ರಂಗ ಬದುಕಿನ ಬೆಳ್ಳಿಚುಕ್ಕಿ ಬಸವರಾಜ ಮನಸೂರ

| Published : Jan 08 2025, 12:17 AM IST

ಸಾರಾಂಶ

ಸರಳ, ಸಜ್ಜನಿಕೆಯ ಸಾತ್ವಿಕ ವ್ಯಕ್ತಿತ್ವ ಹೊಂದಿದ್ದ ಬಸವರಾಜ ಮನಸೂರ, ತಮ್ಮ ಅಖಂಡ ಬದುಕನ್ನೇ ರಂಗಭೂಮಿಗೆ ಸಮರ್ಪಿಸಿಕೊಂಡಿದ್ದರು.

ಧಾರವಾಡ:

ಹಿರಿಯ ರಂಗಭೂಮಿ ಕಲಾವಿದ, ಹಿಂದೂಸ್ತಾನಿ ಸುಗಮ ಸಂಗೀತ ಗಾಯಕರೂ ಆಗಿದ್ದ, ರಂಗ ಬದುಕಿನ ಬೆಳ್ಳಿಚುಕ್ಕಿ ಬಸವರಾಜ ಮನಸೂರ ಹೆಸರನ್ನು ಚಿರಸ್ಥಾಯಿಗೊಳಿಸಲು ಸರ್ಕಾರ ಚಿಂತನೆ ನಡೆಸಬೇಕೆಂದು ಹಿರಿಯ ಪತ್ರಕರ್ತ ಗುರುಮೂರ್ತಿ ಯರಗಂಬಳಿಮಠ ಆಗ್ರಹಿಸಿದ್ದಾರೆ.

ಇಲ್ಲಿಯ ಆಲೂರ ವೆಂಕಟರಾವ್ ಸಭಾಭವನದಲ್ಲಿ ಬಸವರಾಜ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ. ಎಸ್.ಎಸ್. ಜೀವಣ್ಣವರ ಎಜ್ಯುಕೇಷನಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನೃತ್ಯ, ಸಂಗೀತ, ಜಾನಪದ ಕಲಾ ರಂಗೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರಳ, ಸಜ್ಜನಿಕೆಯ ಸಾತ್ವಿಕ ವ್ಯಕ್ತಿತ್ವ ಹೊಂದಿದ್ದ ಬಸವರಾಜ ಮನಸೂರ, ತಮ್ಮ ಅಖಂಡ ಬದುಕನ್ನೇ ರಂಗಭೂಮಿಗೆ ಸಮರ್ಪಿಸಿಕೊಂಡಿದ್ದರು ಎಂದರು.

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಅನೇಕ ಮೇರು ಕಲಾವಿದರನ್ನು ನಾಡಿಗೆ ನೀಡಿದ ಧಾರವಾಡದ ಹತ್ತಿರದಲ್ಲಿಯೇ ಇರುವ ಮನಸೂರ ಗ್ರಾಮವು ರಂಗಭೂಮಿ ಮತ್ತು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಶಾಶ್ವತ ಉಳಿದಿದೆ ಎಂದು ಹೇಳಿದರು.

ತಾಪಂ ಮಾಜಿ ಅಧ್ಯಕ್ಷ ಮಹಾದೇವಪ್ಪ ದಂಡಿನ, ಉದ್ಯಮಿ ಸಿದ್ದಣ್ಣ ಪೂಜಾರ, ಅಶೋಕ ಮಾಳಣ್ಣವರ, ಮನಸೂರ ಗ್ರಾಪಂ ಅಧ್ಯಕ್ಷ ಕರೆಪ್ಪ ಎತ್ತಿನಗುಡ್ಡ, ಶಾಂತೇಶ ಚಿಕ್ಕಲಕಿ ಅತಿಥಿಗಳಾಗಿದ್ದರು.

ಪ್ರಶಸ್ತಿ ಪ್ರದಾನ:

ಬ್ರಹ್ಮಕುಮಾರಿ ಜಯಂತಿ ಅಕ್ಕ, ರಾಜು ಮರಳಪ್ಪನವರ, ವೀರಭದ್ರಪ್ಪ ನವಲಗುಂದ, ಆರ್.ಎಸ್. ಗುಲಗಂಜಿಕೊಪ್ಪ, ಪುಷ್ಪಾ ಬಾಗಲವಾಡಿ, ಪತ್ರಕರ್ತರಾದ ಬಸವರಾಜ ಆನೇಗುಂದಿ ಮತ್ತು ವಿಠ್ಠಲ ಕರಡಿಗುಡ್ಡ, ಡಾ. ಸಂತೋಷ ಜೀವಣ್ಣವರ, ಡಾ. ಶರಣಕುಮಾರ ಮೇಡೆದಾರ, ಪ್ರಭು ಕುಂದರಗಿ, ಬಿ.ಕೆ. ಸೋದರ, ಪ್ರವೀಣ ಜೀವಣ್ಣವರ, ಬಸಲಿಂಗವ್ವ ದೊಡವಾಡ, ಪದ್ಮಾವತಿ ಅಣ್ಣಿಗೇರಿ, ಬಸವರಾಜ ಯರಿಹಕ್ಕಲ, ಯಕ್ಕೇರಪ್ಪ ನಡುವಿನಮನಿ, ಹಜರತಲಿ ನದಾಫ್, ರಮೇಶ ನಲವಡಿ ಸೇರಿದಂತೆ ಇತರರಿಗೆ ‘ಕರ್ನಾಟಕ ಸಾಧನಾ ಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಹಿರಿಯ ಕಲಾವಿದರಾದ ಇಮಾಮಸಾಬ ವಲ್ಲೆಪ್ಪನವರ, ಲಕ್ಷ್ಮಿಬಾಯಿ ಹರಿಜನ, ಮಹಮ್ಮದಲಿ ಗೂಢೂಬಾಯಿ, ಡಾ. ಪ್ರಕಾಶ ಮಲ್ಲಿಗವಾಡ ಅವರನ್ನೂ ಗೌರವಿಸಲಾಯಿತು.