ಸಾರಾಂಶ
ಹರಿಹರದ ತಾಲೂಕು ಕಚೇರಿ ಸಭಾಂಗಣದಲ್ಲಿ ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮರ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಹರಿಹರ
ಜಗಜ್ಯೋತಿ ಬಸವಣ್ಣ ಹಾಗೂ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮರ ಜಯಂತ್ಯುತ್ಸವ ಕಾರ್ಯಕ್ರಮವನ್ನು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.ಈ ವೇಳೆ ಮಾತನಾಡಿದ ಅಧಿಕಾರಿಗಳು, ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮನವರು ನಾಡಿನ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಬಸವಣ್ಣವರ ಪರಂಪರೆಯಿಂದಾಗಿ ಕರ್ನಾಟಕ ರಾಜ್ಯವು ದೇಶದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದರು.
ಗ್ರೇಡ್-೨ ತಹಸೀಲ್ದಾರ್ ಶಶಿಧರಯ್ಯ, ತಾಪಂ ಇಒ ರಾಮಕೃಷ್ಣಪ್ಪ ದೊಡ್ಡಬಾತಿ, ಪೌರಾಯುಕ್ತ ಬಸವರಾಜ್ ಐಗೂರು, ಭೂಮಾಪನ ಇಲಾಖೆ ಎಡಿ ನಾಗಭೂಷಣ್, ಬಿಇಒ ಎಂ. ಹನುಮಂತಪ್ಪ, ಉಪ ಖಜಾನೆ ಎಡಿ ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹನುಮಂತ ಪಾಟೀಲ್, ಕಂದಾಯ ನಿರೀಕ್ಷಕ ಸಮೀರ್, ಅಖಿಲ ಭಾರತ ವೀರಶೈವ ಮಹಾಸಭಾ ಹರಿಹರ ತಾಲೂಕು ಘಟಕ ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, ವೀರಣ್ಣ ಯಾದವಾಡ, ಟಿ.ಜೆ.ಮುರುಗೇಶಪ್ಪ, ಬಸವರಾಜ ಓಂಕಾರಿ, ಮಲ್ಲಿಕಾರ್ಜುನಪ್ಪ, ಕರಿಬಸಪ್ಪ ಕಂಚಿಕೆರೆ, ರಾಜು, ಶಾಂತಕುಮಾರಿ ಹಾಗೂ ರೆಡ್ಡಿ ಸಮಾಜದ ಹರಿಹರ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಲಿಂಗಾರೆಡ್ಡಿ ಪದಾಧಿಕಾರಿಗಳಾದ ಶಿವಣ್ಣಾರೆಡ್ಡಿ, ಎಚ್.ಎಸ್. ಕೊಟ್ರೇಶಪ್ಪ, ಹನುಮಂತರೆಡ್ಡಿ, ವಿಷ್ಣುರೆಡ್ಡಿ, ಮಲ್ಲಪ್ಪ ರೆಡ್ಡಿ, ಭಾನುವಳ್ಳಿ ಗಿರಿಗೌಡ್ರು, ಮಲ್ಲಿಕಾರ್ಜುನ್ ರೆಡ್ಡಿ, ಫಕ್ಕೀರ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ರಂಗಪ್ಪ ರೆಡ್ಡಿ ಹಾಗೂ ಸಿಬ್ಬಂದಿ ಇದ್ದರು.