ಬಸವಣ್ಣ ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕ: ಬಸವಯೋಗಿ ಶ್ರೀ

| Published : Jan 29 2024, 01:30 AM IST

ಬಸವಣ್ಣ ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕ: ಬಸವಯೋಗಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣ ಕರ್ನಾಟಕ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕ ಎಂದು ಚಿಕ್ಕಮಗಳೂರಿನ ಬಸವಕೇಂದ್ರ, ಊಟಿಯ ಶ್ರೀಗುರುಬಸವ ಶಾಂತಿನಿಕೇತನ ಅಧ್ಯಕ್ಷ ಶ್ರೀ ಬಸವಯೋಗಿ ಪ್ರಭುಸ್ವಾಮೀಜಿ ತಿಳಿಸಿದರು.

ಶ್ರೀ ಶಿವಕುಮಾರ ಸ್ವಾಮೀಜಿಯ ೫ನೇ ವರ್ಷದ ಪುಣ್ಯಸ್ಮರಣೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲವೈದಿಕ ಧರ್ಮದ ವಿರುದ್ಧ ಸಿಡಿದೆದ್ದು, ಹೆಣ್ಣಿನ ಸಮಾನತೆಗಾಗಿ ಹೋರಾಡಿ, ಸಾಮಾನ್ಯ ಜನರಿಗಾಗಿಯೇ ಒಂದು ಧರ್ಮವನ್ನು ಸ್ಥಾಪಿಸಿ, ಸಾಮಾನ್ಯ ಜನರಾಡುವ ಭಾಷೆಯನ್ನೇ ದೇವ ಭಾಷೆಯನ್ನಾಗಿ ಮಾಡಿ, ದೇವರಿಗೆ ಕನ್ನಡವನ್ನು ಕಲಿಸಿಕೊಟ್ಟು, ಕಾಯಕ-ದಾಸೋಹ ತತ್ವ ತಿಳಿಸಿಕೊಟ್ಟು, ಅನುಭವ ಮಂಟಪದಂತಹ ಪ್ರಪಂಚದ ಮೊದಲ ಸಂಸತ್ತನ್ನು ಕಟ್ಟಿ, ಸಮಸಮಾಜದ ಕಲ್ಪನೆಯನ್ನು ಸಾಕಾರಗೊಳಿಸಿದ ಬಸವಣ್ಣ ಕರ್ನಾಟಕ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕ ಎಂದು ಚಿಕ್ಕಮಗಳೂರಿನ ಬಸವಕೇಂದ್ರ, ಊಟಿಯ ಶ್ರೀಗುರುಬಸವ ಶಾಂತಿನಿಕೇತನ ಅಧ್ಯಕ್ಷ ಶ್ರೀ ಬಸವಯೋಗಿ ಪ್ರಭುಸ್ವಾಮೀಜಿ ತಿಳಿಸಿದರು.ಪಟ್ಟಣದ ಶ್ರೀ ಗುರುಮಲ್ಲೇಶ್ವರ ಆಶ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಕೊಳ್ಳೇಗಾಲ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಿವಕುಮಾರಸ್ವಾಮಿಗಳವರ ೫ ನೇ ವರ್ಷದ ಪುಣ್ಯಸ್ಮರಣೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಸಿ ಮಾತನಾಡಿ, ಕನ್ನಡ ಭಾಷೆಯಲ್ಲಿ ಮಾತನಾಡಲು ನಾವೆಲ್ಲ ಹೆಮ್ಮೆಪಡಬೇಕು, ಯಾಕೆಂದರೆ ಕನ್ನಡ ಬಸವಾದಿ ಶರಣರು ಬಳಸಿದ ಭಾಷೆ. ಜನರ ಭಾಷೆಯನ್ನು ದೇವರ ಭಾಷೆಯನ್ನಾಗಿ ಮಾಡಿದರು. ಕನ್ನಡ ಬಹಳ ಶ್ರೀಮಂತ ಭಾಷೆ. ಲಿಂಗಾಯತ ಧರ್ಮವು ಕನ್ನಡ ನಾಡಿನ ಪ್ರಥಮ ಧರ್ಮ. ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸುವುದೇ ಧರ್ಮ ಎಂದು ತಿಳಿಸಿದರು. ಲಿಂಗಾಯತ ಧರ್ಮ 12ನೇ ಶತಮಾನದಲ್ಲಿ ಉದಯಿಸಿದ ಕನ್ನಡದ ಮೊದಲ ಧರ್ಮ. ಎಲ್ಲರನ್ನೊಳಗೊಂಡ ಧರ್ಮ ಲಿಂಗಾಯತ ಧರ್ಮ. ಅದಕ್ಕೆ ಬಸವಣ್ಣನವರು ಅಪ್ಪನು ನಮ್ಮ ಮಾದಾರ ಚೆನ್ನಯ್ಯಎಂದಿದ್ದಾರೆ. ಸಮಗಾರ ಹರಳಯ್ಯ, ಅಫ್ಘಾನಿಸ್ತಾನದಿಂದ ಸೂಫಿ ಸಂತರು, ಕಾಶ್ಮೀರದಿಂದ ಮಹಾರಾಜರು, ಸೌರಾಷ್ಟ್ರ ಮತ್ತು ಭಾರತ ದೇಶದ ಎಲ್ಲಾ ಭಾಗಗಳಿಂದ ಬಂದ ಜನರು ಲಿಂಗಾಯತ ಧರ್ಮವನ್ನು ಅಪ್ಪಿ ಒಪ್ಪಿಕೊಂಡರು. ಎಲ್ಲರಲ್ಲೂ ಕೂಡ ಬಸವಣ್ಣ ಲಿಂಗವನ್ನೇ ಕಾಣುತ್ತಾರೆ. ಆದ್ದರಿಂದ ಬಸವಣ್ಣ ಅಂದರೆ ಪರಿವರ್ತನೆ, ಪರಿವರ್ತನೆ ಅಂದರೆ ಬಸವಣ್ಣ ಎಂದು ತಿಳಿಯಬೇಕು.ಹಿರಿಯ ನ್ಯಾಯವಾದಿ ವಿರೂಪಾಕ್ಷ ಮಾತನಾಡಿ, ನಮ್ಮ ದೇಶದಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ವಿವಿಧ ಧರ್ಮಗಳು ಹುಟ್ಟಿದವು ಮತ್ತು ಲಿಂಗಾಯತ ಧರ್ಮವು ಹೇಗೆ ಉದಯಿಸಿತು ಎಂಬ ಬಗ್ಗೆ ಮಾಹಿತಿ ನೀಡಿದರು. ಲಿಂಗಾಯತ ಧರ್ಮವು ಏಕೆ ಪ್ರತ್ಯೇಕ ಸ್ವತಂತ್ರ ಧರ್ಮವಾಗಬೇಕು ಮತ್ತು ಸಾಂವಿಧಾನಿಕ ಮಾನ್ಯತೆ ಏಕೆ ಸಿಗಬೇಕು, ಆ ನಿಟ್ಟಿನಲ್ಲಿ ನಾವುಗಳು ಏನು ಮಾಡಬೇಕು, ಏಕೆ ನಮ್ಮ ಲಿಂಗಾಯತ ಧರ್ಮವು ಪ್ರತ್ಯೇಕ ಧರ್ಮ ಎನಿಸಿಕೊಳ್ಳುತ್ತದೆ, ಲಿಂಗಾಯತ ಧರ್ಮದವರ ಧಾರ್ಮಿಕ ಆಚರಣೆಗಳು ಇತರೆ ಧರ್ಮದ ಆಚರಣೆಗಳಿಗಿಂತ ಹೇಗೆ ಭಿನ್ನ ಎಂದು ತಿಳಿಸಿದರು. ಸ್ವತಂತ್ರ ಧರ್ಮಕ್ಕೆ ಸಿಗುವ ಸರ್ಕಾರದ ಸವಲತ್ತುಗಳನ್ನು ತಿಳಿಸಿದರು. ಹಾಗೆ ಜಾಗತಿಕ ಲಿಂಗಾಯತ ಮಹಾಸಭೆಯ ಹುಟ್ಟಿಗೆ ಕಾರಣ ಮತ್ತು ಅದರ ಉದ್ದೇಶ, ಕಾರ್ಯಸೂಚಿಗಳನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಡಿಗುಂಡ ಮಠದ ಶ್ರೀಕಂಠಸ್ವಾಮಿಗಳು, ಆಲಹಳ್ಳಿ ಪಟ್ಟದ ಮಠದ ಶಿವಕುಮಾರಸ್ವಾಮಿಗಳು, ಕಾಮಗೆರೆ ಪಟ್ಟದ ಮಠದ ಶ್ರೀಗಳು, ಚಿಕ್ಕಿಂದುವಾಡಿ ಮಠದ ಶ್ರೀಗಳು, ಚಿಲಕವಾಡಿ ಗುರುಲಿಂಗ ಮಠದ ಶ್ರೀಗಳು, ಕೊಳ್ಳೇಗಾಲ ದಾಸೋಹ ಮಠದ ಶ್ರೀಗಳು, ಜಾಲಿಂ ಮಹಾಸಭಾ ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ಶಿವಪ್ರಸಾದ, ಸುಂದ್ರಪ್ಪ, ತಾಲೂಕು ಘಟಕದ ಅಧ್ಯಕ್ಷ ಬಿಂದು ಲೋಕೇಶ, ಶಿವಸ್ವಾಮಿ, ಮಹದೇವಸ್ವಾಮಿ, ತಾಲೂಕಿನ ವಿವಿಧ ಗ್ರಾಮಗಳಿಂದ ಜನರು ಭಾಗವಹಿಸಿದ್ದರು.