಾಡಿದರು ಎಂದರು.

ಬಲಿಜ ಸಮುದಾಯವು ಅನೇಕ ಹೋರಾಟಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ ೨ಎ ಯಿಂದ ೩ಎ ಮೀಸಲಾತಿಗೆ ಆದೇಶಿಸಿದರು ಎಂದು ಹೇಳಿದರು.

3 ಎ ಯಿಂದ 2 ಎಗೆ ಬದಲಾಯಿಸಲಿ

೩ಎ ಮೀಸಲಾತಿಯಿಂದ ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಬಲಿಜ ಸಮುದಾಯವು ಹಿಂದುಳಿದ ಆಯೋಗಕ್ಕೆ ೩ಎ ಯಿಂದ ೨ಎಗೆ ಬದಲಾವಣೆ ಮಾಡಬೇಕೆಂದು ಅನೇಕ ಹೋರಾಟಗಳನ್ನು ಮಾಡಿದ್ದಲ್ಲದೆ ರಾಜ್ಯ ರಾಚ್ಚನ್ಯಾಯಾಲಯದಲ್ಲಿ ಧಾವೆ ಹೊಡಿದ್ದ ಸಂದರ್ಭದಲ್ಲಿ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಹಾಗೂ ವಕೀಲ ಕಾಂತರಾಜು ಅವರು ನ್ಯಾಯಾಲಯದಲ್ಲಿ ಬಲಿಜ ಜನಾಂಗದ ವಿರುದ್ದ ವಾದ ಮಂಡಿಸಿದರು, ಇವರಿಂದ ಬಲಿಜ ಸಮುದಾಯವು ಮರಳಿ ನ್ಯಾಯಾ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಉಚ್ಚನ್ಯಾಯಾಲಯದಲ್ಲಿ ಹೂಡಿರುವ ಧಾವೆ ಇತ್ಯರ್ಥಪಡಿಸಿ ಬಲಿಜ ಜನಾಂಗಕ್ಕೆ ಪ್ರವರ್ಗ ೨ಎ ಯಿಂದ ೩ಎಕ್ಕೆ ಪರಿಷ್ಕರಣೆ ಮಾಡಬೇಕೆಂಬ ಮನವಿಯು ಸರ್ಕಾರದ ಶೀತಲ ಪೆಟ್ಟಿಗೆ ಸೇರ್ಪಡೆ ಮಾಡಿರುವುದು ಯಾವ ನ್ಯಾಯ. ಇಂತಹ ಘೋರ ಪರಿಸ್ಥಿತಿಯಲ್ಲಿ ವಕೀಲ ಕಾಂತರಾಜು ಹೇಗೆ ತಾನೆ ನಿಷ್ಟಕ್ಷಪಾತವಾಗಿ ಜಾತಿ ಗಣತಿ ವರದಿ ಸಾಧ್ಯವೆ, ವರದಿಯಲ್ಲಿ ಬಲಿಜ ಸಮುದಾಯದವರಿಗೆ ಸಂಪೂರ್ಣವಾಗಿ ವಂಚಿತಗೊಂಡಿದೆ ಇದೊಂದು ಪಕ್ಷಪಾತ ಧೋರಣೆಯಾಗಿದೆ ಎಂದು ಆರೋಪಿಸಿದರು.ಡೀಸಿ ಕಚೇರಿಗೆ ಮನವಿ ಸಲ್ಲಿಕೆಪ್ರತಿಭಟನೆಯ ನಂತರ ಡಿಸಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ, ಸರ್ಕಾರವು ಕೊಡಲೇ ಕಾಂತರಾಜು ವರದಿ ಕೈ ಬಿಟ್ಟು ಬಲಿಜ ಸಮುದಾಯವನ್ನು ೨ಎ ನಿಂದ ೩ಎಗೆ ಬದಲಾವಣೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಲಿಜ ಸಮುದಾಯದ ಹಿರಿಯ ಮುಖಂಡ ನಾರಾಯಣಸ್ವಾಮಿ, ಬಲಿಜ ಸಮುದಾಯದ ಮುಖಂಡರಾದ ಫಾರೆಸ್ಟ್ ಶ್ರೀಧರ್, ರಂಗನಾಥ್, ಚಮಕೂರು ಶ್ರೀನಿವಾಸ್, ಬೆಮೆಲ್ ಸುಬ್ಬಣ್ಣ, ಅರುಣಮ್ಮ, ಬಾಲಾಜಿ, ವೆಂಕಟೇಶ್ ಇದ್ದರು.