ಬಳ್ಳಾರಿ ಜಿಲ್ಲಾಸ್ಪತ್ರೇಲಿ ಮತ್ತೊಬ್ಬ ಬಾಣಂತಿ ಸಾವು - ಕಳೆದ 25 ದಿನಗಳಲ್ಲಿ 5ನೇ ಸಾವಿನ ಪ್ರಕರಣ

| Published : Dec 06 2024, 04:51 AM IST

hospital

ಸಾರಾಂಶ

ಬಾಣಂತಿಯರ ಸಾವಿನಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಮತ್ತೊಂದು ಬಾಣಂತಿಯ ಸಾವು ಸಂಭವಿಸಿದೆ. ಇದರಿಂದಾಗಿ ನವೆಂಬರ್‌ 10ರ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಸಾವಿನ ಸಂಖ್ಯೆ 5ಕ್ಕೆ ಏರಿದೆ.

ಬಳ್ಳಾರಿ : ಬಾಣಂತಿಯರ ಸಾವಿನಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಮತ್ತೊಂದು ಬಾಣಂತಿಯ ಸಾವು ಸಂಭವಿಸಿದೆ. ಇದರಿಂದಾಗಿ ನವೆಂಬರ್‌ 10ರ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಸಾವಿನ ಸಂಖ್ಯೆ 5ಕ್ಕೆ ಏರಿದೆ.

ಕೂಡ್ಲಗಿ ಪಟ್ಟಣದ ಸುಮಯ್ಯ (24) ಎಂಬುವರು ಮೃತ ಬಾಣಂತಿ. ಇವರು ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ನಿತ್ಯ ಡಯಾಲಿಸಿಸ್‌ ಮಾಡಲಾಗುತ್ತಿತ್ತು. ಗುರುವಾರ ತೀವ್ರ ತೊಂದರೆಯಾದ ಹಿನ್ನೆಲೆಯಲ್ಲಿ ಸಾವಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ನವೆಂಬರ್ 10ರಂದು ಏಳು ಬಾಣಂತಿಯರ ಹೆರಿಗೆಯಾಗಿತ್ತು. ಇದರಲ್ಲಿ ನಾಲ್ವರು ಸಾವನ್ನಪ್ಪಿದ್ದು ಇದೀಗ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಇನ್ನುಳಿದ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಇದಕ್ಕೂ ಮೊದಲು ರೋಜಾ ಎಂಬುವರು ನ.20ರಂದು, ನಂದಿನಿ ಮತ್ತು ಲಲಿತಮ್ಮ ಎಂಬುವರು ನ. 12ರಂದು, ಮುಸ್ಕಾನ್ ಎಂಬುವರು 23ರಂದು ಮೃತಪಟ್ಟಿದ್ದರು.