ಇಲ್ಲಿನ ಪೆರಂಪಳ್ಳಿ ಚರ್ಚ್ ಪರಿಸರದಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಪೆರಂಪಳ್ಳಿಯ ಪವರ್ ಫ್ರೆಂಡ್ಸ್ ನೇತೃತ್ವದಲ್ಲಿ, ಅನಿಶ್ ಜನರಲ್ ಸ್ಟೋರ್ಸ್, ಯೂನಿಯನ್ ಬ್ಯಾಂಕ್, ಹಾಗೂ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಗಳ ಸಹಕಾರದಿಂದ ಪೊಲೀಸ್ ಇಲಾಖೆಗೆ 6 ಬ್ಯಾರಿಕೇಡ್‌ಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸ್ಥಳೀಯ ಫಾತಿಮಾ ಮಾತೆ ಚರ್ಚ್‌ನ ಧರ್ಮಗುರು ವಂ. ರೆಜಿನೋಲ್ಡ್ ಪಿಂಟೋ ಅವರು ಬ್ಯಾರಿಕೇಡ್‌ ಗಳನ್ನು ಉದ್ಘಾಟಿಸಿದರು, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಉಪಸ್ಥಿತರಿದ್ದರು.

ಮಣಿಪಾಲ ಠಾಣೆಯ ಮುಖ್ಯ ಪೊಲೀಸ್ ಅಧಿಕಾರಿ ಮಹೇಶ್ ಪ್ರಸಾದ್ ಅವರು ಪವರ್ ಫ್ರೆಂಡ್ಸ್ ಸಂಘಟನೆಗೆ ಧನ್ಯವಾದ ತಿಳಿಸಿ ಊರಿನ ಒಳಿತಿಗಾಗಿ ದಾನಿಗಳ ನೆರವಿನಿಂದ ಅಪಘಾತ ನಿಯಂತ್ರಿಸಲು ಬ್ಯಾರಿಕೇಡ್‌ಗಳ ಅಳವಡಿಸುವುದರ ಮೂಲಕ ವಾಹನ ಸವಾರರಿಗೆ ಹಾಗೂ ನಾಗರಿಕರಿಗೆ ಎಚ್ಚರ ವಹಿಸಲು ಇದೊಂದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.

ಪವರ್ ಫ್ರೆಂಡ್ಸ್ ಅಧ್ಯಕ್ಷ ಅನಿಲ್ ಗೊನ್ಸಲ್ವಿಸ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪೆರಂಪಳ್ಳಿ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದ್ಯಸರು, ಊರಿನ ನಾಗರಿಕರು ಉಪಸ್ಥಿತರಿದ್ದರು. ಕೃಷಿಕ ಸಂಘದ ಮಾಜಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಶ್ರೀಯಾನ್ ಅವರು ನಿರೂಪಿಸಿ, ಸ್ವಾಗತಿಸಿ ಹಾಗೂ ವಂದಿಸಿದರು.