ಬಲ್ಲಮಾವಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

| Published : Mar 13 2024, 02:06 AM IST

ಬಲ್ಲಮಾವಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಲ್ಲಮಾವಟಿ ಗ್ರಾಮ ಪಂಚಾಯಿತಿಯಲ್ಲಿ 1.70 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಂಗಳವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಾಪೋಕ್ಲು ವ್ಯಾಪ್ತಿಯ ಬಲ್ಲಮಾವಟಿ ಗ್ರಾಮ ಪಂಚಾಯಿತಿಯಲ್ಲಿ 1.70 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಂಗಳವಾರ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಪೊನ್ನಣ್ಣ, ಗ್ರಾಮಗಳ ಅಭಿವೃದ್ಧಿಗೆ ಪಣ ತೊಡಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರ ವಿಶ್ವಾಸ ಪಡೆದು ಕಾರ್ಯನಿರ್ವಹಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ಪ್ರಮುಖರಾದ ಇಸ್ಮಾಯಿಲ್, ತೆನ್ನಿರಾ ಮೈನಾ, ಬಾಚಮಂಡ ಲವ ಚಿನ್ನಪ್ಪ, ತಾಪಂಡ ಅಪ್ಪಣ್ಣ, ಚೋಕಿರ ಬಾಬಿ ಭೀಮಯ್ಯ, ಮಚ್ಚುರ ರವೀಂದ್ರ, ಕೊಣಿಯಂಡ ರಾಜೀವಿ, ಮುಕ್ಕಾಟ್ಟೀರ ಸುತ ಸುಬ್ಬಯ್ಯ, ಮಣವಟ್ಟಿರ ಹರೀಶ್, ಬಾಳೆಯಡ ದೀನಾ ಪೂವಮ್ಮ, ಪಿಡಿಒ ಪೂಣಚ್ಚ, ಚೆಂಗೆಟೀರ ಕುಶಾಲಪ್ಪ, ಮಿಥುನ್, ಮಣವಟ್ಟಿರ ದಯಾ ಮತ್ತಿತರರು ಇದ್ದರು.

ವಿಶೇಷ ಗ್ರಾಮ ಸಭೆ:

ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ. ಅಧ್ಯಕ್ಷ ಅಮ್ಮಣಿ ಅಧ್ಯಕ್ಷತೆಯಲ್ಲಿ ಜನ್ ಮನ್ ಯೋಜನೆ ಅನುಷ್ಠಾನಕ್ಕೆ ವಿಶೇಷ ಗ್ರಾಮ ಸಭೆ ಮಂಗಳವಾರ ನಡೆಯಿತು.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಕಟ್ಟೆ, ತಟ್ಟಕೆರೆ, ಪಾಲದಳ ಗಿರಿಜನ ಹಾಡಿಗಳಿಗೆ ಪ್ರಧಾನ ಮಂತ್ರಿಗಳ ಜನ್ ಮನ್ ಯೋಜನೆಯಡಿಯಲ್ಲಿ 1.40 ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರು ಒದಗಿಸಲು ಅಯ್ಕೆಯಾಗಿರುವ ನಿಟ್ಟಿನಲ್ಲಿಗ್ರಾಮಸ್ಥರ ಮತ್ತು ಹಾಡಿವಾಸಿಗಳ ಸಮ್ಮುಖದಲ್ಲಿ ಪಾಲದಳಹಾಡಿಯಲ್ಲಿ ನಿಟ್ಟೂರು ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಒಪ್ಪಿಗೆ ಪಡೆಯಲಾಯಿತು.

ಈ ಜನವಸತಿ ಪ್ರದೇಶದ ಸ್ವಲ್ಪ ಭಾಗಗಳು ಅರಣ್ಯ ಪ್ರದೇಶದಲ್ಲಿ ಇದ್ದು ಕೇಂದ್ರ ಸರ್ಕಾರ ಮಾರ್ಗ ಸೂಚಿಯಂತೆ ಈ ಭಾಗಗಳಿಗೂ ನೀರು ಒದಗಿಸಲು ಸಭೆಯ ಮೂಲಕ ಶಿಫಾರಸು ಮಾಡಲಾಯಿತು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ , ಪಡಿಞರಂಡ ಕವಿತಾ ಪ್ರಭು, ಜೆ‌.ಕೆ ಅಪ್ಪಣ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.