ಬಂಟ್ವಾಳ: ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾಮದಪದವು ಶಾಖೆಯು ಬಸ್ತಿಕೋಡಿ ಹರ್ಕಾಡಿ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು‌.

ಪ್ರಾಮಾಣಿಕ ಸಾಲ ಮರುಪಾವತಿ ಶ್ಲಾಘನೀಯ: ರಮಾನಾಥ ರೈಬಂಟ್ವಾಳ: ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾಮದಪದವು ಶಾಖೆಯು ಬಸ್ತಿಕೋಡಿ ಹರ್ಕಾಡಿ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು‌.ಅಜ್ಜಿಬೆಟ್ಟು ಪಾಂಗಲ್ಪಾಡಿ‌ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕೇಸರ ಶ್ರೀಪಾದ ಪಾಂಗಣ್ಣಾಯ ನೂತನ ಶಾಖೆಯನ್ನು ಉದ್ಘಾಟಿಸಿ, ಈ ಶಾಖೆ ಸಮಾಜಮುಖಿ, ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಸಮಾಜಕ್ಕೆ ಸಹಕಾರಿಯಾಗಲಿ ಎಂದು ಹಾರೈಸಿದರು.ಬಂಟ್ವಾಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಸಭಾಧ್ಯಕ್ಷತೆ ವಹಿಸಿದ್ದರು. ನೂತನ ಶಾಖೆ ತೆರೆಯುವುದರಿಂದ ಒಂದಷ್ಟು ಮಂದಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಗ್ರಾಹಕರು ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಸಕಾಲದಲ್ಲಿ ಮರುಪಾವತಿಸುವುದರಿಂದ ಸೊಸೈಟಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದರು.

ಚೆನೈತ್ತೋಡಿ ಗ್ರಾಪಂ ಅಧ್ಯಕ್ಷೆ ವನಿತಾ ಗಣಕೀಕರಣ, ಉದ್ಯಮಿ ಸೀತಾರಾಮ ಪೈ ಭದ್ರತಾ ಕೊಠಡಿ ಉದ್ಘಾಟಿಸಿದರು. ಮಂಗಳೂರು ಸಹಕಾರಿ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್., ನೀರ್ಕಾನ ಸಂತ ತೋಮಸರ ದೇವಾಲಯದ ಧರ್ಮಗುರುಗಳಾದ ಫಾ. ಅನಿಲ್ ರೋಶನ್ ಲೋಬೋ, ವಾಮದಪದವುಬಿಲ್ಲವ ಸಂಘದ ಅಧ್ಯಕ್ಷ ಚೇತನ್ ಪೂಜಾರಿ, ಕಟ್ಟಡ ಮಾಲೀಕ ಅಮ್ಮು ರೈ ಹರ್ಕಾಡಿ,ವಾಮದಪದವು ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ, ವಾಮದಪದವು ಕುಲಾಲ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಉದ್ಯಮಿ ಹಂಝ ಬಸ್ತಿಕೋಡಿ, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಶುಭಹಾರೈಸಿದರು.ಕಟ್ಟಡ ಮಾಲೀಕ ಅಮ್ಮ ರೈ ಹಾಗೂ ಎಜಿನಿಯರ್ ದಿನೇಶ್ ರೈ ಅವರನ್ನು ಸನ್ಮಾನಿಸಲಾಯಿತು. ಸೊಸೈಟಿ ಉಪಾಧ್ಯಕ್ಷ ನಾರಾಯಣ ನಾಯ್ಕ,ನಿರ್ದೇಶಕ ಬಿ.ಎಂ. ಅಬ್ಬಾಸ್ ಆಲಿ, ಪಿಯೂಸ್ ಎಲ್. ರೋಡ್ರಿಗಸ್, ಅಲ್ಪೋನ್ಸ್ ಮಿನೇಜಸ್, ಪದ್ಮಶೇಖರ್ ಜೈನ್, ಕಾಂಚಾಲಾಕ್ಷಿ, ಅಮ್ಮು ಅರ್ಬಿಗುಡ್ಡೆ, ಶಾಖಾ ವ್ಯವಸ್ಥಾಪಕಿ ಸುಶ್ಮಿತ ಉಪಸ್ಥಿತರಿದ್ದರು. ನಿರ್ದೇಶಕ ಚಂದ್ರಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಬಿಕುಂದರ್ ಪ್ರಸ್ತಾವನೆಗೈದರು. ಸಲಹಾ ಸಮಿತಿ ಸದಸ್ಯ ನವೀನ್ ಚಂದ್ರ ಶೆಟ್ಟಿ ವಂದಿಸಿದರು. ರಂಗ ಕಲಾವಿದ ಎಚ್.ಕೆ. ನಯನಾಡು ನಿರೂಪಿಸಿದರು.