ಎಪಿಎಂಸಿ ಅಧ್ಯಕ್ಷರಾಗಿ ಬಸವರಾಜು ಆಯ್ಕೆ

| Published : Mar 07 2024, 01:47 AM IST

ಸಾರಾಂಶ

ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ ಮುಖಂಡರಾದ ಮೊಳ್ಳಯ್ಯನಹುಂಡಿ ಬಸವರಾಜು, ಉಪಾಧ್ಯಕ್ಷರಾಗಿ ರಾಜು ಭರ್ಜರಿ ಗೆಲುವು ಸಾಧಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ ಮುಖಂಡರಾದ ಮೊಳ್ಳಯ್ಯನಹುಂಡಿ ಬಸವರಾಜು, ಉಪಾಧ್ಯಕ್ಷರಾಗಿ ರಾಜು ಭರ್ಜರಿ ಗೆಲುವು ಸಾಧಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ನಡೆದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮೊಳ್ಳಯ್ಯನ ಹುಂಡಿ ಬಸವರಾಜು, ಎಪಿಎಂಸಿ ನಿರ್ಗಮಿತ ಅಧ್ಯಕ್ಷ ಕೆ.ಎಸ್.ಶಿವಪ್ರಕಾಶ್‌, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ರಾಜು, ಬಿಜೆಪಿಯ ಅರಸಶೆಟ್ಟಿ ಚುನಾವಣಾಧಿಕಾರಿ ಟಿ.ರಮೇಶ್‌ ಬಾಬುಗೆ ನಾಮಪತ್ರ ಸಲ್ಲಿಸಿದರು. ಎಪಿಎಂಸಿ ಒಟ್ಟು ೧೬ ಮಂದಿ ಸದಸ್ಯರು (ನಾಮಿನಿ ಸದಸ್ಯರು ಸೇರಿ) ಮತದಾನ ಮಾಡಿದರು. ಮತ ಏಣಿಕೆ ನಡೆದಾಗ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಮೊಳ್ಳಯ್ಯನ ಹುಂಡಿ ಬಸವರಾಜುಗೆ ೧೦, ಬಿಜೆಪಿ ಬೆಂಬಲಿತ ಕೆ.ಎಸ್.ಶಿವಪ್ರಕಾಶ್‌ ೬ ಮತ ಪಡೆದು ನಾಲ್ಕು ಮತಗಳಿಂದ ಮೊಳ್ಳಯ್ಯನಹುಂಡಿ ಬಸವರಾಜು ಗೆಲುವು ಸಾಧಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ರಾಜುಗೆ ೧೦ ಮತ, ಅರಸಶೆಟ್ಟಿ ೬ ಮತ ಪಡೆದು, ಕಾಂಗ್ರೆಸ್‌ ರಾಜು ೪ ಮತಗಳಿಂದ ಗೆಲುವು ಸಾಧಿಸಿದರು. ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಶುಭ ಕೋರಿದ ಶಾಸಕ: ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಶುಭ ಕೋರಿ ಉತ್ತಮ ಆಡಳಿತ ನಡೆಸಿಎಂದರು. ಈ ವೇಳೆ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಬಿ.ಎಂ.ಮುನಿರಾಜು, ಜಿಪಂ ಮಾಜಿ ಉಫಾಧ್ಯಕ್ಷ ಕೆ.ಎಸ್.ಮಹೇಶ್‌, ಪಿ.ಮಹದೇವಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮೃತ್ಯುಂಜಯ, ಕರಕಲಮಾದಹಳ್ಳಿ ಪ್ರಭು, ಬೆಂಡಗಳ್ಳಿ ಮಾದಪ್ಪ, ಹೊಂಗಳ್ಳಿ ನಾಗರಾಜು, ಎಚ್.ಆರ್.ಕುಮಾರ್‌, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಎಪಿಎಂಸಿ ಸದಸ್ಯ ಆರ್.ಎಸ್.ನಾಗರಾಜು, ಮುಖಂಡರಾದ ಮಂಚಹಳ್ಳಿ ಲೋಕೇಶ್‌, ಟಿ.ಪಿ.ನಾಗರಾಜು, ಎಚ್.ಎನ್.ನಟೇಶ್‌,ಕಬ್ಬಹಳ್ಳಿ ದೀಪು,ವೀರನಪುರ ಗುರುಪ್ರಸಾದ್‌, ಶಿವಪುರ ಮಂಜಪ್ಪ, ಮಡಹಳ್ಳಿ ಮಣಿ, ಗೋಪಾಲಪುರ ಲೋಕೇಶ್‌, ಹೊರೆಯಾಲ ಶರತ್‌ ಹಾಗೂ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.