ಬಸವೇಶ್ವರ ಕಂಚಿನ ಪುತ್ಥಳಿ ಭವ್ಯ ಮೆರವಣಿಗೆ

| Published : Nov 11 2023, 01:18 AM IST

ಸಾರಾಂಶ

ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು ಹಾಗೂ ಸಾರೋಟದಲ್ಲಿ ಸಾಹಿತಿ ರಾಘವೇಂದ್ರ ದಂಡಿನ್ ಬಸವೇಶ್ವರ ವೇಷದಲ್ಲಿ ಗಮನ ಸೆಳೆದರು. 25ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಶಿವಶರಣರ ಸ್ತಬ್ಧಚಿತ್ರ ಮತ್ತು ಆಟೋಗಳಲ್ಲೂ ಬಸವಾದಿ ಪ್ರಮುಖರ ಭಾವಚಿತ್ರಗಳು ಆಕರ್ಷಿಸುತ್ತಿದ್ದವು. ಕದಳಿ ಮಹಿಳಾ ವೇದಿಕೆ ಸೇರಿದಂತೆ ವಿವಿಧ ಮಹಿಳಾ ಮಂಡಳದ ಪದಾಧಿಕಾರಿಗಳು ತಮ್ಮ ತಲೆಯ ಮೇಲೆ ಬಸವಣ್ಣನವರ ವಚನ ಗ್ರಂಥಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ಕನ್ನಡಪ್ರಭ ವಾರ್ತೆ ಗಂಗಾವತಿ

ನಗರದ ಶ್ರೀಕೃಷ್ಣದೇವರಾಯ ವೃತ್ತದ ಬಳಿ ಜಗಜ್ಯೋತಿ ಬಸವೇಶ್ವರ ಅಶ್ವಾರೂಢ ಕಂಚಿನ ಪುತ್ಥಳಿ ಅನಾವರಣ ಅಂಗವಾಗಿ ನಗರದಲ್ಲಿ ಬಸವೇಶ್ವರ ಅಶ್ವಾರೂಢ ಪುತ್ಥಳಿಯ ಭವ್ಯ ಮೆರವಣಿಗೆ ಜರುಗಿತು.ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಪ್ರಾರಂಭಗೊಂಡ ಮೆರವಣಿಗೆ ಸಿಬಿಎಸ್ ವೃತ್ತ, ಮಹಾವೀರ ವೃತ್ತ, ಗಾಂಧಿ ವೃತ್ತ, ಬಸವಣ್ಣ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗದ ಮೂಲಕ ಶ್ರೀಕೃಷ್ಣದೇವರಾಯ ವೃತ್ತದ ಬರ್ಯ ನೆಹರೂ ಪಾರ್ಕ್ ವರೆಗೂ ಮೆರವಣಿಗೆ ಜರುಗಿತು.

ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು ಹಾಗೂ ಸಾರೋಟದಲ್ಲಿ ಸಾಹಿತಿ ರಾಘವೇಂದ್ರ ದಂಡಿನ್ ಬಸವೇಶ್ವರ ವೇಷದಲ್ಲಿ ಗಮನ ಸೆಳೆದರು. 25ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಶಿವಶರಣರ ಸ್ತಬ್ಧಚಿತ್ರ ಮತ್ತು ಆಟೋಗಳಲ್ಲೂ ಬಸವಾದಿ ಪ್ರಮುಖರ ಭಾವಚಿತ್ರಗಳು ಆಕರ್ಷಿಸುತ್ತಿದ್ದವು. ಕದಳಿ ಮಹಿಳಾ ವೇದಿಕೆ ಸೇರಿದಂತೆ ವಿವಿಧ ಮಹಿಳಾ ಮಂಡಳದ ಪದಾಧಿಕಾರಿಗಳು ತಮ್ಮ ತಲೆಯ ಮೇಲೆ ಬಸವಣ್ಣನವರ ವಚನ ಗ್ರಂಥಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ಮೆರವಣಿಗೆ ಮಾರ್ಗದಲ್ಲಿ ಬ್ರಾಹ್ಮಣ, ಮಾರವಾಡಿ ಸಮಾಜ ಸೇರಿದಂತೆ ವಿವಿಧ ಸಮಾಜದವರು ತಂಪು-ಪಾನೀಯ ವಿತರಿಸಿದರು. ಮೆರವಣಿಗೆಯಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ, ಮಹಾಲಿಂಗಪ್ಪ ಬನ್ನಿಕೊಪ್ಪ, ರಾಚಪ್ಪ ಸಿದ್ದಾಪುರ, ಎ.ಕೆ. ಮಹೇಶಕುಮಾರ, ಕದಳಿ ಮಹಿಳಾ ವೇದಿಕೆ ಅದ್ಯಕ್ಷ ಸಿ.ಮಹಾಲಕ್ಷ್ಮೀ, ಶ್ರೀದೇವಿ ಕೃಷ್ಣಪ್ಪ, ಮಾಲಾ ಶ್ರೀಧರ, ನೀಲಾ ಮಲ್ಲಿಕಾರ್ಜುನ ಚೆಕೋಟಿ, ಸತೀಶ ಅಂಗಡಿ, ಮಹೇಶ ಬಾಳೆಕಾಯಿ, ಆನಂದ ಅಕ್ಕಿ, ಸಂಗಮೇಶ ಕೋಟೆ, ಮಂಜಾಥ ಮಸ್ಕಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.