ಬಾರ್ಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಡ್ಸ್‌ ಜಾಗೃತಿ

| Published : Mar 19 2025, 12:34 AM IST

ಬಾರ್ಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಡ್ಸ್‌ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾರಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್, ರೆಡ್ ರಿಬ್ಬನ್ ಕ್ಲಬ್, ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಹಯೋಗದಲ್ಲಿ ಏಡ್ಸ್ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಏಡ್ಸ್ ಎಂಬ ಮಾರಕ ಕಾಯಿಲೆ ಬಗ್ಗೆ ಅರಿವು ಮೂಡಿಸುದರ ಮೂಲಕ ಮಾತ್ರವೇ ತಡೆಗಟ್ಟುವುದು ಸಾಧ್ಯ, ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದುದು. ಏಡ್ಸ್ ಸಂತ್ರಸ್ತರನ್ನು ಗೌರಪೂರ್ಣವಾಗಿ ನೋಡಿಕೊಂಡು ಅವರ ಬದುಕುವ ಹಕ್ಕನ್ನು ಕಾಪಾಡುವುದು ನಮ್ಮ ಉದ್ದೇಶವಾಗಿರಬೇಕು ಎಂದು ಇಲ್ಲಿನ ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಪ್ರಾಂಶಪಾಲ ಡಾ. ಎಸ್ ಭಾಸ್ಕರ ಶೆಟ್ಟಿ ಸಲ್ವಾಡಿ ಹೇಳಿದ್ದಾರೆ.

ಬಾರಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್, ರೆಡ್ ರಿಬ್ಬನ್ ಕ್ಲಬ್, ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ಏಡ್ಸ್ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಮೇಲ್ವಿಚಾರಕ ಮಹಾಬಲೇಶ್ವರ್ ಬಿ. ಉಡುಪಿ ಭಾಗವಹಿಸಿದ್ದರು. ಅವರು ಏಡ್ಸ್ ಪಿಡುಗಿನ ಹಿನ್ನಲೆ, ಪ್ರಸ್ತುತ ಪರಿಸ್ಥಿಯಲ್ಲಿ ಯುವ ಸಮುದಾಯ ಈ ಪಿಡುಗಿಗೆ ಗುರಿಯಾಗುವ ಸಾಧ್ಯತೆಗಳು ಮತ್ತು ಏಡ್ಸ್ ಬಗ್ಗೆ ವಹಿಸಬೇಕಾದ ಜಾಗೃತಿ ಬಗ್ಗೆ ಮನವರಿಕೆ ಮಾಡಿದರು. ರಕ್ತದಾನ ಮಾಡಲು ಮುಂದಾಗುವ ಮೊದಲು ನೀವು ಒಳ್ಳೆಯ ದೈಹಿಕ ಸದೃಢತೆಯ ಜೊತೆಗೆ ಉತ್ತಮ ಆರೋಗ್ಯ ಹೊಂದಿರಬೇಕು ಎಂದು ಹೇಳಿದರು.

ದ್ವಿತೀಯ ಬಿ.ಸಿ.ಎ.ಯ ರಕ್ಷಿತಾ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಧಾಕೃಷ್ಣ ನಾಯಕ್ ವಂದಿಸಿದರು. ಬಿ.ಕಾಂನ ವಿದ್ಯಾರ್ಥಿನಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ಈ ಜಾಗೃತಿ ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.