ಬಿರುಗಾಳಿ ಮಳೆಗೆ ಧರೆಗುರುಳಿದ ಬಾಳೆಗಿಡಗಳು

| Published : May 04 2024, 12:34 AM IST

ಸಾರಾಂಶ

ಚನ್ನಪಟ್ಟಣ: ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಸುಮಾರು ೨ ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ಮುರಿದುಬಿದ್ದಿದ್ದು, ರೈತನಿಗೆ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿರುವ ಘಟನೆ ತಾಲೂಕಿನ ಗರಕಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷ್ಣೇಗೌಡ ತಮ್ಮ ತೋಟದಲ್ಲಿ ಬೆಳೆದಿದ್ದ ಬಾಳೆಗಿಡ ಬೆಳೆದಿದ್ದರು. ಶುಕ್ರವಾರ ಸುರಿದ ಮಳೆ ಹಾಗೂ ಬಿರುಗಾಳಿಗೆ ಗಿಡಗಳೆಲ್ಲಾ ಮುರಿದು ನಷ್ಟವುಂಟಾಗಿದೆ.

ಕೃಷ್ಣೇಗೌಡರು ಎರಡುವರೆ ಎಕರೆ ಜಮೀನಿನಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಬಾಳೆ ಗಿಡ ನೆಟ್ಟಿದ್ದರು. ಇದಕ್ಕಾಗಿ ಸುಮಾರು 7 ಲಕ್ಷಕ್ಕೂ ಅಧಿಕ ಹಣ ವ್ಯಯಿಸಿದ್ದರು. ಬಾಳೆ ಫಸಲು ಕಟಾವಿಗೆ ಬಂದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕೆಂದು ಸಿದ್ಧತೆ ಮಾಡಿಕೊಳ್ಳುವ ವೇಳೆಯಲ್ಲೇ ಬಿರುಗಾಳಿ ಮಳೆಯ ಆರ್ಭಟದಲ್ಲಿ ಬಾಳೆ ಗಿಡಗಳು ಮುರಿದುಬಿದ್ದಿವೆ. ಇದರಿಂದ ಸುಮಾರು 20 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

ಇದೇ ವೇಳೆ ತಾಲೂಕಿನ ಸೋಗಾಲ, ಸುಳ್ಳೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬಾಳೆ ಗಿಡಗಳು ಬಿರುಗಾಳಿ ಮಳೆ ಹೊಡೆತಕ್ಕೆ ಮುರಿದುಬಿದ್ದಿದ್ದು, ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದೆ.

ಗ್ರಾಮೀಣ ಭಾಗದಲ್ಲಿ ಬಿರುಗಾಳಿ ಮಳೆ ಸುರಿದಿದ್ದರೆ, ನಗರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಶುಕ್ರವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಗುಡುಗು ಸಹಿತ ಆರಂಭಗೊಂಡು ಮೊದಲ ಮಳೆಯಂದೇ ಹಾನಿಯುಂಟು ಮಾಡಿದೆ.

ಪೊಟೋ೩ಸಿಪಿಟಿ೬: ಚನ್ನಪಟ್ಟಣ ತಾಲೂಕಿನ ಗರಕಹಳ್ಳಿಯ ಕೃಷ್ಣೇಗೌಡರ ಜಮೀನಿನಲ್ಲಿ ಮುರಿದು ಬಿದ್ದಿರುವ ಬಾಳೆಗಿಡಗಳು.