ಗಾಂಧಿ ಚಿಂತನೆಗಳು ಸರ್ವಕಾಲಕ್ಕೂ ಶ್ರೇಷ್ಟ

| Published : Jan 31 2024, 02:16 AM IST

ಸಾರಾಂಶ

ಗಾಂಧೀಜಿಯವರನ್ನು ವಿರೋಧಿಸುವವರು ಸಿಗಬಹುದು, ಆದರೆ ಗಾಂಧಿ ಚಿಂತನೆಗಳನ್ನಲ್ಲ, ಗಾಂಧೀಜಿಯ ಸರಳತೆಯ ಆಚರಣೆ ನಾವೆಲ್ಲ ಅಳವಡಿಸಿಕೊಳ್ಳಬೇಕು, ಗಾಂಧೀಜಿ ಚಿಂತನೆಗಳು ಸರ್ವಕಾಲಕ್ಕೂ ಶ್ರೇಷ್ಟ

ಕೊಪ್ಪಳ: ನಗರದ ಗಾಂಧಿ ಬಳಗದ ಕಾರ್ಯಕರ್ತರು ಶ್ರೀಗವಿಸಿದ್ಧೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಿದ್ದರಿಂದ ಜಾತ್ರೆಯುದ್ದಕ್ಕೂ ಮತ್ತು ಗುಡ್ಡದಲ್ಲಿ ಬಿದ್ದಿದ್ದ ಕಸ ಸ್ವಚ್ಛಗೊಳಿಸುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದಾರೆ.

27 ರಿಂದ ಪ್ರತಿದಿನ ಬೆಳಗ್ಗೆ ಆರು ಗಂಟೆಯಿಂದ ಎಂಟು ಗಂಟೆಯವರೆಗೆ ಕೈಲಾಸ ಮಂಟಪದ ವೇದಿಕೆ ಹಾಗೂ ಅದರ ಮುಂಭಾಗದಲ್ಲಿನ ಬೆಟ್ಟವನ್ನು ಪ್ರತಿದಿನವೂ ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗಿದೆ. ಸ್ವಚ್ಛತಾ ಕಾರ್ಯಕ್ರಮದ ಕೊನೆಯ ದಿನವಾದ ಜ.30 ಹುತಾತ್ಮ ದಿನಾಚರಣೆ ಹಿನ್ನೆಲೆ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ಹುತಾತ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿ ಗಾಂಧಿ ಚಿಂತನೆಗಳು ಸರ್ವಕಾಲಕ್ಕೂ ಶ್ರೇಷ್ಟ ಎಂದು ಹೇಳಿದರು.

ಪ್ರತಿದಿನವೂ ತಮ್ಮ ಕರ್ತವ್ಯಕ್ಕೆ ಅಡಚಣೆಯಾಗದಂತೆ ಸ್ವಚ್ಛತಾ ಕಾರ್ಯದಲ್ಲಿ ಬೆಳಗಿನ ಜಾವದಲ್ಲಿ ಪಾಲ್ಗೊಂಡು, ತಮ್ಮ ಎಂದಿನ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ನಿತ್ಯದಂತೆ ಈ ದಿನವೂ ಆರು ಗಂಟೆಗೆ ಸ್ವಚ್ಛತಾ ಸೇವೆ ಪ್ರಾರಂಭಿಸಿ, ಸ್ವಚ್ಛತಾ ಸೇವೆಯ ನಂತರ ಸೇವೆಯಲ್ಲಿ ಪಾಲ್ಗೊಂಡ ಎಲ್ಲರೂ ಸೇರಿ ಗಾಂಧಿ ಹುತಾತ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.ಉಪನ್ಯಾಸಕ ಬಸವರಾಜ ಸವಡಿ ಗಾಂಧೀಜಿಯವರನ್ನು ವಿರೋಧಿಸುವವರು ಸಿಗಬಹುದು, ಆದರೆ ಗಾಂಧಿ ಚಿಂತನೆಗಳನ್ನಲ್ಲ, ಗಾಂಧೀಜಿಯ ಸರಳತೆಯ ಆಚರಣೆ ನಾವೆಲ್ಲ ಅಳವಡಿಸಿಕೊಳ್ಳಬೇಕು, ಗಾಂಧೀಜಿ ಚಿಂತನೆಗಳು ಸರ್ವಕಾಲಕ್ಕೂ ಶ್ರೇಷ್ಟ ಎಂದರು.

ಪ್ರಕಾಶಗೌಡ, ಅಮರದೀಪ ಪಿ.ಎಸ್, ಸೋಮಲಿಂಗಪ್ಪ ಮೆಣಸಿನಕಾಯಿ, ಶಿವಪ್ಪ ಜೋಗಿ, ನಾಗರಾಜ ನಾಯಕ ಡೊಳ್ಳಿನ, ಹೊಳಿಬಸಯ್ಯ, ಹನುಮಂತಪ್ಪ ಕುರಿ, ದುರಗಪ್ಪ, ರಾಮಣ್ಣ ಶ್ಯಾವಿ, ಜಗದೀಶ ಹಳ್ಳಿಕೇರಿ, ಚುಟುಕಾಗಿ ಮಹಾತ್ಮ ಗಾಂಧೀಜಿ ಕುರಿತು ಮಾತನಾಡಿದರು.ಗಾಯಕ ಯೋಗಾನರಸಿಂಹ ಪಿ.ಕೆ.ರಘುಪತಿ ರಾಘವ ರಾಜಾರಾಂ ಸರ್ವಧರ್ಮ ಭಜನ್ ಹಾಡಿದರು. ಪ್ರಾಣೇಶ ಪೂಜಾರ ಪ್ರಾಸ್ತಾವಿಕ ಮಾತುಗಳನ್ನಾಡಿ, ವೈಷ್ಣವ ಜನತೋ ಹಾಡಿನ ಕನ್ನಡ ಅವತರಣಿಕೆಯಾದ ಎಲ್ಲರ ನೋವನು ಬಲ್ಲವನಾದರೆ ಹಾಡನ್ನು ಹಾಡಿದರು.

ನಾಲ್ಕು ದಿನಗಳ ಸೇವಾ ಕಾರ್ಯದಲ್ಲಿ ನಾಗರಾಜ ಜುಮ್ಮನ್ನವರ, ವಿರೇಶ ಮೇಟಿ, ಕಿರಣಕುಮಾರ, ಬಾಳಪ್ಪ ಕಾಳೆ, ಸುರೇಶ ಕಂಬಳಿ, ಮಂಜುನಾಥ ಕುದುರಿ, ನಿಂಗಪ್ಪ ಕಂಬಳಿ, ಯಲ್ಲಪ್ಪ, ನಾಗರಾಜ ಕುಷ್ಟಗಿ, ಯಮನೂರಪ್ಪ, ಹುಲಗಪ್ಪ ಕಟ್ಟಿಮನಿ,ಮಾರುತಿ ಆರೇರ, ಬಸವರಾಜ, ಮಲ್ಲಪ್ಪ ಹವಳಿ, ಅಂದಪ್ಪ ಬೋಳರೆಡ್ಡಿ, ರಮೇಶ ಪೂಜಾರ ಮತ್ತಿತ್ತರರು ಹಾಜರಿದ್ದರು.

ಗಾಂಧಿ ಬಳಗದ ಜತೆಗೆ ಶಿಕ್ಷಕರ ಕಲಾಸಂಘ(ರಿ) ಕೊಪ್ಪಳ, ಅಶೋಕ ಸರ್ಕಲ್ ನಾಡಕ ತಂಡ ಕೊಪ್ಪಳ, ಕಲರವ ಶಿಕ್ಷಕರ ಸೇವಾ ಬಳಗ, ಗಾಂಧಿ ವಿಚಾರ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಜರುಗಿತು.