ತುಳಿತಕ್ಕೊಳಗಾದ ಸಮುದಾಯಗಳ ಧ್ವನಿಯಾಗಿದ್ದ ಬಸವಣ್ಣ: ಶಾಸಕ ಶಾಂತನಗೌಡ

| Published : Feb 19 2024, 01:37 AM IST

ತುಳಿತಕ್ಕೊಳಗಾದ ಸಮುದಾಯಗಳ ಧ್ವನಿಯಾಗಿದ್ದ ಬಸವಣ್ಣ: ಶಾಸಕ ಶಾಂತನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿ ಸಮಾಜದಲ್ಲಿ ಮೂಢ ನಂಬಿಕೆ, ಕಂದಾಚಾರ, ಧಾರ್ಮಿಕ ಕಟ್ಟು ಪಾಡುಗಳ ವಿರುದ್ಧ ಹೋರಾಡಿ ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳ ಧ್ವನಿಯಾಗಿ, ಜಾತಿ ಭೇದ ಮತ್ತು ಲಿಂಗ ತಾರತಮ್ಯ, ಸಮ ಸಮಾಜದ ಕನಸನ್ನು ಕಂಡ ಮಹಾನ್ ವ್ಯಕ್ತಿ.

ಕನ್ನಡಪ್ರಭ ವಾರ್ತೆ ನ್ಯಾಮತಿ

12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿ ಮಾತ್ರವಲ್ಲದೇ ರಾಜಕೀಯವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿ ಸಮಾನತೆಗೆ ಮಹತ್ವ ಕೊಡುವ ಮೂಲಕ ಜಾತೀಯತೆ ಅಳಿಸಲು ಪ್ರಧಾನ ಆದ್ಯತೆ ನೀಡಿ ಭಕ್ತಿ ಮಾರ್ಗ ಪ್ರತಿಪಾದಿಸಿದವರು ವಿಶ್ವಗುರು ಬಸವಣ್ಣ ಎಂದು ಶಾಸಕ ಡಿ.ಜಿ.ಶಾಂತನಗೌಡ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಕ್ರಾಂತಿಯೋಗಿ ಬಸವೇಶ್ವರರ ಭಾವ ಚಿತ್ರ ಅನಾವರಣಗೊಳಿಸಿ ಮಾತನಾಡಿ ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿ ಸಮಾಜದಲ್ಲಿ ಮೂಢ ನಂಬಿಕೆ, ಕಂದಾಚಾರ, ಧಾರ್ಮಿಕ ಕಟ್ಟು ಪಾಡುಗಳ ವಿರುದ್ಧ ಹೋರಾಡಿ ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳ ಧ್ವನಿಯಾಗಿ, ಜಾತಿ ಭೇದ ಮತ್ತು ಲಿಂಗ ತಾರತಮ್ಯ, ಸಮ ಸಮಾಜದ ಕನಸನ್ನು ಕಂಡ ಮಹಾನ್ ವ್ಯಕ್ತಿ ಎಂದ ಅವರು ಇಂತಹ ಮಹಾನ್ ವ್ಯಕ್ತಿಯನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರವು ಘೋಷಣೆ ಮಾಡಿದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ ಜಗಜ್ಯೋತಿ ಬಸವೇಶ್ವರರು ವೀರಶೈವ ಧರ್ಮ ಅಪ್ಪಿಕೊಂಡು ವೀರಶೈವ ಧರ್ಮದ ಉದ್ದಾರಕ್ಕೆ ಶ್ರಮಿಸಿದ ವ್ಯಕ್ತಿ, 12ನೇ ಶತಮಾನದಲ್ಲಿ ಬಸವಣ್ಣನವರು ಬಸವ ಕಲ್ಯಾಣದಲ್ಲಿ ಸಮಾಜಿಕ ಕ್ರಾಂತಿ ನಡೆಸುವ ಮೂಲಕ ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ನ್ಯಾಮತಿ ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ, ಮಾಜಿ ಶಾಸಕ ಡಿ.ಬಿ.ಗಂಗಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ವಿಶ್ವನಾಥ, ನಿವೃತ್ತ ಶಿಕ್ಷಕ ಬಸವರಾಜಪ್ಪ, ಡಿ.ನಾಗಪ್ಪ, ಪ.ಪಂ.ಮುಖ್ಯಾಧಿಕಾರಿ ಪಿ.ಗಣೇಶ್‌ರಾವ್, ಹವಳದ ಲಿಂಗರಾಜ್, ಸಂತೋಷ್ ಮಾತನಾಡಿದರು. ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಜಿ.ಶಿವಪ್ಪ, ಸುನೀತಾ ಷಣ್ಮುಖಪ್ಪ, ಗೀತಾ ನಾಗರಾಜ್, ವನಜಾಕ್ಷಮ್ಮ ಮತ್ತಿತರರಿದ್ದರು.