ನೆಟ್ಲಮುಡ್ನೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳ ವತಿಯಿಂದ 2021-26 ನೇ ಸಾಲಿನ ಸದಸ್ಯರಿಗೆ ಗೌರವಾರ್ಪಣೆ ಕಾರ್‍ಯಕ್ರಮ ಗ್ರಾಪಂ ಸಭಾಂಗಣದಲ್ಲಿ

ಬಂಟ್ವಾಳ: ನೆಟ್ಲಮುಡ್ನೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳ ವತಿಯಿಂದ 2021-26 ನೇ ಸಾಲಿನ ಸದಸ್ಯರಿಗೆ ಗೌರವಾರ್ಪಣೆ ಕಾರ್‍ಯಕ್ರಮ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.ಪಿಡಿಒ ಅನುಷಾ ಮಾತನಾಡಿ, ಗ್ರಾಪಂಗೆ ಬಂದಂತಹ ಅನುದಾನಗಳನ್ನು ಸದಸ್ಯರು ತಮ್ಮ ವಾರ್ಡ್ ಗಳ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಸದಾ ಕ್ರಿಯಾಶೀಲರಾಗಿ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಗೌರವಾರ್ಪಣೆ ಸ್ವೀಕರಿಸಿದ ಗ್ರಾಪಂ ಅಧ್ಯಕ್ಷೆ ಸಮಿತಾ ಡಿ. ಪೂಜಾರಿ, ಉಪಾಧ್ಯಕ್ಷ ಸಚ್ಚಿದಾನಂದ ಪೂಜಾರಿ, ಸದಸ್ಯರಾದ ಅಬ್ದುಲ್ ಲತೀಫ್, ಶ್ರೀಧರ ರೈ, ಅಶೋಕ್ ರೈ ಮಾತನಾಡಿ, ಪಿಡಒ ಹಾಗೂ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಉತ್ತಮ ಸಹಕಾರ ನೀಡಿದ್ದಾರೆ. ಮುಂದೆಯೂ ನಿಮ್ಮ ಕಾರ್‍ಯಕ್ಷಮತೆ ಇದೇ ರೀತಿ ಮುಂದುವರಿಯಲಿ ಎಂದರು.ಸದಸ್ಯರಾದ ಧನುಂಜಯ ಗೌಡ, ಪ್ರೇಮಾ, ಲಕ್ಷ್ಮೀ, ಶಕೀಲಾ ಕೆ. ಪೂಜಾರಿ, ಶಾಲಿನಿ, ಸುಜಾತಾ ಗೌರವ ಅಭಿನಂದನೆ ಸ್ವೀಕರಿಸಿದರು.

ಇದೇ ವೇಳೆ ಗ್ರಾಪಂನ ಶೇ. 25 ಮತ್ತು ಶೇ. 5ರ ಫಲಾನುಭವಿಗಳಿಗೆ ಗ್ರಾಪಂ ಅಧ್ಯಕ್ಷೆ ಸಮಿತಾ ಡಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸೋಲಾರ್ ಲೈಟ್ ಹಾಗೂ ಚೆಕ್ ವಿತರಣಾ ಕಾರ್‍ಯಕ್ರಮ ನಡೆಯಿತು.

ಸಿಬ್ಬಂದಿಗಳಾದ ದೀಪ್ತಿ ಸ್ವಾಗತಿಸಿ, ಸೌಮ್ಯ ವಂದಿಸಿದರು. ಶಶಿಧರ ಹಾಗೂ ಉಪೇಂದ್ರ ಕಾರ್‍ಯಕ್ರಮ ನಿರೂಪಿಸಿದರು.