ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಹಾಸನ ಮತ್ತು ಮಂಡ್ಯ ಜಿಲ್ಲೆಯ ಗಡಿ ಗ್ರಾಮವಾದ ಮಂಡ್ಯ ಜಿಲ್ಲೆ ಕೆ. ಆರ್. ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ತೊಳಸಿ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಬಸವೇಶ್ವರ ದೇವಸ್ಥಾನ ಉದ್ಘಾಟನೆಯಲ್ಲಿ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಪಾಲ್ಗೊಂಡಿದ್ದರು.ಶ್ರೀ ಬಸವೇಶ್ವರ ಸ್ವಾಮಿ ದೇವರ ದರ್ಶನ ಪಡೆದು ಮಾತನಾಡಿದ ಅವರು, ಪ್ರತಿಯೊಂದು ಗ್ರಾಮದಲ್ಲೂ ಸಹ ಪ್ರೀತಿ ಸೋದರತ್ವದಿಂದ ಬಾಳ್ಮೆ ಮಾಡಬೇಕು, ಎಲ್ಲ ಗ್ರಾಮಸ್ಥರು ಒಂದೇ ಎಂಬ ಭಾವನೆಯಿಂದ ಸಹಜೀವನನ್ನ ಮಾಡಬೇಕು, ಇಂತಹ ಐತಿಹಾಸಿಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿಕೊಂಡು ಎಲ್ಲಾ ಗ್ರಾಮಸ್ಥರು ಒಗ್ಗಟ್ಟಿನಿಂದ ಸ್ನೇಹಮಯಿ ಜೀವನವನ್ನು ನಡೆಸಬೇಕೆಂದು ಸಲಹೆ ನೀಡಿದರು.ನಮ್ಮ ಕಾಂಗ್ರೆಸ್ ಸರ್ಕಾರವು ಯಾವುದೇ ತರಹದ ಪಕ್ಷಾಭೇದ ಜಾತಿಭೇದ ಮಾಡದೆ ಪ್ರತಿಯೊಂದು ಮನೆಗೂ ಐದು ಗ್ಯಾರಂಟಿಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ನಮ್ಮ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಸರ್ವರಿಗೂ ಅನುಕೂಲವಾಗುವ ಪಂಚ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಬಡವರ ಪರವಾಗಿದ್ದೇವೆ ಎಂಬುದನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ನುಡಿದರು. ತುಳಸಿ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಬಸವೇಶ್ವರ ಸ್ವಾಮಿಯ ದೇವಸ್ಥಾನವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಿರುವ ತೊಳಸಿ ಗ್ರಾಮದ ಹಿರಿಯ ಮತ್ತು ಕಿರಿಯ ಮುಖಂಡರಿಗೆ ಹಾಗೂ ಸಮಸ್ತ ಸಹೋದರಿಯರು, ತಾಯಂದಿರಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುವುದಾಗಿ ಹೇಳಿದರು.ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ ಬಿ ಚಂದ್ರಶೇಖರ್, ಬಿ ಪ್ರಕಾಶ್, ಮಂಡ್ಯ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಸಿ ಡಿ ಗಂಗಾಧರ್, ಕೆಪಿಸಿಸಿ ಸದಸ್ಯರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಮನ್‌ಮುಲ್ ನಿರ್ದೇಶಕರಾದ ಎಂ ಬಿ ಹರೀಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್ ಅಂಬರೀಶ್, ಮಂಡ್ಯ ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ರಾಮಕೃಷ್ಣೇಗೌಡ, ತೊಳಸಿ ಗ್ರಾಮದ ಮುಖಂಡರುಗಳಾದ ಅಂಗಡಿ ಮಂಜೇಗೌಡ, ಗಂಗಾಧರ್, ಕುಂಟಣ್ಣ ನಿಂಗರಾಜು, ಅಂಗಡಿ ನಿಂಗರಾಜೇಗೌಡ, ಬಾಂಬೆ ರಾಮಣ್ಣ, ಕೊಣಪ್ಪನ ರಾಮಣ್ಣ, ಮರಿಯಣ್ಣ ರಾಮಣ್ಣ, ಜವರಯ್ಯ, ಎಂಜಿನಿಯರ್ ಮಂಜಪ್ಪ, ಚಂದ್ರೇಗೌಡ, ಕರಿಯಪ್ಪ, ಈರಪ್ಪ, ಅಂಗಡಿ ಪಾಪಣ್ಣ, ಮರಿ ಕಾಳಪ್ಪನ ನಾಗಣ್ಣ,ಗಿರೀಶ್, ಬಸವೇಗೌಡ, ಡೈರಿ ಲೋಕೇಶ್,ಉಮೇಶ್, ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ತೊಳಸಿ ರಮೇಶ್, ನರ್ಸರಿ ಚಂದ್ರಣ್ಣ,ಗಿರೀಶ್,ರಮೇಶ್, ಚಿಕ್ಕಯ್ಯನ ಸೋಮಣ್ಣ, ಉತ್ತರ ದೇವೇಗೌಡ, ಮಂಜುನಾಥ್ ಮಾಸ್ಟರ್, ಮಲ್ಲಿಕ್ ಮಾಸ್ಟರ್ , ಗಿರಿಜಾ ಮೇಡಂ, ತುಳಸಿ ಗ್ರಾಮದ ಯುವ ಮುಖಂಡರಾದ ಉಮೇಶ್,ಪ್ರತಾಪ್,ಕಿರಣ್,ಸ್ವಾಮಿ,ಮರಿಕಾಳಪ್ಪನ ನಾಗಣ್ಣ,ಕುಮಟೆ ಕುಮಾರ್, ಅಂಬರೀಶ್, ಉತ್ತರ ಅಶೋಕ, ಅಭಿ,ಸ್ವಾಮಿ, ಕಾಳೇಗೌಡ, ಪ್ರದೀಪ್, ಬಲರಾಮ,ರಾಮಚಂದ್ರು, ಶಿವಕುಮಾರ್, ಸ್ವಾಮಿ, ಅನಿಲ್, ಸ್ವಾಮಿ, ಸೇರಿದಂತೆ ತೊಳಸಿ ಗ್ರಾಮಸ್ಥರು, ಐಕನಹಳ್ಳಿ ಗ್ರಾಮಸ್ಥರು, ಐಕನಹಳ್ಳಿ ಫಾರಂಹೌಸ್ ಗ್ರಾಮಸ್ಥರು, ಐಕನಹಳ್ಳಿಕೊಪ್ಪಲು ಗ್ರಾಮಸ್ಥರು, ಅಂಕನಹಳ್ಳಿ ಗ್ರಾಮಸ್ಥರು ಸೇರಿದಂತೆ ಇತರರು ಹಾಜರಿದ್ದರು.ತೊಳಸಿಯಲ್ಲಿ ಬಸವೇಶ್ವರ ದೇವಾಲಯ ಉದ್ಘಾಟನೆ
ಹಾಸನ ಮತ್ತು ಮಂಡ್ಯ ಜಿಲ್ಲೆಯ ಗಡಿ ಗ್ರಾಮವಾದ ಮಂಡ್ಯ ಜಿಲ್ಲೆ ಕೆ. ಆರ್. ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ತೊಳಸಿ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಬಸವೇಶ್ವರ ದೇವಸ್ಥಾನ ಉದ್ಘಾಟನೆಯಲ್ಲಿ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಪಾಲ್ಗೊಂಡಿದ್ದರು. ಎಲ್ಲ ಗ್ರಾಮಸ್ಥರು ಒಂದೇ ಎಂಬ ಭಾವನೆಯಿಂದ ಸಹಜೀವನನ್ನ ಮಾಡಬೇಕು, ಇಂತಹ ಐತಿಹಾಸಿಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿಕೊಂಡು ಎಲ್ಲಾ ಗ್ರಾಮಸ್ಥರು ಒಗ್ಗಟ್ಟಿನಿಂದ ಸ್ನೇಹಮಯಿ ಜೀವನವನ್ನು ನಡೆಸಬೇಕೆಂದು ಸಲಹೆ ನೀಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.