ಮಾನವೀಯ ಮೌಲ್ಯಗಳ ರಾಜಧಾನಿ ಕಟ್ಟಿದ್ದ ಬಸವಣ್ಣ: ಸಚಿವ ಶಿವಾನಂದ ಪಾಟೀಲ

| Published : Feb 18 2024, 01:33 AM IST

ಮಾನವೀಯ ಮೌಲ್ಯಗಳ ರಾಜಧಾನಿ ಕಟ್ಟಿದ್ದ ಬಸವಣ್ಣ: ಸಚಿವ ಶಿವಾನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರು ಎಂಟು ನೂರು ವರ್ಷಗಳ ಹಿಂದೆಯೇ ಅನುಭವ ಮಂಟಪದ ಮೂಲಕ ಮಾನವೀಯ ಮೌಲ್ಯಗಳ ರಾಜಧಾನಿ ಕಟ್ಟಿದ್ದರು. ಮನುಷ್ಯ ಕಾಯಕ ಮಾಡಿ ಬದುಕಬೇಕು ಎಂದು ತೋರಿಸಿದ್ದರು.

ಕನ್ನಡಪ್ರಭ ವಾರ್ತೆ ಹಾವೇರಿ

ಬಸವಣ್ಣನವರು ಎಂಟು ನೂರು ವರ್ಷಗಳ ಹಿಂದೆಯೇ ಅನುಭವ ಮಂಟಪದ ಮೂಲಕ ಮಾನವೀಯ ಮೌಲ್ಯಗಳ ರಾಜಧಾನಿ ಕಟ್ಟಿದ್ದರು. ಮನುಷ್ಯ ಕಾಯಕ ಮಾಡಿ ಬದುಕಬೇಕು ಎಂದು ತೋರಿಸಿದ್ದರು. ಜಾತಿ ರಹಿತ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಶಿವಬಸವ ಕಲ್ಯಾಣಮಂಟಪದಲ್ಲಿ ಶನಿವಾರ ವಿಶ್ವಗುರು ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿಯೇ ಬಸವಣ್ಣನವರು ತಮ್ಮ ವಚನಗಳ ಮೂಲಕ ಜಗತ್ತಿಗೆ ದಾರಿದೀಪ ತೋರಿಸಿದ್ದಾರೆ. ಕೆಲವು ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ನೋಡಬಹುದು, ಅದರಲ್ಲಿಯೂ ಸಹ ಮಾನವೀಯ ಮೌಲ್ಯಗಳ ಪ್ರಜಾಪ್ರಭುತ್ವ ರಾಷ್ಟ್ರಗಳು ಬಹಳ ಕಡಿಮೆ. ಆದರೆ ಈ ದೇಶಕ್ಕೆ ಬಸವಣ್ಣನವರು ಮಾನವೀಯ ಮೌಲ್ಯಗಳ ಪ್ರಜಾಪ್ರಭುತ್ವ ನೀಡಿದ ಮೊಟ್ಟಮೊದಲ ವ್ಯಕ್ತಿ ಎಂದು ಬಣ್ಣಿಸಿದರು.

ಮನುಷ್ಯನಲ್ಲಿ ದೇವರನ್ನು ಕಂಡ ಮೊದಲ ವ್ಯಕ್ತಿ ಬಸವಣ್ಣ. ವರ್ಗ ರಹಿತ, ಜಾತಿ ರಹಿತ, ಜಾತಿ ರಹಿತ ಸಮಾಜ ಕಟ್ಟಬೇಕು ಎಂದು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಇಂದು ಅನೇಕ ರಾಷ್ಟ್ರಗಳಲ್ಲಿ ಕಲಹಗಳನ್ನು ನೋಡಲಾಗುತ್ತಿದೆ. ಎಲ್ಲಿ ಜಾತಿ ಇದೇ ಆ ದೇಶಗಳು ಉಳಿಯುವುದಿಲ್ಲ. ಇಂದು ಜಾತಿ ರಹಿತ ಸಮಾಜ ಕಟ್ಟಬೇಕಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಬಹುದಿನಗಳ ನೀರಿನ ಸಮಸ್ಯೆ ಪರಿಹಾರಕ್ಕೆ ತುಂಗಾನದಿ ನೀರು ತರುವುದು ನನ್ನ ಹಾಗೂ ಜಿಲ್ಲೆಯ ಶಾಸಕರ ಜವಾಬ್ದಾರಿಯಾಗಿದೆ. ಕುಡಿಯುವ ನೀರಿನ ಯೋಜನೆ 141 ಕೋಟಿ ಮಂಜೂರು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿ ದಿನ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಕೊನೆಯ ಪಕ್ಷ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವ ಮೂಲಕ ತಾಯಂದಿರು ಕೊಡುವ ಹೊರುವುದನ್ನು ತಪ್ಪಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹಾಗೂ ಇತರೆ ಅಧಿಕಾರಿಗಳು 1,300 ಕೋಟಿ ರೂ., ವೆಚ್ಚದಲ್ಲಿ ಜಿಲ್ಲೆಯ 704 ಗ್ರಾಮಗಳಿಗೆ ನೀರು ಕೊಡುವ ಕೆಲಸಮಾಡಿದ್ದಾರೆ. ಹಾವೇರಿ ನಗರದ ಪೂರೈಕೆಗೆ ಹಾಂಶಿ - ಶಾಕಾರ ಬಳಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗೆ ಕೆಲಸಗಳಿಗೆ ಎಲ್ಲ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಶಾಸಕರು ಹಾಗೂ ರಾಜ್ಯ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಬಸವಣ್ಣನವರ ಎಲ್ಲರ ಮನೆ ಮಾತಾಗಿದ್ದಾರೆ. ಅವರ ವಚನಗಳು ನಮಗೆ ದಾರಿದೀಪವಾಗಿವೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವರು 28 ಕೋಟಿ ಮಂಜೂರು ಮಾಡಿದ್ದಾರೆ. ಪ್ರಸ್ತುತ ನದಿಗಳಲ್ಲಿ ನೀರು ಇಲ್ಲದ ಕಾರಣ ನೀರಿನ ಸಮಸ್ಯೆ ಉಂಟಾಗಿದೆ. ಬರುವ 27*7 ನೀರು ಪೂರೈಕೆ ಮಾಡಲಾಗುವುದು ಎಂದರು.

ಮುಖ್ಯಮAತ್ರಿಗಳಾದ ಸಿದ್ದರಾಮಯ್ಯ ಅವರು ಫೆ.18ರಂದು ಜಿಲ್ಲೆಯ 411.60 ಕೋಟಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿAಗ ಸ್ವಾಮೀಜಿ ಮಾತನಾಡಿ, ಬಸವಣ್ಣ ಎಂದು ಆರದ ನಂದಾದೀಪ, ಜಗತ್ತಿಗೆ ಬೆಳಕಾದವರು, ಓದು ಬರಹ ಇಲ್ಲದವರನ್ನು ಅನುಭವ ಮಂಟಪದಲ್ಲಿ ಸೇರಿಕೊಂಡು ಶರಣರನ್ನಾಗಿ ರೂಪಿಸಿದರು. ಶೋಷಣೆ ರಹಿತ, ವರ್ಗ ರಹಿತ ಸಮ ಸಮಾಜ ನಿರ್ಮಾಣಕ್ಕೆ ಮುಂದಾದ ಮಹಾನ್ ಚೇತನ ಬಸವಣ್ಣ ಎಂದು ಹೇಳಿದರು.

ಎಂ.ಎಸ್. ಕೋರಿಶೆಟ್ಟ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಚೆನ್ನಪ್ಪ, ಜಿ.ಪಂ. ಮಾಜಿ ಅಧ್ಯಕ್ಷರಾದ ಕೊಟ್ರೇಶಪ್ಪ ಬಸೇಗಣ್ಣಿ, ಪರಮೇಶಪ್ಪ ಮೇಗಳಮನಿ, ಪಿ.ಡಿ. ಶಿರೂರ, ಮೈದೂರ, ಆನಂದಸ್ವಾಮಿ ಗಡ್ಡದ್ದೇವರಮಠ ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ವಂದಿಸಿದರು.