ಕಬ್ಬೂರಿನಲ್ಲಿ ಬಸವ ಜಯಂತಿ ಸಂಭ್ರಮ

| Published : May 14 2024, 01:07 AM IST

ಸಾರಾಂಶ

ಕಬ್ಬೂರ ಪಟ್ಟಣದಲ್ಲಿ ಬಸವ ದಳ ಸಹಯೋಗದಲ್ಲಿ ಬಸವ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬಸವೇಶ್ವರರ ಭಾವಚಿತ್ರ, ಸಹಸ್ರ ಸುಮಂಗಲೆಯರ ಪೂರ್ಣಕುಂಬಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕಬ್ಬೂರ

ಪಟ್ಟಣದಲ್ಲಿ ಬಸವ ದಳ ಸಹಯೋಗದಲ್ಲಿ ಬಸವ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬಸವೇಶ್ವರರ ಭಾವಚಿತ್ರ, ಸಹಸ್ರ ಸುಮಂಗಲೆಯರ ಪೂರ್ಣಕುಂಬಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜಗಜ್ಯೋತಿ ಬಸವೇಶ್ವರರ ಭಾವಚಿತ್ರವಿಟ್ಟು ತೆರೆದ ವಾಹನದಲ್ಲಿ ಮೆರವಣಿಗೆಯುದ್ದಕ್ಕೂ ಮನೆ ಎದುರು ವಾಹನ ಬರುತ್ತಿದಂತೆ ಮಹಿಳೆಯರು ಮಕ್ಕಳು ಭಕ್ತಿ ಭಾವದಿಂದ ನಮಸ್ಕರಿಸಿದರು. ಮೆರವಣಿಗೆಯಲ್ಲಿ ಕರಡಿ ಮಜಲು, ಹಾಗೂ ವಿವಿಧ ವಾದ್ಯ ಮೇಳಗಳು ಭಾಗವಹಿಸಿ ಮೆರುಗು ತುಂಬಿದವು. ಬಸವ ಜಯ ಘೋಷ, ವಚನಗಳ ಘೋಷಣೆಗಳು ಮೊಳಗಿದವು.

ಮೆರವಣಿಗೆಯು ಬಸವಣ್ಣ ದೇವಸ್ಥಾನದಿಂದ ಆರಂಭಗೊಂಡು ಸಿದ್ದೇಶ್ವರ ರೋಡ್‌, ತಳವಾರ ಗಲ್ಲಿ, ಅಗಸಿಬಾಗಿಲು, ಸೋಮವಾರ ಪೇಠ, ಬೆಲ್ಲದ ಗಲ್ಲಿ, ಪತ್ತಾರ ಗಲ್ಲಿ, ಬೆಲ್ಲದ ಬಾಗೇವಾಡಿ ಮುಖ್ಯ ರಸ್ತೆ ಮೂಲಕ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದು ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಬೆಂಗಳೂರಿನ ಉದ್ಯಮಿ ಮಹೇಶ ಬೆಲ್ಲದ, ಸಂಕೇಶ್ವರ ಹಿರಾಶುಗರ್‌ ನಿರ್ದೇಶಕ ಸುರೇಶ ಬೆಲ್ಲದ, ದಿ.ಕಬ್ಬೂರ ಅರ್ಬನ್‌ ಕೋ-ಆಫ್‌ ಸೊಸೈಟಿ ಅಧ್ಯಕ್ಷ ರಮೇಶ ಬೆಲ್ಲದ, ಪ್ರಕಾಶ ಬೆಲ್ಲದ, ಮಹಾದೇವ ಜಿವಣಿ, ಬಸಲಿಂಗ ಕಾಡೇಶಗೋಳ, ಮಹಾನಿಂಗ ಹಂಜಿ, ಮಾರುತಿ ಕಾಮಗೌಡ, ಕಾಶಪ್ಪ ಕಾಡೇಶಗೋಳ, ಮಲ್ಲಿಕಾರ್ಜುನ ನಂದಗಾಂವಿ, ಜಿ.ಬಿ.ಸಂಗಟೆ, ರಮೇಶ ಕುರಬೇಟ, ಮಹೇಶ ಗೊಜಗೊಜ್ಜಿ, ಮಲ್ಲಿಕಾರ್ಜುನ ಗುರವ, ಅಪ್ಪಾಸಾಬ ಕೋಟಿವಾಲೆ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.