ಈ ಹಿಂದೆ ನಾವು ಏನು ಕೆಲಸ ಮಾಡಿದ್ದೇವೆ ಹಾಗೂ ಗುರಿ ನಿಗದಿಪಡಿಸಿದ ಅನ್ವಯ ಮುಂದೆ ಏನು ಮಾಡಬೇಕಾಗಿದೆ ಎಂಬುದನ್ನು ಅರಿತು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡುವುದು ಬ್ಯಾಂಕಿನ ಪ್ರಗತಿಗೆ ಪೂರಕವಾಗುತ್ತದೆ.

ಗದಗ: ತರಬೇತಿಯಿಂದ ಜ್ಞಾನವನ್ನು ಹೆಚ್ಚಿಸಿಕೊಂಡು ವೃತ್ತಿ ಕೌಶಲ್ಯಗಳನ್ನು ಬಳಸಿಕೊಂಡು ಬ್ಯಾಂಕಿನ ಸೌಲಭ್ಯಗಳನ್ನು ಗ್ರಾಹಕರಿಗೆ ಸಂಪೂರ್ಣವಾಗಿ ತಲುಪಿಸಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ ತಿಳಿಸಿದರು.

ನಗರದಲ್ಲಿ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯುನಿಯನ್ ಹಾಗೂ ಕೆಸಿಸಿ ಬ್ಯಾಂಕ್ ಆಶ್ರಯದಲ್ಲಿ ಜಿಲ್ಲೆಯ ಕೆಸಿಸಿ ಬ್ಯಾಂಕ್ ಶಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಈ ಹಿಂದೆ ನಾವು ಏನು ಕೆಲಸ ಮಾಡಿದ್ದೇವೆ ಹಾಗೂ ಗುರಿ ನಿಗದಿಪಡಿಸಿದ ಅನ್ವಯ ಮುಂದೆ ಏನು ಮಾಡಬೇಕಾಗಿದೆ ಎಂಬುದನ್ನು ಅರಿತು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡುವುದು ಬ್ಯಾಂಕಿನ ಪ್ರಗತಿಗೆ ಪೂರಕವಾಗುತ್ತದೆ. ಕೆಲಸ ನಿರ್ವಹಿಸುವಾಗ ಸಹಕಾರಿ ಕಾನೂನು, ಆರ್‌ಬಿಐ ಮತ್ತು ನಬಾರ್ಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.ಕೆಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದಗೌಡ ವಿ. ಪಾಟೀಲ ಮಾತನಾಡಿ, ಬದಲಾವಣೆಯೊಂದಿಗೆ ಬದಲಾಯಿಸಿ, ಇಲ್ಲದಿದ್ದರೆ ಬದಲಾವಣೆಯು ನಿಮ್ಮನ್ನು ಬದಲಾಯಿಸುತ್ತದೆ. ಇಂದಿನ ಕ್ರಿಯಾತ್ಮಕ ವಾತಾವರಣದಲ್ಲಿ ಈ ಸಂದೇಶವು ಎಂದಿಗಿಂತಲೂ ಹೆಚ್ಚು ನಿಜವಾಗಿದೆ. ಸಹಕಾರಿ ಸಂಸ್ಥೆಗಳು ಕಾರ್ಯತಂತ್ರಗಳು, ಪ್ರಕ್ರಿಯೆಗಳು ಮತ್ತು ಕಾನೂನಾತ್ಮಕ ವಿಷಯಗಳನ್ನು ಅರಿತುಕೊಂಡು ಮರುಮೌಲ್ಯಮಾಪನ ಮಾಡಲು ಉತ್ತಮ ಸಮಯ ಎಂದರು.

ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿದರು. ನಿವೃತ್ತ ಪ್ರಾದೇಶಿಕ ವ್ಯವಸ್ಥಾಪಕ ಸಿದ್ದರಾಮೇಗೌಡ, ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕಿನ ವಿಶ್ರಾಂತ ವ್ಯವಸ್ಥಾಪಕ ಎಸ್.ಜಿ. ಕುಲಕರ್ಣಿ ಉಪನ್ಯಾಸ ನೀಡಿದರು. ವೈ.ಎಫ್. ಪಾಟೀಲ, ಬಿ.ಬಿ. ನಾಯಕ, ಎಸ್.ಎಂ. ಚಿಕ್ಕಮಠ, ಎಂ.ಡಿ. ರಾಜು, ಮೃತ್ಯುಂಜಯ ಹಿರೇಮಠ, ಗಂಗಮ್ಮ ಗದ್ದಿಗೌಡರ, ಮಲ್ಲಪ್ಪ ಕಲ್ಲಗುಡಿ ಸೇರಿದಂತೆ ಇತರರು ಇದ್ದರು. ಎಸ್.ವಿ. ಹೂಗಾರ ಸ್ವಾಗತಿಸಿದರು. ಚಂದ್ರಶೇಖರ ಎಸ್. ಕರಿಯಪ್ಪನವರ ನಿರೂಪಿಸಿದರು. ಆರ್.ಸಿ. ಯಲಿಗಾರ ವಂದಿಸಿದರು.