ಬ್ಯಾಂಕ್‌ಗಳು ಗ್ರಾಹಕರ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸುವುದರಿಂದ ಹೆಚ್ಚು ಹೆಚ್ಚು ಶಾಖೆಗಳನ್ನು ಪ್ರಾರಂಭ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬ್ಯಾಂಕ್‌ಗಳು ಗ್ರಾಹಕರ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸುವುದರಿಂದ ಹೆಚ್ಚು ಹೆಚ್ಚು ಶಾಖೆಗಳನ್ನು ಪ್ರಾರಂಭ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.ನಗರದ ಗೋಪಾಲಗೌಡ ಬಡಾವಣೆಯಲ್ಲಿ ಬ್ಯಾಂಕ್ ಆಫ್ ಬರೋಡದ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ ಆಫ್ ಬರೋಡಾ ರಾಷ್ಟ್ರಮಟ್ಟದಲ್ಲಿ ಅತ್ಯಂತ ವಿಶ್ವಾಸವನ್ನು ಗಳಿಸಿಕೊಂಡಿದೆ. ಗ್ರಾಹಕರಿಗೆ ನಿರಂತರ ನೀಡುತ್ತಿರುವ ಸೌಲಭ್ಯ, ಹೊಸ ಉದ್ಯೋಗಗಳ ಪ್ರಾರಂಭ ಮಾಡುವುದಕ್ಕೆ ಬೇಕಾದ ಮೂಲ ಬಂಡವಾಳ ಒದಗಿಸುವುದು, ಇನ್ವೆಸ್ಟ್‌ಮೆಂಟ್ ಒಗ್ಗೂಡಿಸುವಲ್ಲಿ ಬಹಳ ಮುಂಚೂಣಿಯಲ್ಲಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಬೇಕಾಗುವ ಹಣಕಾಸಿನ ಬೇಡಿಕೆಗಳನ್ನು ಪೂರೈಸುವ ವಿಶ್ವಾಸ ಬ್ಯಾಂಕಿನಿಂದ ಆಗಲಿ ಎಂದು ಆಶಿಸಿದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಬ್ಯಾಂಕ್ ಆಫ್ ಬರೋಡ ಜನಸಾಮಾನ್ಯರ ಬ್ಯಾಂಕ್ ಆಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅತ್ಯಂತ ತೃಪ್ತಿಕರವಾದ ಸೇವೆಯನ್ನು ನೀಡುತ್ತಿದೆ. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ನಂಬಿಕೆ ಬಹಳ ಮುಖ್ಯ. ಬ್ಯಾಂಕಿನವರು ಗ್ರಾಹಕರ ಮೇಲೆ ಗ್ರಾಹಕರು ಬ್ಯಾಂಕಿನ ಮೇಲೆ ವಿಶ್ವಾಸ ಇಡಬೇಕು ನೂತನ ಶಾಖೆಯು ಈ ಭಾಗದ ಜನತೆಗೆ ಹಣಕಾಸಿನ ಪೂರೈಕೆಯನ್ನು ನೀಡಲಿ ಎಂದರು.ಬ್ಯಾಂಕ್ ಆಫ್ ಬರೋಡದ ಜೋನಲ್ ಹೆಡ್ ರಾಜೇಶ್ ಖನ್ನಾ ಮಾತನಾಡಿ, ಸಮಾಜಕ್ಕೆ ಬ್ಯಾಂಕ್ ಆಫ್ ಬರೋಡ ಬಹಳಷ್ಟು ಕೊಡುಗೆಗಳನ್ನು ನೀಡುತ್ತಿದೆ. ಡಿಜಿಟಲ್ ಇನ್ನೋವೇಶನ್, ಹೊಸ ಉದ್ಯೋಗ ಪ್ರಾರಂಭ ಮಾಡುವವರಿಗೆ ಸಾಲದ ಸೌಲಭ್ಯ ತನ್ನದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡ ಕೇವಲ ದೊಡ್ಡ ದೊಡ್ದ ನಗರಗಳಲ್ಲಿ ಮಾತ್ರವಲ್ಲದೆ ಪಟ್ಟಣ ಮತ್ತು ಹಳ್ಳಿಗಳಲ್ಲೂ ಗ್ರಾಹಕರಿಗೆ ಅತಿ ಹೆಚ್ಚು ಸೌಲಭ್ಯವನ್ನು ನೀಡುವುದು ನಮ್ಮ ಬ್ಯಾಂಕಿನ ಉದ್ದೇಶವಾಗಿದೆ ಎಂದು ಹೇಳಿದರು.
ಗ್ರಾಹಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ ಮಾತ್ರ ಬ್ಯಾಂಕಿಂಗ್ ಸೆಕ್ಟರ್ ಮುಂದುವರೆಯಲು ಸಾಧ್ಯ. ಮುಂದಿನ ದಿನಗಳಲ್ಲಿ ಗ್ರಾಹಕರ ವಿಶ್ವಾಸದಿಂದ ಇನ್ನೂ ಹೆಚ್ಚು ಹೆಚ್ಚು ಶಾಖೆಗಳನ್ನು ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಪ್ರಾರಂಭಿಸಿ ಬ್ಯಾಂಕಿನ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು ಎಂದರು.ಅರಣ್ಯ ಇಲಾಖೆ ಡಿಸಿಎಫ್ ಅಜ್ಜಯ್ಯ ಅವರು ಮಾತನಾಡಿ, ಅರಣ್ಯ ಇಲಾಖೆ ಹಾಗೂ ಬ್ಯಾಂಕ್ ಆಫ್ ಬರೋಡದ ಒಡಂಬಡಿಕೆಯಿಂದ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗೆ ಕೇವಲ ಸ್ಯಾಲರಿ ಅಕೌಂಟ್‌ನಿಂದಾಗಿ 2.35 ಕೋಟಿ ವಿಮಾ ಸೌಲಭ್ಯವನ್ನು ನೀಡುತ್ತಿದೆ. ಅರಣ್ಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಉಂಟಾಗುವ ಹಲವಾರು ತೊಂದರೆಗಳಿಗೆ ಈ ವಿಮಾ ಸೌಲಭ್ಯ ಬಹಳ ಉಪಯೋಗಕಾರಿ ಆಗುತ್ತಿದೆ ಎಂದರು.
ಬ್ಯಾಂಕ್ ಆಫ್ ಬರೋಡಾದ ಡಿಜಿಎಂ ರಮೇಶ ಕಾನಡೆ, ರೀಜನಲ್ ಹೆಡ್ ಪಂಕಜ ಕುಮಾರ ಸುಮನ್, ಅರಣ್ಯ ಇಲಾಖೆಯ ಎಸಿಎಫ್ ವಿಜಯ ಕಾಳಪ್ಪ, ಬ್ಯಾಂಕಿನ ಗ್ರಾಹಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.