ಸಾರಾಂಶ
ಬಸವವಾದ ನಮಗೆ ಅರ್ಥ ಆಗಬೇಕು ಆದರೆ ನಾವು ಮೊದಲು ಸಂವಿಧಾನವನ್ನು ಓದಬೇಕು. ಆಗ ಬಸವಣ್ಣ ಅರ್ಥ ಆಗುತ್ತಾರೆ, ಭಾರತದ ನೆಲದಲ್ಲಿ ಅನೇಕರು ಮಹನಿಯರು ಶತಶತಮಾನಗಳಿಂದ ಬಹಳ ವರ್ಷಗಳಿಂದ ಮನುವಾದದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಇಡೀ ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಜನತಂತ್ರ ಸಂಸದೀಯ ಪರಿಕಲ್ಪನೆಯನ್ನು ಕೊಟ್ಟವರು ಬಸವಣ್ಣನವರು ಎಂದು ಚಿಂತಕ ಡಾ. ಜೆ.ಎಸ್. ಪಾಟೀಲ ಹೇಳಿದರು.ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆಯಲ್ಲಿ ಬಸವ ವಾದ ಮತ್ತು ಸಂವಿಧಾನದ ಆಶಯಗಳು ವಿಷಯವಾಗಿ ಉಪನ್ಯಾಸ ನೀಡಿದರು.
ಬಸವವಾದ ನಮಗೆ ಅರ್ಥ ಆಗಬೇಕು ಆದರೆ ನಾವು ಮೊದಲು ಸಂವಿಧಾನವನ್ನು ಓದಬೇಕು. ಆಗ ಬಸವಣ್ಣ ಅರ್ಥ ಆಗುತ್ತಾರೆ, ಭಾರತದ ನೆಲದಲ್ಲಿ ಅನೇಕರು ಮಹನಿಯರು ಶತಶತಮಾನಗಳಿಂದ ಬಹಳ ವರ್ಷಗಳಿಂದ ಮನುವಾದದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೂ ಜಾತಿ ವ್ಯವಸ್ಥೆಯನ್ನು ಸಂವಿಧಾನ ಜಾರಿಗೆ ಬಂದು ಇಷ್ಟು ವರ್ಷ ಕಳೆದರೂ ಇನ್ನೂ ಅದು ಜೀವಂತವಾಗಿ ಉಳಿದಿದೆ. ಬಸವಣ್ಣ 12ನೇ ಶತಮಾನದಲ್ಲಿಯೇ ಲಿಂಗ ಸಮಾನತೆಯನ್ನು ಮಾಡಿದರು ಎಂದರು.ಭಾರತವನ್ನು ಮರಳಿ ಶಿಲಾಯುಗಕ್ಕೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಈ ದೇಶದಲ್ಲಿ ನಡಿತಿದೆ. ಅದನ್ನು ಬಸವಾದಿಗಳು ಬಾಬಾಸಾಹೇಬ್ ಡಾ. ಅಂಬೇಡ್ಕರ್ ವಾದಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿ ಬಸವಣ್ಣ ಯಾವೊಂದು ವರ್ಗಕ್ಕೆ ಸೀಮಿತವಾಗಿಲ್ಲ ಅವರು ಸಾಂಸ್ಕೃತಿ ನಾಯಕ ಅಷ್ಟೇ ಅಲ್ಲ ಈ ನಾಡಿನ ಆಸ್ತಿ ಆಗಿದ್ದಾರೆ. ಹಳ್ಳಿಗಳಲ್ಲಿ ದಲಿತರಷ್ಟು ಬಸವ ತತ್ವಗಳನ್ನು ಅಪ್ಪಿಕೊಂಡಷ್ಟು ಯಾರು ಅಪ್ಪಿಕೊಂಡಿಲ್ಲ. ಪ್ರತಿಯೊಬ್ಬ ದಲಿತನೂ ಬಸವ ತತ್ವವನ್ನು ಪಾಲನೆ ಮಾಡುತ್ತಾನೆಂದರು.ಪ್ರಮುಖರಾದ ಸಾಹಿತಿ ಆರ್.ಕೆ. ಹುಡಗಿ, ರೇಣುಕಾ ಸಿಂಗೆ, ಪ್ರಭುಲಿಂಗ ಮಹಾಗಾಂವಕರ್ಹಾ, ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.