ಸಾರಾಂಶ
Bank employee commits suicide: superior accused of harassment
ಹೊಸದುರ್ಗ: ಖಾಸಗಿ ಬ್ಯಾಂಕ್(ಐಡಿಎಫ್‌ಸಿ) ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಗಿರಥ ಲಾಡ್ಜ್ ನಲ್ಲಿ ನಡೆದಿದೆ.
ಗುಂಡ್ಲುಪೇಟೆ ಮೂಲದ ಸಂತೋಷ್(36) ಆತ್ಮಹತ್ಯೆ ಮಾಡಿಕೊಂಡ ಬ್ಯಾಂಕ್ ಉದ್ಯೋಗಿ. ಗುಂಡ್ಲುಪೇಟೆ ಮೂಲದ ಸಂತೋಷ್ ಕೆಲವು ದಿನ ಐಡಿಎಫ್‌ಸಿಯ ಹೊಸದುರ್ಗದ ಶಾಖೆಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದ. ಸದ್ಯ ಮಧ್ಯಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಸಂತೋಷ್ ಅಜ್ಜಂಪುರದಲ್ಲಿ ಮದುವೆಯಾಗಿದ್ದ, ಅನಾರೋಗ್ಯದ ಕಾರಣಕ್ಕೆ ಒಂದುವಾರ ರಜೆ ಮೇಲೆ ಅಜ್ಜಂಪುರಕ್ಕೆ ಬಂದಿದ್ದರು ಎನ್ನಲಾಗಿದೆ. ಹೊಸದುರ್ಗ ಶಾಖೆಗೆ ಸೋಮವಾರ ಕಾರ್ಯನಿಮಿತ್ತ ಬಂದಿದ್ದ ಸಂತೋಷ್ ಶಾಖೆಯ ಮೇಲ್ಭಾಗದಲ್ಲಿದ್ದ ವಿಶ್ರಾಂತಿ ಕೊಠಡಿಗೆ ತೆರಳಿದ್ದಾರೆ ಅಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಐಡಿಎಫ್‌ಸಿ ಬ್ಯಾಂಕಿನಲ್ಲಿ ಉದ್ಯೋಗ ಮಾಡುತ್ತಿದ್ದ ಸಂತೋಷ್, ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತಿದ್ದರು. ಮಧ್ಯ ಪ್ರದೇಶದಿಂದ ವರ್ಗಾವಣೆ ಮಾಡಲು ಕೋರಿದರೆ ಲಂಚದ ಬೇಡಿಕೆ ಇಟ್ಟಿದ್ದರು ಎನ್ನುವುದನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಮೃತ ಬ್ಯಾಂಕ್ ಉದ್ಯೋಗಿ ಸಂತೋಷ್ ಪತ್ನಿ ಲಾವಣ್ಯ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಹೊಸದುರ್ಗ ಪಿಐ ತಿಮ್ಮಣ್ಣ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.-----
ಫೋಟೋ, 6hsd1: ಸಂತೋಷ್