ಯೋಗ,ಪ್ರಾಣಾಯಾಮ ತರಗತಿ ನಡೆಸುವ ಮೂಲಕ ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ಸಾಗಿಸುವ ಸೌಭಾಗ್ಯ ಕಲ್ಪಿಸಿ ಕೊಡುವುದಲ್ಲದೆ ಶರಣರ ಚಿಂತನೆ ಮಂಥನಗೊಳಿಸಲು ಅಣಿಮಾಡಿ ಸಮೃದ್ಧ ಬಾಳನ್ನು ಸಾಗಿಸಲು ಪ್ರೇರಣಾದಾಯಕ
ಯಲಬುರ್ಗಾ: ಯಾವುದೇ ಒಂದು ಜಾತಿ, ಧರ್ಮಕ್ಕೆ ಅಂಟಿಕೊಳ್ಳದೆ ಇಡೀ ಮಾನವ ಕುಲದ ಉದ್ಧಾರಕ್ಕಾಗಿ ಶ್ರಮಿಸಿದ ೧೨ನೇ ಶತಮಾನದ ಶರಣರ ದೃಷ್ಟಿಯಲ್ಲಿ ಎಲ್ಲರೂ ಸರಿ ಸಮಾನರಾಗಿದ್ದರು ಎಂದು ಜಿಪಂ ಮಾಜಿ ಸದಸ್ಯ ಸಿ.ಎಚ್. ಪಾಟೀಲ್ ಹೇಳಿದರು.
ಪಟ್ಟಣದ ಸಾಯಿ ಪ್ಯಾಲೇಸ್‌ನಲ್ಲಿ ಬಸವ ಶಿವಯೋಗ ಸಮಿತಿಯಿಂದ ಹಮ್ಮಿಕೊಂಡಿದ್ದ ಮಾಸಿಕ ಬಸವಾನುಭವ ಶಿವಶರಣರ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದರು.ಕಾರ್ಯಕ್ರಮ ಆಯೋಜಕ ಸಂಗಣ್ಣ ತೆಂಗಿನಕಾಯಿ, ಯೋಗ,ಪ್ರಾಣಾಯಾಮ ತರಗತಿ ನಡೆಸುವ ಮೂಲಕ ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ಸಾಗಿಸುವ ಸೌಭಾಗ್ಯ ಕಲ್ಪಿಸಿ ಕೊಡುವುದಲ್ಲದೆ ಶರಣರ ಚಿಂತನೆ ಮಂಥನಗೊಳಿಸಲು ಅಣಿಮಾಡಿ ಸಮೃದ್ಧ ಬಾಳನ್ನು ಸಾಗಿಸಲು ಪ್ರೇರಣಾದಾಯಕರಾಗಿದ್ದಾರೆ. ಪ್ರತಿ ತಿಂಗಳು ಶಿವಾನುಭವ ಗೋಷ್ಠಿ ಏರ್ಪಡಿಸುವ ಮೂಲಕ ಶರಣರ ತತ್ವ ಆದರ್ಶಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಅನುಭಾವದ ನುಡಿ ಕೇಳಿಸುವ ಮೂಲಕ ಸುಮಧರ ಜೀವನ ಕಟ್ಟಿಕೊಳ್ಳಲು ಪ್ರೋತ್ಸಾಯಿಸುತ್ತಿದ್ದಾರೆ. ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಡೋಹರ ಕಕ್ಕಯ್ಯ ಬಗ್ಗೆ ಕರಮುಡಿಯ ಶಾಂತಮ್ಮ ಕಂಪಗೌಡರ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಬಸವರಾಜ ಕರಾಟೆ ಉಪನ್ಯಾಸ ನೀಡಿದರು.ಇದೆ ವೇಳೆ ಮರುಳ ಶಂಕರದೇವ, ಕಿನ್ನರಿ ಬೊಮ್ಮಯ್ಯನವರ ಜಯಂತಿ ಆಚರಿಸಲಾಯಿತು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಎನ್. ಶ್ಯಾಗೋಟಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಮಾತನಾಡಿದರು. ಕೃತಿಕಾರ ದಾದೇಸಾಬ್ ಮುದಗಲ್ಲರನ್ನು ಸನ್ಮಾನಿಸಲಾಯಿತು. ಬಸವ ಶಿವಯೋಗ ಸಮಿತಿ ಅಧ್ಯಕ್ಷ ಸಂಗಣ್ಣ ತೆಂಗಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಅಕ್ಷಯ ಪಬ್ಲಿಕ ಶಾಲೆಯ ಮಕ್ಕಳು ಶರಣರ ವೇಷಭೂಷಣ ಧರಿಸಿ ಗಮನ ಸೆಳೆದರು.ಈ ಸಂದರ್ಭ ಡೋಹರ ಸಮಾಜದ ಅಧ್ಯಕ್ಷ ನಾರಯಣಪ್ಪ, ರಾಜಶೇಖರ ನಿಂಗೋಜಿ, ಬಸವರಾಜ ಗುಳಗುಳಿ, ಶರಣೇಶ ಉಳ್ಳಾಗಡ್ಡಿ, ವಿರೂಪಾಕ್ಷಪ್ಫ ಹನುಮಶೆಟ್ಟಿ, ಡಾ. ಶಿವನಗೌಡ ದಾನರಡ್ಡಿ, ಸಿದ್ಧಲಿಂಗಪ್ಪ ಶ್ಯಾಗೋಟಿ, ಮುಖ್ಯಶಿಕ್ಷಕಿ ಸವಿತಾ ಓಜನಹಳ್ಳಿ, ನಿ. ಶಿಕ್ಷಕ ಅಶೋಕ ಮಾಲಿಪಾಟೀಲ್, ಸಿದ್ಧಾರೂಢ, ವೀರೇಶ ಟೆಂಗಿನಕಾಯಿ ಸೇರಿದಂತೆ ಮತ್ತಿತರರು ಇದ್ದರು.