ಸಾರಾಂಶ
ಹನುಮಸಾಗರ ಸಮೀಪದ ಶಾಡಲಗೇರಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆಯ ನಿಮಿತ್ತ ಭಾನುವಾರ ನಡೆದ ಸಾಮೂಹಿಕ ಮದುವೆ ಹಾಗೂ ಪ್ರವಚನ ಮುಕ್ತಾಯ ಕಾರ್ಯಕ್ರಮದಲ್ಲಿ ಆಶೀರ್ವದಿಸಿದರು.
ಹನುಮಸಾಗರ: ಸಾಮೂಹಿಕ ಮದುವೆಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಕುಷ್ಟಗಿಯ ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯರು ಹೇಳಿದರು.
ಸಮೀಪದ ಶಾಡಲಗೇರಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆಯ ನಿಮಿತ್ತ ಭಾನುವಾರ ನಡೆದ ಸಾಮೂಹಿಕ ಮದುವೆ ಹಾಗೂ ಪ್ರವಚನ ಮುಕ್ತಾಯ ಕಾರ್ಯಕ್ರಮದಲ್ಲಿ ಆಶೀರ್ವದಿಸಿದರು. ಮಕ್ಕಳಿಗೆ ಚಿಕ್ಕವರಿದ್ದಾಗಲೇ ಒಳ್ಳೆಯ ಸಂಸ್ಕಾರ, ಶಿಕ್ಷಣ ನೀಡಬೇಕು ಎಂದರು.ಪ್ರಮುಖರಾದ ಮುತ್ತಯ್ಯ ಹಿರೇಮಠ, ನಾಗಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಮಾತಾಶ್ರೀ ಶಾರದಾದೇವಿ, ವೀರಭದ್ರಪ್ಪ ಶಿವಸಿಂಪಿ, ಎಸ್.ಸಂಗಮೇಶ, ನಾಗನಗೌಡ ಪೊಲೀಸ್‌ಪಾಟೀಲ್, ರಾಮನಗೌಡ ನೈನಾಪುರ, ಲಕ್ಷ್ಮಣ ಮಹೇಂದ್ರ ಸ್ವಾಮಿ, ಶಿವಪ್ಪ ರಡ್ಡೇರ, ಸಂಗಪ್ಪ ಅಂಗಡಿ, ಸಿದ್ದಪ್ಪ ಆರಿ, ಶರಣಪ್ಪ ವಕ್ರ, ಅಯ್ಯಪ್ಪ ನಸಗುನ್ನಿ, ಸಂಗಪ್ಪ ಹಳದೂರ, ರೇಖಾ ಆರಿ, ಲಾಲಸಾಬ ಕಡೆಮನಿ, ಚಂದ್ರಶೇಖರ ಗುಣಾರಿ, ಗುರುಪಾದಪ್ಪ ಹಡಪದ, ಸಂಗಪ್ಪ ಅಂಗಡಿ, ಅಬ್ದುಲ್ ಮುಲ್ಲಾ, ಶರಣಪ್ಪ ಹೊಸೂರ, ಶರಣಪ್ಪ ಹೂಗಾರ, ದುರಗಪ್ಪ ಗುಳಗುಳಿ, ರಾಯಪ್ಪ ಆರಿ, ಕುಮಾರ ಪೂಜಾರ, ಮಂಜು ಗೋನಾಳ ಇದ್ದರು. ಶಿಕ್ಷಕ ಗುರುರಾಜ ಹಡಪದ ನಿರ್ವಹಿಸಿದರು.