ದಿ ರೇಲ್ವೆ ಕೋ ಆಪರೇಟಿವ್ ಬ್ಯಾಂಕ್ ಗೆ 12.27 ಕೋಟಿ ಲಾಭ

| Published : Sep 21 2025, 02:00 AM IST

ಸಾರಾಂಶ

ಬ್ಯಾಂಕಿನ ಸಾಧನೆಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು, ಬ್ಯಾಂಕ್ 2024-25ನೇ ಹಣಕಾಸು ವರ್ಷದಲ್ಲಿ ರೂ. 12,27,58,552.16 ಗಳ ಕೋಟಿ ರು. ಲಾಭ ಗಳಿಸಿದ್ದು,

ಕನ್ನಡಪ್ರಭ ವಾರ್ತೆ ಮೈಸೂರುದಿ ರೇಲ್ವೆ ಕೋ ಆಪರೇಟಿವ್ ಬ್ಯಾಂಕ್ 12.27 ಕೋಟಿ ಲಾಭ ಗಳಿಸಿದೆ ಎಂದುಬ್ಯಾಂಕಿನ ಅಧ್ಯಕ್ಷ ಎಂ.ಬಿ. ಮಂಜೇಗೌಡ ಹೇಳಿದರು.ಬ್ಯಾಂಕಿನ 106ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಸಾಧನೆಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು, ಬ್ಯಾಂಕ್ 2024-25ನೇ ಹಣಕಾಸು ವರ್ಷದಲ್ಲಿ ರೂ. 12,27,58,552.16 ಗಳ ಕೋಟಿ ರು. ಲಾಭ ಗಳಿಸಿದ್ದು, ಬ್ಯಾಂಕ್ ಅನ್ನು ದಕ್ಷಿಣ ಭಾರತದ ಇತರೆ ರಾಜ್ಯಗಳಿಗೂ ತನ್ನ ಕಾರ್ಯಚಟುವಟಿಕೆ ಮತ್ತು ಬ್ಯಾಂಕ್ ವಹಿವಾಟುಗಳನ್ನು ವಿಸ್ತರಿಸಲು ತೀರ್ಮಾನಿಸಿದೆ ಎಂದು ತಿಳಿಸಿದರು.ರು. 510 ಕೋಟಿ ಬೃಹದಾಕಾರವಾಗಿ ಠೇವಣಿ ಹೊಂದಿರುವುದನ್ನು, ರು. 66 ಕೋಟಿ ಷೇರು ಬಂಡವಾಳವಿರುವುದನ್ನು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿರುವ ಬಗ್ಗೆ ಸಭೆಗೆ ತಿಳಿಸಿದರು. ಬ್ಯಾಂಕಿನಲ್ಲಿ ಸದಸ್ಯರಿಗೆ ಚಿನ್ನಾಭರಣದ ಸಾಲವನ್ನು ರು. 25 ಲಕ್ಷಗಳಿಗೆ ವಿತರಿಸುತ್ತಿರುವುದನ್ನು ತಿಳಿಸಿದರು ಮತ್ತು ಮುಂದಿನ ದಿನಗಳಲ್ಲಿ ಸಾಲದ ಮೇಲಿನ ಬಡ್ಡಿದರವನ್ನು ಸದಸ್ಯರಿಗೆ ಅನುಕೂಲವಾಗುವಂತೆ ಪರಿಷ್ಕರಿಸಲಾಗುವುದು, ವಿದ್ಯಾಭ್ಯಾಸದ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡಲು ಗುರಿ ಹೊಂದಿರುವುದಾಗಿ ಸಭೆಯಲ್ಲಿ ಎಲ್ಲ ಸದಸ್ಯರಿಗೆ ತಿಳಿಸಿದರು.ಉಪಾಧ್ಯಕ್ಷ ಎಸ್. ಆನಂದ ಹಾಗೂ ನಿರ್ದೇಶಕರಾದ ಹನುಮಂತ, ಎಂ.ಬಿ. ಯೋಗಾನಂದ, ಎಸ್. ಮುತ್ತುಕುಮಾ‌ರ್, ಆರ್. ಚಂದ್ರಶೇಖರ, ಎಂ. ಯತಿರಾಜು, ಸಿ. ರಾಮನಾದನ್, ಸಿ.ಎಚ್‌. ಮಂಜುನಾಥ, ಸಿ. ಶಿವಶಂಕರ್, ಎಸ್‌. ಉತ್ತೇಜ್, ಎಸ್. ಶ್ವೇತಾ, ಸಿ. ನಿರ್ಮಲ, ಪಿ. ಚಂದ್ರಶೇಖರ್, ಎನ್.ಎಸ್‌. ನಂದಕುಮಾರ್, ಬ್ಯಾಂಕಿನ ಸಿಇಒ, ಪ್ರಧಾನ ವ್ಯವಸ್ಥಾಪಕರು, ಎಲ್ಲ ಸದಸ್ಯರು ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದವರು ಇದ್ದರು.ಬ್ಯಾಂಕ್ ಶತಮಾನೋತ್ಸವದ ನಂತರವೂ ಶ್ರೇಷ್ಟ ಸಾಧನೆಗಳನ್ನು ಮುಂದುವರೆಸುತ್ತಿರುವುದು ಗಮನಾರ್ಹ, ಅಧ್ಯಕ್ಷರು ತಮ್ಮ ಭಾಷಣದಲ್ಲಿ ಯಶಸ್ವಿಗೆ ಕಾರಣರಾದ ಸದಸ್ಯರು, ಠೇವಣಿದಾರರು, ಗ್ರಾಹಕರು ಮತ್ತು ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.