ಕೊಪ್ಪಳ: ಸಮಾಜದಲ್ಲಿ ಸಮಾನತೆ, ಸತ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಸಂತ ಹಾಗೂ ಸಮಾಜ ಸುಧಾರಕ ಬಸವಣ್ಣವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣರು 12ನೇ ಶತಮಾನದಲ್ಲಿ ಜಾತಿ ಬೇಧ, ಅಸಮಾನತೆ ಮತ್ತು ಅಂಧಶ್ರದ್ಧೆಗಳ ವಿರುದ್ಧ ಹೋರಾಡಿ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಸವೇಶ್ವರರ ಜಯಂತಿಯಲ್ಲಿ ಮಾತನಾಡಿದರು.ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಸಂದೇಶ ಪ್ರತಿಯೊಬ್ಬ ವ್ಯಕ್ತಿಯು ಶ್ರಮದ ಮಹತ್ವವನ್ನು ಅರಿತು, ಸ್ವಾಭಿಮಾನದಿಂದ ಜೀವನ ನಡೆಸಬೇಕು ಎಂಬುದನ್ನು ಸಾರುತ್ತದೆ. ಬಸವಣ್ಣರು ಸ್ಥಾಪಿಸಿದ ಅನುಭವ ಮಂಟಪ ಪ್ರಜಾಪ್ರಭುತ್ವದ ಮೊದಲ ಮಾದರಿಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಅಲ್ಲಿ ಎಲ್ಲ ವರ್ಗದ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ಹೊಂದಿದ್ದರು ಎಂದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಬಸವಣ್ಣನವರ ತತ್ವ, ಆದರ್ಶಗಳೊಂದಿಗೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವ ಧ್ಯೇಯದೊಂದಿಗೆ ಆಡಳಿತ ಮಾಡುತ್ತಿದ್ದಾರೆ. ಜನರು ಬಸವಣ್ಣನವರ ತತ್ವಗಳನ್ನು ಪಾಲಿಸಿದರೆ ಸಾರ್ಥಕ ಬದುಕನ್ನು ಕಟ್ಟಬಹುದು ಎಂದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವಿ.ಎಂ. ಭೂಸನೂರಮಠ ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಹೆಸರೂರು, ನಗರ ಮಂಡಲದ ಅಧ್ಯಕ್ಷ ಅಮರೇಶ್ ಮುರಳಿ, ಪ್ರಮುಖರಾದ ನೀಲಕಂಠಯ್ಯ ಹಿರೇಮಠ, ರಮೇಶ್ ಕವಲೂರ, ದೇವರಾಜ ಹಾಲಸಮುದ್ರ, ಪ್ರಶಾಂತ ಕಿನ್ನಾಳ, ಚನ್ನಬಸವ ಗಾಳಿ, ಮಹಾಲಕ್ಷ್ಮೀ ಕಂದಾರಿ, ಜಯಶ್ರೀ ಗೊಂಡಬಾಳ, ಬಸವರೆಡ್ಡಿ ಬೈರಾಪುರ, ಪಂಪಯ್ಯ ಹಿರೇಮಠ, ಫಕೀರಪ್ಪ ಅರೇರ ಸೇರಿದಂತೆ ಪಕ್ಷದ ಹಿರಿಯರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಕುಕನೂರಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆ
ಕುಕುನೂರು: ಪಟ್ಟಣದಲ್ಲಿ ಬಣಜಿಗ ಸಮಾಜದ ನಗರ ಘಟಕ ವತಿಯಿಂದ ವಿಶ್ವಗುರು ಬಸವೇಶ್ವರ ಜಯಂತಿ ಪ್ರಯುಕ್ತ ಪ್ರಮುಖ ರಸ್ತೆಗಳಲ್ಲಿ ಬಸವೇಶ್ವರ ಮೂರ್ತಿ ಮೆರವಣಿಗೆ ಜರುಗಿತು. ಬಣಜಿಗ ಸಮಾಜದ ನಗರ ಘಟಕದ ಅಧ್ಯಕ್ಷ ರವಿ ನಾಲ್ವಾಡ, ಪ್ರಮುಖರಾದ ಸಂಗಮೇಶ ಗುತ್ತಿ, ಬಸವರಾಜ ಮಂಡಲಗಿರಿ, ನಂದೀಶ ಗುತ್ತಿ, ಶರಣಪ್ಪ ಗುತ್ತಿ, ಮಲ್ಲಪ್ಪ ಗುತ್ತಿ, ಶರಣಪ್ಪ ಅರಿಕೇರಿ, ಶರಣಪ್ಪ ಚಂಡೂರು, ಕಳಕಪ್ಪ ಬೋರಣ್ಣವರ, ಶೇಖಪ್ಪ ಕಂಬಳಿ, ಮಹೇಶ ಯಕ್ಲಾಸಪೂರ, ಮಲ್ಲಪ್ಪ ಯಕ್ಲಾಸಪೂರ, ಪಂಚಾಕ್ಷರಿ ಯಕ್ಲಾಸಪೂರ, ಮಂಜು ಗದಗ, ರವಿ ಗದಗ, ಮಹಾಂತೇಶ ಜೋಳದ, ಪ್ರಕಾಶ ಜೋಳದ ಇತರರಿದ್ದರು.