ಜಿಲ್ಲಾ ಮಟ್ಟಕ್ಕೆ ಬಸವರಾಜೇಂದ್ರ ಫ್ರೌಢಶಾಲೆಯ ವಿದ್ಯಾರ್ಥಿನಿಯರು ಆಯ್ಕೆ

| Published : Sep 10 2025, 01:03 AM IST

ಜಿಲ್ಲಾ ಮಟ್ಟಕ್ಕೆ ಬಸವರಾಜೇಂದ್ರ ಫ್ರೌಢಶಾಲೆಯ ವಿದ್ಯಾರ್ಥಿನಿಯರು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ತಾಲೂಕು ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟದಲ್ಲಿ ಹಳೇಬೀಡಿನ ಶ್ರೀ ಶೈಲ ಬಸವರಾಜೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅದರಲ್ಲಿ ೩ ವಿದ್ಯಾರ್ಥಿನಿಯರಾದ ನಯನ, ವಿನುತ, ಅಕ್ಷತಾ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವುದು ಸಂತೋಷ ವಿಚಾರ ಎಂದು ನಿವೃತ ದೈಹಿಕ ಶಿಕ್ಷಕರಾದ ಚಂದ್ರೇಗೌಡ ತಿಳಿಸಿದರು. ಬಾಲಕಿ ವಿಭಾಗದಲ್ಲಿ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನಗಳಿಸಿದ್ದರು. ತಾಲೂಕು ಮಟ್ಟಕ್ಕೆ ನಯನ, ವಿನುತಾ, ಅಕ್ಷತಾ, ಗುಣಶ್ರೀ ,ಸೌಮ್ಯ, ಯೋಗ, ಖುಷಿ, ರೇವತಿ, ಅಮೃತ ಆಯ್ಕೆಯಾಗಿದ್ದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಬೇಲೂರು ತಾಲೂಕು ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟದಲ್ಲಿ ಹಳೇಬೀಡಿನ ಶ್ರೀ ಶೈಲ ಬಸವರಾಜೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅದರಲ್ಲಿ ೩ ವಿದ್ಯಾರ್ಥಿನಿಯರಾದ ನಯನ, ವಿನುತ, ಅಕ್ಷತಾ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವುದು ಸಂತೋಷ ವಿಚಾರ ಎಂದು ನಿವೃತ ದೈಹಿಕ ಶಿಕ್ಷಕರಾದ ಚಂದ್ರೇಗೌಡ ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಈಶ್ವರಪ್ಪ ಮಾತನಾಡುತ್ತ, ನಮ್ಮ ಶಾಲೆ ಮಕ್ಕಳು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿ ವಿಭಾಗದಲ್ಲಿ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನಗಳಿಸಿದ್ದರು. ತಾಲೂಕು ಮಟ್ಟಕ್ಕೆ ನಯನ, ವಿನುತಾ, ಅಕ್ಷತಾ, ಗುಣಶ್ರೀ ,ಸೌಮ್ಯ, ಯೋಗ, ಖುಷಿ, ರೇವತಿ, ಅಮೃತ ಆಯ್ಕೆಯಾಗಿದ್ದರು. ಅದರಲ್ಲಿ ನಮ್ಮ ಶಾಲೆಯ ಮೂರು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ರಾಜ್ಯಮಟ್ಟಕ್ಕೆ ಆಯೆಯಾಗಲಿ ಎಂದು ಹಾರೈಸಿದರು.

ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯರು ದೂರವಾಣಿ ಮೂಲಕ ಮಧ್ಯಮದೊಂದಿಗೆ ಮಾತನಾಡಿ, ಶ್ರೀಶೈಲ ಬಸವರಾಜೇಂದ್ರ ಪ್ರೌಢಶಾಲೆಯ ಮೂರು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವುದಕ್ಕೆ ಅಭಿನಂದನೆಗಳು. ಅವರು ಹೆಚ್ಚು ತರಬೇತಿಯನ್ನು ಪಡೆದು ರಾಜ್ಯಮಟ್ಟ, ರಾಷ್ಟ್ರಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಲಿ ಎಂದು ಹಾರೈಸಿದರು.