ಮಾಜಿ ಕೇಂದ್ರ ಸಚಿವ ಪೂಜಾರಿ ಮತದಾನ

| Published : Apr 17 2024, 01:19 AM IST

ಸಾರಾಂಶ

ಕೇಂದ್ರದ ಮಾಜಿ ಸಚಿವ ಶ್ರೀ ಜನಾರ್ದನ ಪೂಜಾರಿಯವರ ಬಿ ಮೂಡಾ ಗ್ರಾಮದ ಬಸ್ತಿಪಡ್ಪುವಿನಲ್ಲಿರುವ ನಿವಾಸಕ್ಕೆ ತೆರಳಿ ಎ.೧೬ ರಂದು ಮತದಾನ ಪ್ರಕ್ರಿಯೆ ನಡೆಸಲಾಯಿತು.

ಬಂಟ್ವಾಳ; ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷಕ್ಕೆ ಮೇಲ್ಪಟ್ಟ ಮತ್ತು ಶೇಕಡಾ 40 ಕ್ಕಿಂತ ಹೆಚ್ಚಿನ ಅಂಗವೈಕಲ್ಯತೆ ಹೊಂದಿದ ಮತದಾರರ ಮನೆಗಳಿಗೆ ಮತಗಟ್ಟೆ ಅಧಿಕಾರಿಗಳ ತಂಡವು ತೆರಳಿ ಮತದಾನ ಮಾಡಿಸುವ ಪ್ರಕ್ರಿಯೆ ಬಂಟ್ವಾಳದಲ್ಲಿ ನಡೆಯುತ್ತಿದೆ.

ಕೇಂದ್ರದ ಮಾಜಿ ಸಚಿವ ಶ್ರೀ ಜನಾರ್ದನ ಪೂಜಾರಿಯವರ ಬಿ ಮೂಡಾ ಗ್ರಾಮದ ಬಸ್ತಿಪಡ್ಪುವಿನಲ್ಲಿರುವ ನಿವಾಸಕ್ಕೆ ತೆರಳಿ ಎ.೧೬ ರಂದು ಮತದಾನ ಪ್ರಕ್ರಿಯೆ ನಡೆಸಲಾಯಿತು. ಮತದಾರರ ಪಟ್ಟಿಯಂತೆ ಇವರಿಗೆ 87 ವರ್ಷ ವಯಸ್ಸಾಗಿದ್ದು, ಈ ಹಿಂದೆ ಭಂಡಾರಿಬೆಟ್ಟು ಶಾಲೆಯ ಭಾಗಸಂಖೈ 130 ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದರು.