ಬಿರುಗಾಳಿ ರಭಸಕ್ಕೆ ಬಾಳೆ ಫಸಲು ಹಾನಿ

| Published : May 05 2024, 02:01 AM IST

ಸಾರಾಂಶ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾರಿ ಬಿರುಗಾಳಿ ರಭಸಕ್ಕೆ ಬೆಳೆ ಹಾನಿಯಾಗಿದ್ದು, ಸಿಡಿಲಿನ ಬಡಿತಕ್ಕೆ ಜಾನುವಾರುಗಳು ಸಾವನಪ್ಪಿದ್ದು, ಏಸು ಕ್ರಿಸ್ತನ ಮೂರ್ತಿ ದರೆಗುರುಳಿದ್ದು, ಹಲವು ಮನೆಗಳು ಜಖಂಗೊಂಡಿರುವ ಘಟನೆ ಶುಕ್ರವಾರ ಜರುಗಿದೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾರಿ ಬಿರುಗಾಳಿ ರಭಸಕ್ಕೆ ಬೆಳೆ ಹಾನಿಯಾಗಿದ್ದು, ಸಿಡಿಲಿನ ಬಡಿತಕ್ಕೆ ಜಾನುವಾರುಗಳು ಸಾವನಪ್ಪಿದ್ದು, ಏಸು ಕ್ರಿಸ್ತನ ಮೂರ್ತಿ ದರೆಗುರುಳಿದ್ದು, ಹಲವು ಮನೆಗಳು ಜಖಂಗೊಂಡಿರುವ ಘಟನೆ ಶುಕ್ರವಾರ ಜರುಗಿದೆ.

ಹನೂರು ತಾಲೂಕಿನ ವಿವಿಧಡೆ ಸಾಧಾರಣ ಮಳೆ ಭಾರಿ ಬಿರುಗಾಳಿಗೆ ಸಿಲುಕಿ ಮರಿಯ ಮಂಗಲ ಗ್ರಾಮದಲ್ಲಿರುವ ಕ್ರೈಸ್ತ ಧರ್ಮದ ಚರ್ಚ್ ಮುಂಭಾಗದಲ್ಲಿ ಇರಿಸಲಾಗಿದ್ದಏಸು ಕ್ರಿಸ್ತನ ಮೂರ್ತಿ ಮುರಿದು ಬಿದ್ದಿದೆ. ಅಲ್ಲದೆ ವಿವಿಧ ಗ್ರಾಮಗಳಲ್ಲಿ ಮರಗಳು ಸಹ ಧರೆಗುಳಿದಿದೆ ಜೊತೆಗೆ ವಿವಿಧ ಗ್ರಾಮಗಳ ರೈತರ ಜಮೀನುಗಳಲ್ಲಿ ನೂರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಾಳೆ ಪಸಲು ನಾಶಗೊಂಡಿದೆ.

ಬರಸಿಡಿಲಿಗೆ ಜಾನುವಾರು ಸಾವು : ಸುಳ್ವಾಡಿ ಗ್ರಾಮದ ಪಾಪಣ್ಣ ಎಂಬವರಿಗೆ ಸೇರಿದ ಎರಡು ಜಾನುವಾರುಗಳು ಭಾರಿ ಬಿರುಗಾಳಿ ಮಳೆ ಸಿಡಿಲ ಒಡತಕ್ಕೆ ಸಿಲುಕಿ ಮೃತಪಟ್ಟಿವೆ.

ಅಧಿಕಾರಿಗಳಿಂದ ಸರ್ವೆ ಕಾರ್ಯ:

ತಾಲೂಕಿನಲ್ಲಿ ಭಾರಿ ಬಿರುಗಾಳಿ ಮಳೆಯಿಂದ ಹಾನಿಯಾಗಿರುವ ವಿವಿಧ ಗ್ರಾಮಗಳಲ್ಲಿ ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬಾಳೆ ಬೆಳೆ ಎಷ್ಟು ಎಕರೆ ಹಾನಿಯಾಗಿದೆ, ಮನೆಗಳ ಸಂಖ್ಯೆ ಮತ್ತು ಜಾನುವಾರುಗಳು ಸಹ ಸಾವನ್ನುತ್ತಿರುವ ಬಗ್ಗೆ ಸರ್ವೆ ಕಾರ್ಯ ನಡೆದಿದೆ. ಹೀಗಾಗಿ ಸರ್ಕಾರ ರೈತರಿಗೆ ಪ್ರಕೃತಿ ವಿಕೋಪ ದಡಿ ಹಾನಿಯಾಗಿರುವ ಬಗ್ಗೆ ವರದಿ ಪಡೆದು ರೈತರಿಗಾಗಿರುವ ನಷ್ಟದ ಪರಿಹಾರವನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ತಿಳಿಸಿದರು.