ಬಣಜಿಗ ಸಮಾಜದವರ ಸಮಸ್ಯೆಗಳಿಗೆ ಗಟ್ಟಿ ಧ್ವನಿಯಾಗಿ ನಿಲ್ಲುವೆ

| Published : Apr 30 2024, 02:01 AM IST

ಬಣಜಿಗ ಸಮಾಜದವರ ಸಮಸ್ಯೆಗಳಿಗೆ ಗಟ್ಟಿ ಧ್ವನಿಯಾಗಿ ನಿಲ್ಲುವೆ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಾಪಾರವನ್ನೇ ಮೂಲವೃತ್ತಿಯನ್ನಾಗಿಸಿಕೊಂಡಿರುವ ಬಣಜಿಗ ಸಮುದಾಯವು ಎಂದಿಗೂ ಯಾರನ್ನೂ ಶೋಷಣೆ ಮಾಡಿಲ್ಲ

ಗದಗ: ಬಣಜಿಗ ಸಮಾಜದವರಿಗೆ ಸಮಸ್ಯೆ ಬಂದಾಗ ಗಟ್ಟಿ ಧ್ವನಿಯಾಗಿ ನಿಂತವರಲ್ಲಿ ಕೆ.ಎಚ್. ಪಾಟೀಲ ಹಾಗೂ ನನ್ನ ಸಹೋದರ ಡಿ.ಆರ್. ಪಾಟೀಲ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿರುವ ಕವಿತಾ ಟ್ರೇಡಿಂಗ್ ಕಂಪನಿಯ ಜಾಗದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ಬಣಜಿಗ ಸಮಾಜದ ಸಭೆಯಲ್ಲಿ ಮಾತನಾಡಿದರು. ವ್ಯಾಪಾರವನ್ನೇ ಮೂಲವೃತ್ತಿಯನ್ನಾಗಿಸಿಕೊಂಡಿರುವ ಬಣಜಿಗ ಸಮುದಾಯವು ಎಂದಿಗೂ ಯಾರನ್ನೂ ಶೋಷಣೆ ಮಾಡಿಲ್ಲ ಎಂದು ಹೇಳಿದರು.ನಾವು ತಪ್ಪು ಮಾಡಿದರೆ ನಮ್ಮನ್ನು ಪ್ರೀತಿ ಮಾಡಿ ಎಂದು ಹೇಳುವುದೇ ಇಲ್ಲ. ನಮ್ಮದೇ ಆದ ರೀತಿಯಲ್ಲಿ ಸಲಹೆ ಸೂಚನೆ ಕೊಟ್ಟಿರುತ್ತೇವೆ. ಬಣಜಿಗ ಸಮಾಜ ಸಂಪೂರ್ಣವಾಗಿ ನಮ್ಮ ಜತೆಗೆ ನಿಲ್ಲಬೇಕು. ನಿಮ್ಮ ಸಮುದಾಯ ಒಟ್ಟಾಗಿ ನಿಂತು ಬೆಂಬಲಿಸಿದರೆ ನಮಗೆ ಹೆಚ್ಚಿನ ಬಲ ಬರುತ್ತದೆ ಎಂದು ಹೇಳಿದರು.

ಗದಗ ಶಹರ ಅಭಿವೃದ್ಧಿಗೆ ಶ್ರಮ ವಹಿಸಲಾಗುತ್ತಿದೆ. ಗದಗ ಅಭಿವೃದ್ಧಿ ಹೊಂದಿದರೆ ನಗರದಲ್ಲಿ ವ್ಯಾಪಾರ-ವಹಿವಾಟು ನಡೆಸುವವರು ಅಭಿವೃದ್ಧಿ ಹೊಂದುತ್ತಾರೆ. ಆದರೆ, ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕಿದವರಿಗೆ ಬೆಂಬಲ ನೀಡಬೇಡಿ. ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಉತ್ತಮ ಸಂಸ್ಕೃತಿ ಹೊಂದಿರುವ ನಾಯಕ. ಅವರಿಗೆ ಮತ ನೀಡುವ ಮೂಲಕ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿದರು. ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ ಮತಯಾಚಿಸಿದರು.

ಬಣಜಿಗ ಸಮಾಜದ ಅಧ್ಯಕ್ಷ ನಾಗೇಶ ಸವಡಿ, ಮುಖಂಡರಾದ ರೇವಣಸಿದ್ದಪ್ಪ ಯಳಮಲಿ, ಉಮೇಶ ಹುಬ್ಬಳ್ಳಿ, ಈಶಣ್ಣ ರಾಮನಕೊಪ್ಪ, ಸುರೇಶ ನಿಲೂಗಲ್, ಸಿದ್ರಾಮಪ್ಪ ಉಮಚಗಿ, ಗಂಗಾಧರ ಮುನವಳ್ಳಿ, ಅಮರೇಶ ನಾಶಿ, ಶಾಂತಪ್ಪ ಅಕ್ಕಿ, ಲಲಿತಾ ಇಂಗಳಳ್ಳಿ, ಬಸವರಾಜ ಅಂಗಡಿ, ಬಸವರಾಜ ರಾಮನಕೊಪ್ಪ, ಬಸವರಾಜ ಉಮಚಗಿ, ಚೇತನ ಅಂಗಡಿ, ಶ್ರೀಧರ ವಜ್ರಬಂಡಿ, ವಿರೂಪಾಕ್ಷಪ್ಪ ಅಕ್ಕಿ, ಗಿರೀಶ ಕೊರಿ, ಶರಣಪ್ಪ ಹೊಸಂಗಡಿ, ನಗರಸಭೆ ಸದಸ್ಯರಾದ ಲಲಿತಾ ಅಸೂಟಿ, ಶಕುಂತಲಾ ಅಕ್ಕಿ ಇದ್ದರು.