ಕನ್ನಡಪ್ರಭ ವಾರ್ತೆ ಶಿರಾ ಬಸವಣ್ಣವರು ೧೨ನೇ ಶತಮಾನದಲ್ಲಿ ಸಮಾಜದ ಓರೆ ಕೋರೆಗಳನ್ನು ತಿದ್ದಿದವರು. ಅವರ ಶರಣ ತತ್ವ ನಾವೆಲ್ಲರೂ ಪಾಲಿಸಬೇಕು. ಸಮಾಜದಲ್ಲಿನ ಕಂದಾಚಾರಗಳು ಮೂಢನಂಬಿಕೆಗಳನ್ನು ದೂರವಿಡೋಣ ಎಂದು ಹೇಳಿ ಸಮಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು ಉಪನ್ಯಾಸ ನೀಡಿದ ಉಪನ್ಯಾಸಕರಾದ ಮಲ್ಲಿಕಾರ್ಜುನ್ ಹೇಳಿದರು. ಅವರು ತಾಲೂಕು ಆಡಳಿತದ ವತಿಯಿಂದ ನಗರದ ಮಿನಿ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಜಗಜ್ಯೋತಿ ಬಸವಣ್ಣನವರ ಜಯಂತಿಯಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಬಸವಣ್ಣನವರು ೧೨ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ೮ನೇ ವಯಸ್ಸಿನಲ್ಲಿಯೇ ಗಂಡು ಮತ್ತು ಹೆಣ್ಣಿನ ತಾರತಮ್ಯದ ಬಗ್ಗೆ ಪ್ರಶ್ನೆ ಮಾಡಿ ಮನೆಯನ್ನು ಬಿಟ್ಟು ಕೂಡಲ ಸಂಗಮ ಸೇರುತ್ತಾರೆ. ಅವರ ತತ್ವಾದರ್ಶಗಳು ಇಂದಿಗೂ ಮಾದರಿಯಾಗಿವೆ ಎಂದರು. ಬಸವಣ್ಣನವರು ಅಂದಿನ ಸಮಾಜದಲ್ಲಿದ್ದ ಕಂದಾಚಾರಗಳನ್ನು ದೂರ ಮಾಡಿ ಕಾಯಕವನ್ನೇ ಕೈಲಾಸಕ್ಕೆ ಹೋಲಿಸುವ ಮೂಲಕ ದೇಹವನ್ನು ದೇಗುಲ ಮಾಡಿದರು. ಆದರೆ ಇಂದು ನಾವು ಕೇವಲ ಅವರ ಜಯಂತಿ ಆಚರಣೆ ಮಾಡುತ್ತಿದ್ದೇವೆ ಹೊರತು ಅವರ ಸಪ್ತ ಸೂತ್ರಗಳಾದ ಕಳ್ಳತನ ಮಾಡಬಾರದು, ಕೊಲೆ ಮಾಡಬೇಡ, ಸುಳ್ಳು ಹೇಳಬೇಡ, ತನ್ನನ್ನು ಬಣ್ಣಿಸಬೇಡ, ಸಿಟ್ಟಾಗಬೇಡ, ಅನ್ಯರನ್ನು ನೋಡಿ ಅಸಹ್ಯ ಪಡಬೇಡ, ಬೈಯ್ಯುವುದು ಮಾಡಬಾರದು ಎಂಬ ಸಂದೇಶವನ್ನ ಮರೆತು ಎಲ್ಲವನ್ನು ಮಾಡುತ್ತಿದ್ದೇವೆ. ಹೀಗಾಗಿ ಮುಂದಿನ ಪೀಳಿಗೆಗೆ ನಾವು ಯಾವ ಸಂದೇಶ ಕೊಡುತ್ತಿದ್ದೇವೆ ಎಂಬುದನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ತಹಸೀಲ್ದಾರ್ ಆನಂದ್ ಕುಮಾರ್ ಮಾತನಾಡಿ ಬಸವಣ್ಣನವರು ೧೪೦೦ ವಚನಗಳನ್ನು ರಚಿಸಿ ವಚನಗಳ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದವರು. ವಿಶ್ವ ಮಾನವ ಸಂದೇಶ ಸಾರಿದವರು. ಅವರ ತತ್ವಾದರ್ಶಗಳು ಮುಂದಿನ ಪೀಳಿಗೆಗೂ ಮಾದರಿಯಾಗಿವೆ ೧೨ನೇ ಶತಮಾನದಲ್ಲೇ ಸಮಾಜದಲ್ಲಿನ ಮೇಲುಕೀಳು ತೊಲಗಿಸಿ ಎಲ್ಲರನ್ನೂ ಒಗ್ಗೂಡಿಸಿದವರು ಬಸವಣ್ಣ. ಬಸವಣ್ಣನವರು ಕೇವಲ ವಚನಕಾರರಲ್ಲ ಅವರು ತತ್ವಜ್ಞಾನಿಗಳು, ಸಮಾಜ ಸುಧಾಕರು ಬಸವಣ್ಣನವರ ವಚನಗಳೇ ಪ್ರಜಾಪ್ರಭುತಕ್ಕೆ ಆಧಾರ ಸ್ತಂಭಗಳು ಎಂದರು.ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ ಬಸವಣ್ಣನವರು ಮಾನವೀಯ ಮೌಲ್ಯಗಳ ಪ್ರತಿಪಾದಕರು. ಅವರ ವಿಚಾರಗಳು ಇಂದಿಗೂ ಎಲ್ಲ ಸಮುದಾಯಗಳಿಗೂ ತಲುಪಿಲ್ಲ. ಬಸವಣ್ಣನವರು ಎಲ್ಲ ತಳ ಸಮುದಾಯದ ನಾಯಕರನ್ನು ಅನುಭವ ಮಂಟಪದ ಮೂಲಕ ಒಗ್ಗೂಡಿಸಿದವರು. ೧೨ನೇ ಶತಮಾನದಲ್ಲಿಯೇ ಸಂಸತ್ ಪರಿಕಲ್ಪನೆ ಕೊಟ್ಟಿದ್ದರು. ಇದನ್ನು ಅನುಸರಿಸಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬಸವಣ್ಣನವರ ವಿಚಾರಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ನಾವೆಲ್ಲರೂ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಬಸವಣ್ಣನವರ ವಿಚಾರಧಾರೆಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಆನಂದ್, ಗೌರವಾಧ್ಯಕ್ಷ ನಟರಾಜು, ಬಸವದಳ ಅಧ್ಯಕ್ಷ ಸಂತೋಷ್, ಮುಖಂಡರಾದ ಜಿ.ಆರ್.ನಟರಾಜು, ಸಂತೋಷ್, ಧನುಷ್, ಸೋರೆಕುಂಟೆ ವಿನಯ್, ರಕ್ಷಿತ್, ಚೇತನ, ಶೇಖರ್, ಸದಣ್ಣ, ಕಿರಣ್, ಮಲ್ಲಯ್ಯ, ಹರೀಶ್, ಮಂಜುನಾಥ್, ಹೇಮಂತ್, ವಿನಯ್, ಬದ್ರಿ, ಮೋಹನ್ ಸೇರಿದಂತೆ ಹಲವರು ಹಾಜರಿದ್ದರು.ಬಸವಣ್ಣ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಮಹನೀಯ
ಬಸವಣ್ಣವರು ೧೨ನೇ ಶತಮಾನದಲ್ಲಿ ಸಮಾಜದ ಓರೆ ಕೋರೆಗಳನ್ನು ತಿದ್ದಿದವರು. ಅವರ ಶರಣ ತತ್ವ ನಾವೆಲ್ಲರೂ ಪಾಲಿಸಬೇಕು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.