ಸಾರಾಂಶ
ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಮಕನಮರಡಿ ಮತಕ್ಷೇತ್ರದ ಬಿಜೆಪಿ ಯುವಧುರೀಣ ಬಸವರಾಜ ಹುಂದ್ರಿಯವರ 37ನೇ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಸ್ನೇಹಿತರು ಬಂಧು-ಬಳಗದವರು ಸಂಭ್ರಮದಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಯಮಕನಮರಡಿ
ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಮಕನಮರಡಿ ಮತಕ್ಷೇತ್ರದ ಬಿಜೆಪಿ ಯುವಧುರೀಣ ಬಸವರಾಜ ಹುಂದ್ರಿಯವರ 37ನೇ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಸ್ನೇಹಿತರು ಬಂಧು-ಬಳಗದವರು ಸಂಭ್ರಮದಿಂದ ಆಚರಿಸಿದರು.ಗೋಪೂಜೆಯೊಂದಿಗೆ ಜನ್ಮದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಸೆಸಿ ನೆಡುವ ಕಾರ್ಯಕ್ರಮ ನಡೆಯಿತು. ಚಿಕ್ಕಲದಿನ್ನಿಯ ಕಮಲಾದೇವಿ ಮತ್ತು ಬಡಕುಂದ್ರಿಯ ಹೊಳೆಮ್ಮ ದೇವಸ್ಥಾನಕ್ಕೆ ಬಸವರಾಜ ಹುಂದ್ರಿ ಭೇಟಿ ನೀಡಿ ದೇವರ ದರ್ಶನ ಪೆಡೆದರು. ಬೆಳಗಾವಿಯ ಆಟೋ ನಗರ ಬಳಿ ಇರುವ ಪ್ಯಾರಾಡೈಸ್ ಗಾರ್ಡನ್ ನಲ್ಲಿ ಯಮಕನಮರಡಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಪಕ್ಷದ ಮುಖಂಡರು, ಸ್ನೇಹಿತರು, ಅಭಿಮಾನಿ ಬಳಗದೊಂದಿಗೆ ಬಸವರಾಜ ಹುಂದ್ರಿ ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡರು.
ಈ ಸಂದರ್ಭದಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ಚಿಕ್ಕೊಡಿ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ರಾಜೇಶ್ ನೇರಲಿ, ಬೆಳಗಾವಿ ಮುಖಂಡರಾದ ಮುರುಘೇಂದ್ರ ಪಾಟೀಲ, ಮಂಡಲ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಅಪ್ಪಯ್ಯಾ ಜಾಜರಿ, ಶಿದ್ಧಲಿಂಗ ಶಿದ್ದಗೌಡ್ರ, ಗುರುಶಿದ್ದ ಪಾಯನ್ನವರ, ಕಲಗೌಡ ಪಾಟೀಲ, ರಾಜು ಪಾಟೀಲ, ಮದನ ಕುಲಕರ್ಣಿ, ಶಿವಾನಂದ ಬಾಗೇವಾಡಿ, ಸಚಿನ ಶಿಂಧೆ, ಈರಪ್ಪ ಪಾಟೀಲ, ಯಲ್ಲಪ್ಪ ಗಡಕರಿ, ಅರ್ಜುನ ಬಡಕರಿ, ಬಸವರಾಜ ಬರಗಾಲಿ, ಸಂತೋಷ ಪಾಟೀಲ, ಕುಶಾಲಸಿಂಗ್ ರಜಪೂತ, ಬಸವರಾಜ ಪೂಜೇರಿ, ಸಿದ್ರಾಮ ಪೂಜೇರಿ, ಬಾಳಯ್ಯ ತವಗಮಠ ಇತರರು ಉಪಸ್ಥಿತರಿದ್ದರು.