ಬಸವಣ್ಣ ವಚನಗಳಿಂದ ದೇಶಕ್ಕೆ ಶಾಂತಿ ನೆಮ್ಮದಿ ಸಿಗಲಿದೆ: ಪ್ರಾಚಾರ್ಯ ಡಾ ಪಂಡಿತ ಬಿ.ಕೆ

| Published : May 01 2025, 12:49 AM IST

ಬಸವಣ್ಣ ವಚನಗಳಿಂದ ದೇಶಕ್ಕೆ ಶಾಂತಿ ನೆಮ್ಮದಿ ಸಿಗಲಿದೆ: ಪ್ರಾಚಾರ್ಯ ಡಾ ಪಂಡಿತ ಬಿ.ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣನಾಡಿನ ಸಮಾನತೆಯ ಹರಿಕಾರ ಸಮ ಸಮಾಜದ ಕ್ರಾಂತಿಕಾರಿ, ಭಕ್ತಿ ಬಂಡಾರಿ ೧೨ನೇ ಶತಮಾನದ ಬಸವಣ್ಣನವರು ತಮ್ಮ ಭಕ್ತಿಪ್ರಧಾನ ವಚನಗಳಿಂದ ಸಮಾಜ ಸುಧಾರಣೆ ಮಾಡಿ, ಸಮಾಜದ ಏಳಿಗೆಗೆ ದುಡಿದ ಮಹಾನ್‌ ಸುಧಾರಣೆಗಾರ ಆಗಿದ್ದರು ಎಂದು ಸೇಡಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಪಂಡಿತ.ಬಿ.ಕೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಕಲ್ಯಾಣನಾಡಿನ ಸಮಾನತೆಯ ಹರಿಕಾರ ಸಮ ಸಮಾಜದ ಕ್ರಾಂತಿಕಾರಿ, ಭಕ್ತಿ ಬಂಡಾರಿ ೧೨ನೇ ಶತಮಾನದ ಬಸವಣ್ಣನವರು ತಮ್ಮ ಭಕ್ತಿಪ್ರಧಾನ ವಚನಗಳಿಂದ ಸಮಾಜ ಸುಧಾರಣೆ ಮಾಡಿ, ಸಮಾಜದ ಏಳಿಗೆಗೆ ದುಡಿದ ಮಹಾನ್‌ ಸುಧಾರಣೆಗಾರ ಆಗಿದ್ದರು ಎಂದು ಸೇಡಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಪಂಡಿತ.ಬಿ.ಕೆ ಹೇಳಿದರು.

ತಾಲೂಕು ಆಡಳಿತದ ವತಿಯಿಂದ ಬುಧವಾರ ಬಸವೇಶ್ವರ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ ೮೯೨ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಬಸವಣ್ಣನವರ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.ಜಗತ್ತಿನಲ್ಲಿ ಕೆಲವೇ ಕೆಲವು ವ್ಯಕ್ತಿಗಳು ದಿನನಿತ್ಯ ಹುಟ್ಟುತ್ತಾರೆ ಅಂತಹವರಲ್ಲಿ ಬಸವಣ್ಣನವರು ಆಗಿದ್ದಾರೆ. ಶರಣರ ವಿಚಾರಗಳನ್ನು ತಲೆಯಲ್ಲಿ ಹೊತ್ತುಕೊಂಡು ಜಯಂತಿ ಮಾಡಬೇಕಾಗಿದೆ. ಧಾರ್ಮಿಕ, ಸಾಮಾಜಿಕವಾಗಿ ಅಸಮಾನತೆಯಿಂದ ಸತ್ತಂತೆ ಇರುವ ಜನರಿಗೆ ಚೈತನ್ಯ ತುಂಬಿ ಮೇಲೆತ್ತಿದ್ದು ಬಸವಣ್ಣನವರು. ವಚನ ಎಂಬ ಪದದಲ್ಲಿ ದೊಡ್ಡ ಶಕ್ತಿ ಇದೆ. ಮಾತು ಪ್ರತಿಜ್ಞೆ ಆಣೆ ಭಾಷೆ ಕೊಡುವುದು ಆಗಿದೆ. ಶರಣರ ಮಾತುಗಳು ಸಾವಿಲ್ಲದ ಮಾತುಗಳಾಗಿದ್ದವು. ಶರಣರ ಮಾತುಗಳು ಬುದ್ದಿವಂತಿಕೆ ಬುದ್ದಿ ಮಾತು ಕರುಳಿನಿಂದ ಆಡಿದ ಮಾತುಗಳಾದ್ದವು. ೪೦೦ ಸ್ವಾಮಿಗಳು, ೭೭೦ ಶರಣರಿದ್ದರು. ಬಸವಣ್ಣನವರು ಎಲ್ಲರನ್ನು ಅಪ್ಪಕೊಳ್ಳುವರು ಆಗಿದ್ದರು. ಬಸವಣ್ಣವರ ವಿಚಾರ ತತ್ವಗಳು ವಚನಗಳು ನಮ್ಮ ಬಾಳಿನಲ್ಲಿ ಆಳವಡಿಸಿಕೊಳ್ಳಬೇಕು. ಕಾಯಕ ಮತ್ತು ದಾಸೋಹ ನಮಗೆ ದಾರಿದೀಪವಾಗಿದೆ ಎಂದು ಡಾ. ಪಂಡಿತ.ಬಿ.ಕೆ ಹೇಳಿದರು.

ಸ್ಥಳೀಯ ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ, ತಾಲೂಕ ಅಖಿಲಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶರಣುಪಾಟೀಲ ಮೋತಕಪಳ್ಳಿ ಬಸವಣ್ಣನವರ ಕುರಿತು ಮಾತನಾಡಿದರು. ಲಿಂಗಾಯತ ಸಮಾಜದ ಅಭಿವೃದ್ದಿಗಾಗಿ ಶ್ರಮಿಸಿದ ವಿಶ್ವನಾಥ ಪಾಟೀಲ ಪೋಲಕಳ್ಳಿ, ವೀರಶೆಟ್ಟಿ ಇಮಡಾಪೂರ, ಬಸವರಾಜ ಬೆಳಕೇರಿ, ಬಸವಣ್ಣಪ್ಪ ಕುಡಹಳ್ಳಿ, ಮುರುಗೆಪ್ಪ ಕುಕ್ಕಡಿ ಸುಲೇಪೇಟ, ಚಿತ್ರಶೇಖರ ಪಾಟೀಲ, ಸಂಗಪ್ಪ ಪಾಲಾಮೂರ, ಮಲ್ಲಿಕಾರ್ಜುನ ಪಾಲಾಮೂರ ಇವರನ್ನು ತಾಲೂಕ ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ,ತಾಪಂ ಅಧಿಕಾರಿ ಶಂಕರ ರಾಠೋಡ,ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಗ್ರೇಡ೨ ತಹಸೀಲ್ದಾರ್‌ ವೆಂಕಟೇಶ ದುಗ್ಗನ ಉಪಸ್ಥಿತರಿದ್ದರು. ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಅಜೀತ ಪಾಟೀಲ, ವೀರೇಶ ಎಂಪಳ್ಳಿ, ಶಿವುಸ್ವಾಮಿ, ಭೋಗಲಿಂಗಪ್ಪ, ಸುಭಾಷ ಸೀಳಿನ, ನಾಗರಾಜ ಮಲಕೂಡ, ಬಸವರಾಜ ಐನೋಳಿ, ಸೂರ್ಯಕಾಂತ ಹುಲಿ, ಗುಂಡಯ್ಯಸ್ವಾಮಿ, ಜಗನ್ನಾಥ ಗುತ್ತೆದಾರ, ಮಲ್ಲಯ್ಯಸ್ವಾಮಿ ಇನ್ನಿತರಿದ್ದರು. ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಸ್ವಾಗತಿಸಿದರು ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿದರು ತಹಸೀಲ್ದಾರ್‌ ಸುಬ್ಬಣ್ಣ ಜಮಖಂಡಿ ಅಧ್ಯಕ್ಷತೆಯನ್ನು ವಹಿಸಿ ಎಲ್ಲರನ್ನು ವಂದಿಸಿದರು.