ಸಾರಾಂಶ
ಗ್ರಾಮೀಣ ಜನರ ಕಲೆ, ಕೃಷಿ, ಸಾಂಸ್ಕೃತಿಕ ಚಟುವಟಿಕೆ, ಸಂಸ್ಕೃತಿ ಬಿಂಬಿಸುವಲ್ಲಿ ಬಾನುಲಿ ಕೇಂದ್ರಗಳು ಮಹತ್ವಪೂರ್ಣ ಪಾತ್ರ ವಹಿಸುತ್ತಿವೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಗ್ರಾಮೀಣ ಜನರ ಕಲೆ, ಕೃಷಿ, ಸಾಂಸ್ಕೃತಿಕ ಚಟುವಟಿಕೆ, ಸಂಸ್ಕೃತಿ ಬಿಂಬಿಸುವಲ್ಲಿ ಬಾನುಲಿ ಕೇಂದ್ರಗಳು ಮಹತ್ವಪೂರ್ಣ ಪಾತ್ರ ವಹಿಸುತ್ತಿವೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.ಶುಕ್ರವಾರ ನಗರದ ಗೋಕಾಕ ಶಿಕ್ಷಣ ಸಂಸ್ಥೆಯ 60ನೇ ವರ್ಷದ ಸವಿನೆನಪಿನಲ್ಲಿ ಹೊಸದಾಗಿ ಪ್ರಾರಂಭಿಸಿದ ನೂತನ ವಾಯ್ಸ ಆಫ್ ಗೋಕಾಕ 89.6 ಸಮುದಾಯ ಬಾನುಲಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದೇ ಕಷ್ಟ ಸಾಧ್ಯ ಇರುವಾಗ ಇಲ್ಲಿ ರೇಡಿಯೋ ಕೇಂದ್ರ ಮಾಡಿದ್ದು ಶ್ಲಾಘನೀಯ, ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ಸಮುದಾಯ ಬಾನೂಲಿ ಕೇಂದ್ರ ಕಾರ್ಯ ಮಾಡುತ್ತಿವೆ ಎಂದು ಹೇಳಿದರು.ಚಿಕ್ಕೋಡಿ ಲೋಕಸಭೆ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಜನರು ಮೊಬೈಲ್‌ನಲ್ಲಿ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅವರಿಗೆ ಸೂಕ್ತ ಮಾಹಿತಿ ನೀಡುವ ಕಾರ್ಯ ವಾಯ್ಸ್ ಆಫ್ ಗೋಕಾಕ 86.9 ಬಾನುಲಿ ಕೇಂದ್ರ ಮಾಡಲಿ. ಮಹಿಳೆಯರಿಗೆ ಅನುಕೂಲವಾಗುವ ಕಾರ್ಯಕ್ರಮ ಏರ್ಪಡಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಯುವ ಜನರಿಗೆ ಪರಿಚಯಿಸುವ, ಕಲೆ ಮತ್ತು ಸಂಸ್ಕೃತಿ ಬೆಳೆಸುವ ಕಾರ್ಯವಾಗಬೇಕು. ಸ್ಥಳೀಯ ಗಾಯನ, ಹಾಸ್ಯ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಈ ಬಾನುಲಿ ಕೇಂದ್ರದಲ್ಲಿ ಆಗಬೇಕು ಎಂದು ಹೇಳಿದರು.
ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವನಾಥ್ ಕಡಕೋಳ ಅಧ್ಯಕ್ಷತೆ ವಹಿಸಿದ್ದರು. ವಿಸ್ವಸ್ಥ ಮಂಡಳಿ ಅಧ್ಯಕ್ಷ ಯು.ಬಿ. ಆಜರೆ, ಕಾರ್ಯದರ್ಶಿ ಆರ್.ಎಂ. ವಾಲಿ, ನಿವೃತ್ತ ಸೇನಾಧಕಾರಿ ಬ್ರಿಗೇಡಿರ ಬಿ.ಎಂ. ಪೂರ್ವಿಮಠ , ನಿರ್ದೇಶಕರಾದ ಆಜಯ ಜಾಧವ, ನೀಲಕಂಠ ಪಟ್ಟಣಶೆಟ್ಟಿ, ಪ್ರಕಾಶ್ ಕೋಲಾರ, ಶಶಿಲ ಮುನ್ನವಳ್ಳಿ ಡಾ.ವಿರಭದ್ರಪ್ಪ ಉಪ್ಪಿನ, ಮಹಾಂತೇಶ ತಾವಂಶಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.