ಸಾರಾಂಶ
ಪುರಸಭೆ ವ್ಯಾಪ್ತಿಯ ಕರಡಕಲ್ಲ ಬಿಲ್ಲಮ ರಾಜನ ಗುಡ್ಡದಲ್ಲಿ ಸುಮಾರು 4-5 ಅಡಿಯಷ್ಟು ಗುಂಡಿ ತೋಡಿದ್ದು, ಗರ್ಭ ಗುಡಿಯಲ್ಲಿದ್ದ ಈಶ್ವರ ದೇವರ ಲಿಂಗು, ಗರ್ಭಡಿಯ ಮುಂದೆ ಇದ್ದ ಬಸವಣ್ಣ ಮೂರ್ತಿ ಭಗ್ನಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಕರಡಕಲ್ಲ ಬಿಲ್ಲಮ ರಾಜನ ಗುಡ್ಡದಲ್ಲಿ ಸುಮಾರು 4-5 ಅಡಿಯಷ್ಟು ಗುಂಡಿ ತೋಡಿದ್ದು, ಗರ್ಭ ಗುಡಿಯಲ್ಲಿದ್ದ ಈಶ್ವರ ದೇವರ ಲಿಂಗು, ಗರ್ಭಡಿಯ ಮುಂದೆ ಇದ್ದ ಬಸವಣ್ಣ ಮೂರ್ತಿ ಭಗ್ನಗೊಳಿಸಿದ್ದು, ಅಪರಿಚಿತ ಕಿಡಿಗೇಡಿಗಳು ದೇವಸ್ಥಾನ ಜಾಗದಲ್ಲಿ ನಿಧಿ ಇದೆ ಎಂದು ಅಲ್ಲದೇ, ಮೂರ್ತಿಗಳಲ್ಲಿ ಚಿನ್ನ ಮತ್ತು ವಜ್ರ ಇದೆ ಎಂದು ಅದನ್ನು ತೋಡಿ ಕಳ್ಳತನ ಮಾಡಿ ಮೂರ್ತಿಗಳನ್ನು ಭಗ್ನಗೊಳಿಸಿದ್ದು, ಸುಮಾರು 3-4 ದಿನಗಳ ಹಿಂದೆ ಈ ಕೃತ್ಯ ಎಸಗಿದಂತೆ ಕಂಡುಬರುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಕರಡಕಲ್ಲ ಗ್ರಾಮದ ವಿದ್ಯಾರ್ಥಿ ವಿಶ್ವನಾಥ ಕುಂಭಾರ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳೆದ ಜ.30 ರಂದು ರಾತ್ರಿ 11-30 ಗಂಟೆಗೆ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಸಿಪಿಐ ಪುಂಡಲೀಕ ಪಟಾತರ ತನಿಖೆ ಕೈಗೊಂಡಿರುತ್ತಾರೆ.