ಸಾರಾಂಶ
ಚನ್ನಪಟ್ಟಣ: ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಮಂಡಳಿ ಚುನಾವಣೆ ಸುವ್ಯವಸ್ಥಿತವಾಗಿ ನಡೆಯಿತು. ಶಾಲೆಯ ವಿದ್ಯಾರ್ಥಿಗಳು 2025-26ನೇ ಸಾಲಿನ ವಿದ್ಯಾರ್ಥಿ ಮಂಡಳಿ ನಾಯಕರನ್ನು ಆಯ್ಕೆ ಮಾಡುವ ಮತದಾನ ಪ್ರಕ್ರಿಯೆ ಮೂಲಕ ಚುನಾಯಿಸಿದರು.
ಚನ್ನಪಟ್ಟಣ: ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಮಂಡಳಿ ಚುನಾವಣೆ ಸುವ್ಯವಸ್ಥಿತವಾಗಿ ನಡೆಯಿತು. ಶಾಲೆಯ ವಿದ್ಯಾರ್ಥಿಗಳು 2025-26ನೇ ಸಾಲಿನ ವಿದ್ಯಾರ್ಥಿ ಮಂಡಳಿ ನಾಯಕರನ್ನು ಆಯ್ಕೆ ಮಾಡುವ ಮತದಾನ ಪ್ರಕ್ರಿಯೆ ಮೂಲಕ ಚುನಾಯಿಸಿದರು.
ಶಾಲೆಯ ವಿದ್ಯಾರ್ಥಿ ಮಂಡಳಿ ಚುನಾವಣೆಗೆ ಜೂ.3 ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಆಸಕ್ತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು.ಮುಖ್ಯೋಪಾಧ್ಯಾಯರ ಉದ್ಘಾಟನಾ ಭಾಷಣದೊಂದಿಗೆ ಚುನಾವಣಾ ಕಾರ್ಯಾರಂಭವಾಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಜನತಾಂತ್ರಿಕ ಮೌಲ್ಯಗಳ ಅರಿವು ಬೆಳೆಸಲು ಚುನಾವಣೆ ನಡೆಸಲಾಯಿತು.
ಶಾಲೆಯ ವಿವಿಧ ಹುದ್ದೆಗಳಿಗಾಗಿ (ಹೆಡ್‌ಬಾಯ್, ಹೆಡ್‌ಗರ್ಲ್, ಹೌಸ್ ಕ್ಯಾಪ್ಟನ್‌ಗಳು ಹಾಗೂ ಉಪಕ್ಯಾಪ್ಟನ್‌ಗಳು) ಸ್ಪರ್ಧಿಸಿದ ವಿದ್ಯಾರ್ಥಿಗಳು ತಮ್ಮ ಚುನಾವಣಾ ಪ್ರಚಾರವನ್ನು ನಡೆಸಿದರು. ಚುನಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಜನತಾಂತ್ರಿಕ ರೀತಿಯಲ್ಲಿ ನಡೆಯಿತು.ಚುನಾವಣೆ ಪ್ರಕ್ರಿಯೆಗೆ ಬ್ಯಾಲೆಟ್ ಪೇಪರ್ ವಿಧಾನವನ್ನು ಅನುಸರಿಸಲಾಯಿತು. ಪ್ರತಿ ವಿದ್ಯಾರ್ಥಿಯು ತಮ್ಮ ಮತದಾನ ಹಕ್ಕನ್ನು ಸರಿಯಾದ ವಿಧಾನದಲ್ಲಿ ಚಲಾಯಿಸಿದರು.
ಮುಖ್ಯ ಶಿಕ್ಷಕಿ ಕವಿತಾ ಎಸ್. ಮುಖ್ಯ ಚುನಾವಣಾ ಆಯುಕ್ತೆ ಆಗಿ ಚುನಾವಣೆ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಿದರು. ಶಿಕ್ಷಕರು ಹಾಗೂ ಪರಿವೀಕ್ಷಕರ ತಂಡ ಸೂಸುತ್ರ ಚುನಾವಣೆಗೆ ಸಹಕರಿಸಿದರು.ಶಾಲೆಯ ಜಂಟಿ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ಆಡಳಿತಾಧಿಕಾರಿ ಮೆಹರ್ ಸುಲ್ತಾನಾ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.
19ಸಿಪಿಟಿ1: ಚನ್ನಪಟ್ಟಣದ ಬಾಲು ಶಾಲೆಯಲ್ಲಿ ವಿದ್ಯಾರ್ಥಿ ಮಂಡಳಿ ಚುನಾವಣೆ ನಡೆಯಿತು.