ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಬಲ್ಲಮಾವಟಿ ವಲಯ ಕಾಂಗ್ರೆಸ್ ಸಭೆ ಬಲ್ಲಮಾವಟಿ ಪಿಂಚಣಿದಾರರ ಕಟ್ಟಡದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ತಾಪಂಡ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನೆರವೇರಿತು.ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಬಲ್ಲಮಾವಟಿ ವಲಯದ ಗ್ರಾಮಗಳಿಗೆ ನೀಡಿದಂ ಅನುದಾನದ ಬಗ್ಗೆ ಚರ್ಚಿಸಿ ಪೂರ್ಣಗೊಂಡ ಹಾಗೂ ಪೂರ್ಣಗೊಳ್ಳಲಿರುವ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾಗಿರುವ ಕಾಮಗಾರಿ ಪಟ್ಟಿ ಸಿದ್ಧಪಡಿಸಿ ಶಾಸಕರ ಬಳಿ ಕೊಂಡೊಯ್ಯುವಂತೆ ತೀರ್ಮಾನ ಕೈಗೊಳ್ಳಲಾಯಿತು.
ವಲಯದಲ್ಲಿರುವ ಗ್ರಾಮಸ್ಥರ ಕುಂದು ಕೊರತೆ ತಿಳಿಯಲು ಹಾಗೂ ಸಮಸ್ಯೆಗಳನ್ನು ಶಾಸಕರ ಬಳಿ ತಲುಪಿಸಲು ವಲಯ ಮಟ್ಟದ ಸಮಿತಿ ರಚಿಸಲಾಯಿತು.ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಚ್ಚುರ ಎಂ. ರವೀಂದ್ರ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಎಂ ಉಮೇಶ್, ಬಲ್ಲಮಾವಟಿ ವಲಯ ಕಾಂಗ್ರೆಸ್ ನ ಕಾರ್ಯದರ್ಶಿ ಮಣವಟಿರ ದಯಾ ಚಿನ್ನಪ್ಪ, ಬಲ್ಲಮಾವಟಿ ಬೂತ್ ಕಾಂಗ್ರೆಸ್ ಅಧ್ಯಕ್ಷ ಚಂಗೇಟಿರ ಕುಶಾಲಪ್ಪ, ನೆಲಜಿ ಬೂತ್ ಕಾಂಗ್ರೆಸ್ ಅಧ್ಯಕ್ಷ ಕೈಬುಲಿರ ಸಾಬು ಗಣಪತಿ, ಪೇರೂರು ಬೂತ್ ಅಧ್ಯಕ್ಷ ಪಾಳೆಯಡ ಅಯ್ಯಪ್ಪ, ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸದಸ್ಯೆ ಕೋಡಿಯಂಡ ರಾಜೀವಿ, ಮಾಜಿ ಮಂಡಲ ಪ್ರಧಾನ ಮೂವೇರ ನಾಣಪ್ಪ, ಪಕ್ಷದ ಹಿರಿಯ ನಾಯಕಿ ಬೊಟ್ಟೋಳಂಡ ಜಾಣಕ್ಕಿ, ಹಾಗೂ ಪಾಳೆರ ರಾಣಿ ಅಪ್ಪಣ್ಣ,ಎನ್ ಎಸ್ ಯುಐ ವಿದ್ಯಾರ್ಥಿ ಸಂಘಟನೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಕರವಂಡ ಪೊನ್ನಪ್ಪ, ಎನ್ ಎಸ್ ಯುಐ ಜಿಲ್ಲಾ ಕಾರ್ಯದರ್ಶಿ ಮುಕ್ಕಾಟಿರ ಯತೀಶ್, ಪಕ್ಷದ ನಾಯಕರಾದ ಕೋಡಿಯಂಡ ಶಶಿಕುಮಾರ್, ಅಪ್ಪಚೆಟ್ಟೋಳಂಡ ಮಿಥುನ್ ಮತ್ತಿತರರಿದ್ದರು.