ಸಾರಾಂಶ
ವ್ಯಕ್ತಿಯೊಬ್ಬ ಸರಿಸುಮಾರು 5 ಕೆಜಿ ಮಾದಕ ದ್ರವ್ಯಗಳನ್ನು ತಂದು ಬಂಗಾರಪೇಟೆ ಪಟ್ಟಣದ ಬೂದಿಕೋಟೆ ವೃತ್ತದ ಮಾರಾಟ ಮಾಡುತ್ತಿದ್ದನು
ಬಂಗಾರಪೇಟೆ: ಇತ್ತೀಚಿಗೆ ತಾಲೂಕಿನಾದ್ಯಂತ ಡ್ರಗ್ಸ್ ಮಾಫಿಯಾ ಹೆಚ್ಚಾಗಿರುವ ಬೆನ್ನಲ್ಲೇ ಗಾಂಜಾ ಮಾರುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಮಧುರೈ ಮೂಲದ ನಿವಾಸಿ ಮನೋಜ್ ಬಿನ್ ತನೇಶ್ವರನ್(24) ಯುವಕ ಡಾರ್ಜಿಲಿಂಗ್ ಮೂಲದ ವ್ಯಕ್ತಿಯಿಂದ ಅಕ್ರಮವಾಗಿ ಸರಿಸುಮಾರು 5 ಕೆಜಿ ಮಾದಕ ದ್ರವ್ಯಗಳನ್ನು ತಂದು ಪಟ್ಟಣದ ಬೂದಿಕೋಟೆ ವೃತ್ತದ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧಾರದ ಮೇಲೆ ಇನ್‌ಸ್ಪೆಕ್ಟರ್ ದಯಾನಂದ್ ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.