ಸಾರಾಂಶ
ಗದಗ: ನಗರದ ತೋಂಟದಾರ್ಯ ಜಾತ್ರಾ ಮಹೋತ್ಸವಕ್ಕೆ ದಾಸೋಹಕ್ಕಾಗಿ ಇಲ್ಲಿಯ ಬಸವೇಶ್ವರ ನಗರದ ಭಕ್ತಾಧಿಗಳು ಬಸವ ಬುತ್ತಿಯ ಸೇವಾ ಕೈಂಕರ್ಯ ಸಲ್ಲಿಸಿದರು.ದಾನೇಶ್ವರಿ ಮಹಿಳಾ ಮಂಡಳ ಸೇರಿದಂತೆ ಭಕ್ತಾಧಿಗಳು ಕರ್ಚಿಕಾಯಿ, ಖಡಕ್ ರೊಟ್ಟಿ, ಚಟ್ನಿಪುಡಿ, ಮೊಸರನ್ನದ ಬಸವ ಬುತ್ತಿಯನ್ನು ಬಸವೇಶ್ವರ ನಗರದ ವೀರಭದ್ರೇಶ್ವರ ದೇವಸ್ಥಾನಕ್ಕೆ ತಂದು ಅಲ್ಲಿಂದ ವಿಶೇಷ ವಾಹನದೊಂದಿಗೆ ತೋಂಟದಾರ್ಯ ಮಠಕ್ಕೆ ಶ್ರದ್ಧಾಭಕ್ತಿಯೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದರು.ಬಸವೇಶ್ವರ ನಗರದ ಸಮ್ಮಾಳ ಮೇಳ, ಹಸಿರು ಸೀರೆಯನ್ನುಟ್ಟ ನೂರಾರು ಮಹಿಳೆಯರು ಅಲ್ಲಲ್ಲಿ ಕೋಲಾಟ ಮಾಡುತ್ತ ಶ್ರದ್ಧಾಭಕ್ತಿ ಸಂಭ್ರಮ ಸಡಗರದೊಂದಿಗೆ ಬಸವ ವಚನ ಪಠಿಸುತ್ತ ಬಸವ ಬುತ್ತಿಯನ್ನು ವೀರಭದ್ರೇಶ್ವರ ದೇವಸ್ಥಾನದಿಂದ ಕರ್ನಾಟಕ ಟಾಕೀಜ್, ಮಹಾತ್ಮಾ ಗಾಂಧಿ ಸರ್ಕಲ್, ತೋಂಟದಾರ್ಯ ಮಠದ ಕಮಾನ್ ಮಾರ್ಗವಾಗಿ ತೋಂಟದಾರ್ಯ ಮಠವನ್ನು ತಲುಪಿದರು. ಬಸವೇಶ್ವರ ನಗರದ ಗುರು-ಹಿರಿಯರು, ಯುವಕರು ಮಹಿಳಾ ಮಂಡಳಕ್ಕೆ ಸಾಥ್ ನೀಡಿದರು.ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿಯ ಉಪಾಧ್ಯಕ್ಷೆ ಶೈಲಾ ಕೋಡೆಕಲ್ಲ, ದಾನೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಲಲಿತಾ ತಡಸದ, ರಾಜೇಶ್ವರಿ ಕುಬಸದ, ಶೋಭ ಗುಗ್ಗರಿ, ವಿಜಯಲಕ್ಷ್ಮಿ ಕುಬಸದ, ಸುರೇಖಾ ಪಿಳ್ಳೆ, ಮಹಾನಂದಾ ಯಂಡಿಗೇರಿ, ವಿಜಯಲಕ್ಷ್ಮಿ ಕಾತರಕಿ, ಶಿವಲೀಲಾ ಅಕ್ಕಿ, ಜಯಶ್ರೀ ಉಗಲಾಟದ, ವಿದ್ಯಾವತಿ ಗಡಗಿ, ಜ್ಯೋತಿ, ರಾಚಪ್ಪ ಮಿಣಜಗಿ, ಶಿವಪುತ್ರಪ್ಪ ಬೇವಿನಮರದ, ಶಂಭುಲಿಂಗಪ್ಪ ಕಾರಕಟ್ಟಿ, ಸುರೇಶ ಕೂಡೇಕಲ್ಲ, ಈರಣ್ಣ ಕಾತರಕಿ, ಪ್ರದೀಪ ಕೊಡೇಕಲ್ಲ, ಕುಬಸದ ಮುಂತಾದವರಿದ್ದರು.