ಮಾದ್ಯಮ ಕ್ಷೇತ್ರದಲ್ಲಿ ಅಪಾರ ಶಿಷ್ಯ ಬಳಗ ಹೊಂದಿರುವ ಸಂವಹನ ತಜ್ಞ, ದಕ್ಷಿಣ ಭಾರತದ ಹಿರಿಯ ಪ್ರಾಧ್ಯಾಪಕರು ಆಗಿರುವ ಪ್ರೊ.ಬಿ.ಕೆ.ರವಿ ರಾಜ್ಯದ ಹಿರಿಯ ಕುಲಪತಿಗಳಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೋಲಾರಬೆಂಗಳೂರು ಉತ್ತರ ವಿವಿ ನೂತನ ಕುಲಪತಿಯಾಗಿ ಪ್ರೊ.ಬಿ.ಕೆ.ರವಿ ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರು ಉತ್ತರ ವಿವಿ ಪ್ರಭಾರ ಕುಲಪತಿಯಾಗಿದ್ದ ಡಾ.ಕುಮುದಾರಿಂದ ಅಧಿಕಾರ ಸ್ವೀಕರಿಸಿದ ಪ್ರೊ.ಬಿ.ಕೆ.ರವಿ ಅಧಿಕಾರಿಗಳು, ಸಿಬ್ಬಂದಿಗೆ ಸಂವಿಧಾನ ಬೋಧನೆ ಮಾಡುವ ಮೂಲಕ ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು.ನಗರದ ಹೊರವಲಯದ ಟಮಕಾದ ಬಿಎನ್‌ಯು ಕಚೇರಿಯಲ್ಲಿ ನಾಲ್ಕನೆ ಕುಲಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಹಿರಿಯ ಪ್ರೊಫೆಸರ್ ಈ ಹಿಂದೆ ಬೆಂಗಳೂರು ವಿವಿ ಯಲ್ಲಿ ಸಂವಹನದ ವಿಭಾಗದ ಮುಖ್ಯಸ್ಥರಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ, ಕೊಪ್ಪಳ್ಳದ ಕುಲಪತಿಯಾಗಿದ್ದ ಬಿ.ಕೆ.ರವಿ ಸಾಕಷ್ಟು ಅನುಭವಿಗಳಾಗಿದ್ದಾರೆ. ಮಾದ್ಯಮ ಕ್ಷೇತ್ರದಲ್ಲಿ ಅಪಾರ ಶಿಷ್ಯ ಬಳಗ ಹೊಂದಿರುವ ಸಂವಹನ ತಜ್ಞ, ದಕ್ಷಿಣ ಭಾರತದ ಹಿರಿಯ ಪ್ರಾಧ್ಯಾಪಕರು ಆಗಿರುವ ಪ್ರೊ.ಬಿ.ಕೆ.ರವಿ ರಾಜ್ಯದ ಹಿರಿಯ ಕುಲಪತಿಗಳಾಗಿದ್ದಾರೆ. ಕಳೆದ ಹಲವು ವರ್ಷದಿಂದ ಬೆಂಗಳೂರು ಉತ್ತರ ವಿವಿ ಹಲವು ಹಗರಣ, ಅಕ್ರಮ ಹಾಗೂ ಪರೀಕ್ಷೆ ಗೊಂದಲ ಸೇರಿದಂತೆ ಸದಾ ಒಂದಿಲ್ಲೊಂದು ವಿವಾದದ ಕೇಂದ್ರ ಬಿಂದುವಾಗಿತ್ತು.