ಬನಹಟ್ಟಿ ನೂಲಿನ ಗಿರಣಿ: ಅಧ್ಯಕ್ಷರಾಗಿ ಬೀಳಗಿ, ಉಪಾಧ್ಯಕ್ಷರಾಗಿ ಭದ್ರನ್ನವರ ಆಯ್ಕೆ

| Published : Mar 02 2024, 01:47 AM IST

ಬನಹಟ್ಟಿ ನೂಲಿನ ಗಿರಣಿ: ಅಧ್ಯಕ್ಷರಾಗಿ ಬೀಳಗಿ, ಉಪಾಧ್ಯಕ್ಷರಾಗಿ ಭದ್ರನ್ನವರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬನಹಟ್ಟಿ ಸಹಕಾರಿ ನೂಲಿನ ಗಿರಣಿ ನೂತನ ಅಧ್ಯಕ್ಷರಾಗಿ ನಿಕಟಪೂರ್ವ ನಗರಾಧ್ಯಕ್ಷ ಶ್ರೀಶೈಲ ಬೀಳಗಿ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬ್ಲಾಕ್ ಕಮಿಟಿ ಅಧ್ಯಕ್ಷ ರಾಜು ಭದ್ರನ್ನವರ ಅವಿರೋಧವಾಗಿ ಆಯ್ಕೆಗೊಂಡರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಾಜ್ಯದ ಏಕೈಕ ಸಹಕಾರಿ ನೂಲಿನ ಗಿರಣಿಯಾದ ಬನಹಟ್ಟಿ ಸಹಕಾರಿ ನೂಲಿನ ಗಿರಣಿ ನೂತನ ಅಧ್ಯಕ್ಷರಾಗಿ ನಿಕಟಪೂರ್ವ ನಗರಾಧ್ಯಕ್ಷ ಶ್ರೀಶೈಲ ಬೀಳಗಿ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬ್ಲಾಕ್ ಕಮಿಟಿ ಅಧ್ಯಕ್ಷ ರಾಜು ಭದ್ರನ್ನವರ ಅವಿರೋಧವಾಗಿ ಆಯ್ಕೆಗೊಂಡರು.

ಶುಕ್ರವಾರ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧವಾಗಿ ಆಯ್ಕೆಯನ್ನು ಚುನಾವಣಾಧಿಕಾರಿ ಎಸ್.ಆರ್. ನ್ಯಾಮಗೌಡ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಶ್ರೀಶೈಲ ಬೀಳಗಿ ಮಾತನಾಡಿ, ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೂಲಿನ ಗಿರಣಿ ಸಬಲೀಕರಣಕ್ಕೆ ಹಿರಿಯರ ಮಾರ್ಗದರ್ಶನ ಹಾಗೂ ವಿಶ್ವಾಸದೊಂದಿಗೆ ಮುನ್ನಡೆಯುತ್ತೇವೆ ಎಂದರು.

ಉಪಾಧ್ಯಕ್ಷ ರಾಜು ಭದ್ರನ್ನವರ ಮಾತನಾಡಿ, ಗಿರಣಿಗೆ ಕಾರ್ಮಿಕರ ಬದುಕು ನಿರ್ಮಿಸುವದು ಪ್ರಧಾನ ಸಮಸ್ಯೆಯಾಗಿದ್ದು, ಈ ಮೊದಲು ನಗರಕ್ಕೆ ಸಂಜೀವಿನಿಯಾಗಿದ್ದ ಗಿರಣಿಯನ್ನು ಪುನಶ್ಚೇತನಗೊಳಿಸುವ ಮೂಲಕ ಹೊಸ ಅಧ್ಯಾಯ ಮೂಡಿಸುವ ಕನಸು ಹೊತ್ತಿರುವದಾಗಿ ತಿಳಿಸಿದರು.

ನಿದೇರ್ಶಕರಾದ ನಾರಾಯಣ ಮಾಲಪಾನಿ, ಸುರೇಶ ಶಿರೋಳ, ಗಂಗಪ್ಪ ಮುಗತಿ, ವಿಜಯಕುಮಾರ ಜುಂಜಪ್ಪನವರ, ಪರಪ್ಪ ಉರಭಿನವರ, ಚಂದ್ರು ಕುಲಗೋಡ, ದೇವೇಂದ್ರ ಬಸಪ್ಪಗೋಳ, ಶ್ರೀಶೈಲ ಗಸ್ತಿ, ಚಿದಾನಂದ ಮಟ್ಟಿಕಲ್ಲಿ, ರಜನಿದೇವಿ ಬಸವಂತಪ್ಪ ಹನಗಂಡಿ, ಗಿರಮಲ್ಲಪ್ಪ ಕೆರೂರ, ರಾಜು ಗುಂಡಿ, ನೀಲವ್ವ ವೀರಭದ್ರಪ್ಪ ಬಾಣಕಾರ ಹಾಜರಿದ್ದರು.

ರಾಮಣ್ಣ ಭದ್ರನ್ನವರ, ಬಸವರಾಜ ಭದ್ರನ್ನವರ, ಶಂಕರ ಜುಂಜಪ್ಪನವರ, ಶಂಕರ ಸೊರಗಾಂವಿ, ಸಿದ್ರಾಮಪ್ಪ ಸವದತ್ತಿ, ಮಹಾದೇವ ಚರ್ಕಿ, ಓಂಪ್ರಕಾಶ ಕಾಬರಾ, ಮಲ್ಲಣ್ಣ ಕಕಮರಿ, ಶಂಕರ ಜಾಲಿಗಿಡದ, ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಪ್ರಭಾಕರ, ಮಹಾದೇವ ಹುಲಜತ್ತಿ, ಸುರೇಶ ಹಜಾರೆ, ರವಿ ಜಮಖಂಡಿ, ರೇಷ್ಮಾ ಹಳ್ಳೂರ, ಪ್ರಿಯಾಂಕ ಬಗಾಡೆ ಉಪಸ್ಥಿತರಿದ್ದರು.