ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಉತ್ತರ ಅಮೆರಿಕದ ಟೆಕ್ಸಾಸ್ ಡಲ್ಲಾಸ್‌ನ ಅಲೆನ್ ಸಿಟಿಯಲ್ಲಿ ಪ್ರತಿವರ್ಷ ಮೇ 3ರಂದು ಬಸವ ದಿನಾಚರಣೆ ಆಚರಿಸಲಾಗುವುದು.ಉತ್ತರ ಅಮೆರಿಕದ ವೀರಶೈವ-ಲಿಂಗಾಯತ ಸಮಾಜ(ವಿಎಸ್ಎನ್ಎ)ದಿಂದ ಅಲೆನ್ ಸಿಟಿಯಲ್ಲಿ ಮೇ 3ರಂದು ನಡೆದ ಬಸವ ದಿನಾಚರಣೆಯಲ್ಲಿ ಈ ಘೋಷಣೆ ಮಾಡಲಾಯಿತು. ನಗರದ ಮೇಯರ್ ಬೈನ್ ಎಲ್ ಬ್ರೂಕ್ಸ್ ಅವರು ವಿಎಸ್ಎನ್ಎ ಡಲ್ಲಾಸ್ ಶಾಖೆಯಲ್ಲಿ ನಡೆದ ಬಸವ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು, ಮೇ 3ರನ್ನು ‘ಬಸವ ದಿನ’ ಎಂದು ಘೋಷಿಸಿದರು.ಪೋರ್ಟ್ ಹುರಾನ್‌ನಲ್ಲಿ ವಿಎಸ್ಎನ್ಎನ್ 47ನೇ ಸಮಾವೇಶ:1978ರಲ್ಲಿ ಸ್ಥಾಪನೆಯಾದ ವಿಎಸ್ಎನ್ಎ, ಅಮೆರಿಕ ಮತ್ತು ಕೆನಡಾದಲ್ಲಿ 32 ಶಾಖೆಗಳನ್ನು ಹೊಂದಿದೆ. ವಿಎಸ್ಎನ್ಎನ 47ನೇ ಸಮಾವೇಶವನ್ನು ಈ ಬಾರಿ ಅಮೆರಿಕದ ಮಿಷಿಗನ್ ಡೆಟ್ರಾಯಿಟ್‌ನ ಪೋರ್ಟ್ ಹುರಾನ್ ನಗರದಲ್ಲಿ ಆಯೋಜಿಸಲಾಗುತ್ತಿದೆ. ಜೆಎಸ್ಎಸ್ ಮಠದ ಜಗದ್ಗುರು ದೇಶೀಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ನೊಣವಿನಕೆರೆ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ, ಹರಿಹರ ಮಠದ ಜಗದ್ಗುರು ವಚನಾನಂದ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವ ಎಂ.ಬಿ.ಪಾಟೀಲ್, ಸಂಸದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಶ್ರೀ ನವೀನ್ ಕೊಟ್ಟಿಗೆ ಮತ್ತಿತರ ಪ್ರಮುಖರಿಗೆ ಸಮಾವೇಶಕ್ಕೆ ಆಹ್ವಾನ ನೀಡಲಾಗಿದೆ.
===( ಸ್ಟೇಟ್ ಫೋಟೊದಲ್ಲಿ ಫೋಟೊಗಳಿವೆ).
==(ಪರಿಷ್ಕೃತ (ಇದನ್ನೇ ಬಳಸಿ)- ಫೋಟೊ-ಸುದ್ದಿ, ರಾಜ್ಯಪುಟಕ್ಕೆ ಕಡ್ಡಾಯ)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))